ಗುರುವಾರ , ಜೂನ್ 24, 2021
21 °C

ಕೋವಿಡ್: ಖಾಸಗಿ ಆಂಬುಲೆನ್ಸ್‌ ಸೇವೆಗೆ ದರ ನಿಗದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್‌ ಕಾರ್ಯಾಚರಣೆ ನಡೆಸುತ್ತಿರುವ ಖಾಸಗಿ ಆಂಬುಲೆನ್ಸ್‌ಗಳ ಸೇವೆಗೆ ಸರ್ಕಾರವು ದರ ನಿಗದಿ ಮಾಡಿದ್ದು, 10 ಕಿ.ಮೀ.ವರೆಗಿನ ಸಂಚಾರಕ್ಕೆ ₹ 1,500 ನಿಗದಿಪಡಿಸಲಾಗಿದೆ.

ಕೋವಿಡ್ ಕಾಯಿಲೆ ಕಾಣಿಸಿಕೊಂಡ ಬಳಿಕ ಆಂಬುಲೆನ್ಸ್‌ಗಳಿಗೆ ಬೇಡಿಕೆ ಹೆಚ್ಚಿದೆ. ಕೆಲವು ಆಂಬುಲೆನ್ಸ್‌ ಸೇವೆ ಪೂರೈಕೆದಾರರು ಸೋಂಕಿತರಿಂದ ಅಧಿಕ ಹಣವನ್ನು ಸುಲಿಗೆ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಹೀಗಾಗಿ, ಸರ್ಕಾರವು ಸಾರಿಗೆ ಆಯುಕ್ತರಿಂದ ವಿವಿಧ ವೆಚ್ಚಗಳ ಬಗ್ಗೆ ವರದಿ ಪಡೆದು, ಆದೇಶ ಹೊರಡಿಸಿದೆ.

10 ಕಿ.ಮೀ. ನಂತರದ ಬಳಿಕ ಪ್ರತಿ ಕಿ.ಮೀ.ಗೆ ₹ 120 ನಿಗದಿ ಮಾಡಲಾಗಿದೆ. ಪ್ರತಿ ಗಂಟೆಗೆ ₹ 200 ಕಾಯುವ ಶುಲ್ಕ ಗೊತ್ತುಪಡಿಸಲಾಗಿದೆ. ಈ ದರವು ರೋಗಿಯನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಕರೆದೊಯ್ಯುವ ಆಂಬುಲೆನ್ಸ್‌ಗಳಿಗೆ ಅನ್ವಯವಾಗಲಿದೆ.

ಜೀವ ರಕ್ಷಕ ವ್ಯವಸ್ಥೆ (ಲೈಫ್ ಸಪೋರ್ಟ್) ಹೊಂದಿರುವ ಆಂಬುಲೆನ್ಸ್‌ಗಳಿಗೆ 10 ಕಿ.ಮೀ ಒಳಗಡೆಯ ಸಂಚಾರಕ್ಕೆ ₹ 2 ಸಾವಿರ ಹಾಗೂ ನಂತರ ಪ್ರತಿ ಕಿ.ಮೀ.ಗೆ ₹ 120 ನಿಗದಿಪಡಿಸಲಾಗಿದೆ. ಕಾಯುವ ಶುಲ್ಕ ₹ 250 ಗೊತ್ತುಪಡಿಸಲಾಗಿದೆ. ಈ ದರವು ವೈಯಕ್ತಿಕ ಸುರಕ್ಷಾ ಸಾಧನಗಳ ಬಳಕೆ, ವೈದ್ಯಕೀಯ ಆಮ್ಲಜನಕ, ಸಲಕರಣೆಗಳು ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒಳಗೊಂಡಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು