ಬುಧವಾರ, ಜನವರಿ 27, 2021
16 °C

ವೆಂಕಟೇಶ್ ಕುಮಾರ್‌ಗೆ ‘ನಿರ್ಮಾಣ್‌ ಪುರಂದರ ರತ್ನ ಪ್ರಶಸ್ತಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ವೀಯೆಲ್ಲೆನ್‌–ನಿರ್ಮಾಣ್ ಪುರಂದರ ಪ್ರತಿಷ್ಠಾನ ಕೊಡಮಾಡುವ ‘ನಿರ್ಮಾಣ್‌–ಪುರಂದರ ಸಂಗೀತ ರತ್ನ ಪ್ರಶಸ್ತಿ’ಗೆ ಪಂಡಿತ್ ಎಂ.ವೆಂಕಟೇಶ್ ಕುಮಾರ್ ಆಯ್ಕೆಯಾಗಿದ್ದಾರೆ.

ಪ್ರತಿಷ್ಠಾನದಿಂದ ಕೊಡಮಾಡುತ್ತಿರುವ 12ನೇ ವರ್ಷದ ಪ್ರಶಸ್ತಿ ಇದಾಗಿದೆ. ಪ್ರಶಸ್ತಿಯು ₹ 1 ಲಕ್ಷದ ಒಂದು ನಗದು ಹಾಗೂ ಪುರಂದರದಾಸರ ಚಿತ್ರವಿರುವ ಸುವರ್ಣ ಫಲಕವನ್ನೊಳಗೊಂಡ ಸ್ವರ್ಣಹಾರವನ್ನು ಒಳಗೊಂಡಿದೆ.

ಫೆಬ್ರವರಿ 14 ರಂದು ಸಂಜೆ 6 ಗಂಟೆಗೆ ಬನ್ನೇರುಘಟ್ಟದ ನಿಸರ್ಗ ಬಡಾವಣೆಯ ಪುರಂದರ ಮಂಟಪದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿದೆ. ಪ್ರತಿಷ್ಠಾನವು 2010 ರಿಂದ ಈ ಪ್ರಶಸ್ತಿಯನ್ನು ನೀಡುತ್ತಿದೆ ಎಂದು ವ್ಯವಸ್ಥಾಪಕ ವಿಶ್ವಸ್ಥ ವಿ.ಲಕ್ಷ್ಮೀನಾರಾಯಣ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು