ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೇವ್ ಪಾರ್ಟಿ: 130 ಮಂದಿ ಬಂಧನ- ಮಾದಕ ಪದಾರ್ಥಗಳು, ಐಷಾರಾಮಿ ವಾಹನಗಳು ವಶಕ್ಕೆ

ಮಾದಕ ಪದಾರ್ಥಗಳು, ಐಷಾರಾಮಿ ವಾಹನಗಳು ವಶಕ್ಕೆ
Last Updated 11 ಏಪ್ರಿಲ್ 2021, 20:24 IST
ಅಕ್ಷರ ಗಾತ್ರ

ಆಲೂರು (ಹಾಸನ ಜಿಲ್ಲೆ): ಇಲ್ಲಿನ ನಂದಿಪುರ ಎಸ್ಟೇಟ್‌ನಲ್ಲಿ ಶನಿವಾರ ರಾತ್ರಿನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ದಾಳಿ ನಡೆಸಿ 130 ಯುವಕ–ಯುವತಿಯರನ್ನು ಬಂಧಿಸಲಾಗಿದೆ.

ಎಸ್ಟೇಟ್‌ನ ಮೋಟಾರ್ ಸೈಕಲ್ ರೆಸಾರ್ಟ್‍ನಲ್ಲಿ ನಡೆಯುತ್ತಿದ್ದ ಪಾರ್ಟಿಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯ ಹಾಗೂ ಹೊರ ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದವರು ಭಾಗವಹಿಸಿದ್ದರು. ಬೆಂಗಳೂರಿನಲ್ಲಿ ರಾತ್ರಿ ಕರ್ಫ್ಯೂ ಜಾರಿ ಮಾಡಿದ್ದರಿಂದ ಕೆಲವರು ವಾಹನಗಳ ಮೇಲೆ ‘ತುರ್ತು ಸೇವೆ’ ಎಂದು ಹಾಕಿಕೊಂಡು ಬಂದಿದ್ದರು.

ಮದ್ಯಪಾನ, ಗಾಂಜಾ ಸೇವನೆಯೊಂದಿಗೆ ಡಿ.ಜೆ ಸೌಂಡ್ ಸಿಸ್ಟಂ ಬಳಸಿ ಪಾರ್ಟಿ ನಡೆಯುತ್ತಿರುವ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ, ಸ್ಥಳದಲ್ಲಿದ್ದವರನ್ನು ಬಂಧಿಸಿದರು. ಐಷಾರಾಮಿ ಕಾರು ಮತ್ತು ಬೈಕ್‌ಗಳನ್ನು ವಶಕ್ಕೆ ಪಡೆದರು.

‘ಅಲ್ಪ ಪ್ರಮಾಣದ ಗಾಂಜಾ, ಅಫೀಮು ಹಾಗೂ ಮದ್ಯ ವಶಪಡಿಸಿಕೊಳ್ಳಲಾಗಿದೆ. ಗೋವಾ, ಕೇರಳ, ಮಂಗಳೂರು, ಬೆಂಗಳೂರಿನಿಂದ ಬಂದಿರುವ ಯುವಕರು ಪಾರ್ಟಿಯಲ್ಲಿದ್ದರು. ಪ್ರತಿಯೊಬ್ಬರ ರಕ್ತ ಪರೀಕ್ಷೆ ಮಾಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಕಾರ್ಯಕ್ರಮ ಆಯೋಜಕರು ನಾಪತ್ತೆಯಾಗಿದ್ದು, ಎಸ್ಟೇಟ್‌ ಮಾಲೀಕ ಗಗನ್‌ ಅವರನ್ನು ಬಂಧಿಸಲಾಗಿದೆ.ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಂಡವರಿಂದ ಶುಲ್ಕ ಸಂಗ್ರಹಿಸಿ,ಪಾರ್ಟಿ ನಡೆಯುವ ಜಾಗದ ಮಾಹಿತಿಯನ್ನು (ಲೊಕೇಶನ್‌) ಮಾತ್ರ ಶೇರ್‌ ಮಾಡಲಾಗಿತ್ತು ಪಾರ್ಟಿಯಲ್ಲಿ ದಂಪತಿ,ಯುವಕರು, ಯುವತಿಯರು ಪಾಲ್ಗೊಂಡಿದ್ದರು.ಕೋವಿಡ್ ನಿಯಮ ಉಲ್ಲಂಘನೆ, ಅಬಕಾರಿ ನಿಯಮದ ಅನುಸಾರವಾಗಿ ಪ್ರಕರಣ ದಾಖಲಿಸಲಾಗುವುದು’ ಎಂದುಎಸ್ಪಿ ಶ್ರೀನಿವಾಸಗೌಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT