ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಂ ಕಿಸಾನ್ ಸಮ್ಮಾನ್: ರಾಜ್ಯಕ್ಕೆ ₹ 685.28 ಕೋಟಿ

Last Updated 1 ಜನವರಿ 2022, 17:36 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಬಿಡುಗಡೆಯಾದ 10ನೇ ಕಂತಿನಲ್ಲಿ ರಾಜ್ಯದ ಒಟ್ಟು 34,26,401 ರೈತರಿಗೆ ₹ 685.28 ಕೋಟಿ ಬಿಡುಗಡೆಯಾಗಿದೆ.

ಆ ಮೂಲಕ, ಈ ಯೋಜನೆಯಡಿ ಈವರೆಗೆ (2019ರ ಫೆ.1ರಿಂದ 2021ರ ಜ. 1) ರಾಜ್ಯದ 54.52 ಲಕ್ಷ ರೈತ ಕುಟುಂಬಗಳಿಗೆ ಕಿಸಾನ್ ಸಮ್ಮಾನ್ ಯೋಜನೆಯ ನೆರವು ಸಿಕ್ಕಿದೆ.

ಈ ಯೋಜನೆಯಡಿ ಅನುದಾನವನ್ನು ₹ 2 ಸಾವಿರದಂತೆ ನಾಲ್ಕು ತಿಂಗಳಿಗೊಮ್ಮೆ ಮೂರು ಕಂತುಗಳಲ್ಲಿ ವಾರ್ಷಿಕ ₹ 6 ಸಾವಿರ ಆರ್ಥಿಕ ನೆರವನ್ನು ಅರ್ಹ ರೈತರ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ ನೀಡಲಾಗುತ್ತಿದೆ.

ಕೇಂದ್ರ ಸರ್ಕಾರ ತಲಾ ರೈತರಿಗೆ ₹6 ಸಾವಿರ ನೀಡುತ್ತಿದೆ. ಇದಕ್ಕೆ ₹4 ಸಾವಿರ ಸೇರಿಸುತ್ತಿರುವ ಕರ್ನಾಟಕ ಸರ್ಕಾರ ಒಟ್ಟು ₹10 ಸಾವಿರ ಸಿಗುವಂತೆ ಮಾಡಿದೆ. ಈ ಆರ್ಥಿಕ ವರ್ಷದ ಎರಡನೇ ಕಂತಿನ ನೆರವಿಗಾಗಿ ರಾಜ್ಯ ಸರ್ಕಾರ ₹1007.18 ಕೋಟಿ ರೂ. ಬಿಡುಗಡೆ ಮಾಡಿದ್ದು, ರೈತರ ಖಾತೆಗೆ ವರ್ಗಾವಣೆ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಈ ಯೋಜನೆಯಡಿ ಕೇಂದ್ರ ಸರ್ಕಾರವು ಒಟ್ಟು ₹ 8,022.69 ಕೋಟಿ ಬಿಡುಗಡೆ ಮಾಡಿದ್ದು, ರಾಜ್ಯ ಸರ್ಕಾರವು ₹2,850.54 ಕೋಟಿ ಬಿಡುಗಡೆ ಮಾಡಿದೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT