ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಭಾರಿ ಮಳೆ ಕಾರಣಕ್ಕೆ ಟೊಮೆಟೊ, ಬೀನ್ಸ್‌ ದರ ಏರಿಕೆ

ಮಳೆಯಿಂದ ಆವಕ ಕುಸಿತ
Last Updated 10 ಮೇ 2022, 4:38 IST
ಅಕ್ಷರ ಗಾತ್ರ

ಬೆಂಗಳೂರು: ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಟೊಮೆಟೊ, ಬೀನ್ಸ್‌ ಸೇರಿದಂತೆ ಕೆಲ ತರಕಾರಿಗಳ ದರ ದಿಢೀರ್ ಏರಿದೆ.

ಎರಡು ವಾರಗಳ ಹಿಂದೆ ಟೊಮೆಟೊ ದರ ಕೆ.ಜಿ.ಗೆ ₹ 20ರಷ್ಟಿತ್ತು. ಗಣನೀಯ ಏರಿಕೆ ಕಂಡಿರುವ ಟೊಮೆಟೊ ಸದ್ಯ ₹ 60ರಿಂದ ₹ 70ರವರೆಗೆ ಮಾರಾಟವಾಗುತ್ತಿದೆ. ಬೀನ್ಸ್‌ ದರವೂ ಏರಿದ್ದು, ಕೆ.ಜಿ.ಗೆ ₹ 80ರಂತೆ ಸೋಮವಾರ ಮಾರಾಟವಾಗಿದೆ.

ಸುಮಾರು ಎರಡು ತಿಂಗಳಿನಿಂದ ಏರುಗತಿಯಲ್ಲೇ ಇದ್ದ ಹಸಿಮೆಣಸಿನಕಾಯಿ ದರ ₹ 40ಕ್ಕೆ ಕುಸಿದಿದೆ. ದಪ್ಪ ಮೆಣಸಿನಕಾಯಿ (ಕ್ಯಾಪ್ಸಿಕಂ) ₹ 50ರಂತೆ ಮಾರಾಟವಾಗುತ್ತಿದೆ.

ಬೆಳ್ಳುಳ್ಳಿ, ಶುಂಠಿ ₹ 50ರ ಗಡಿ ದಾಟಿವೆ. ಬದನೆ, ಬೀಟ್‌ರೂಟ್‌, ಕ್ಯಾರೆಟ್, ಎಲೆಕೋಸು, ಬೆಂಡೆ, ತೊಂಡೆಕಾಯಿ, ಆಲೂಗೆಡ್ಡೆ, ಮೂಲಂಗಿ, ಈರುಳ್ಳಿ ದರಗಳೆಲ್ಲ ₹ 30ರ ಆಸುಪಾಸಿನಲ್ಲಿವೆ.

‘ಇತ್ತೀಚೆಗೆ ಸುರಿದ ಭಾರಿ ಮಳೆಗೆ ಟೊಮೆಟೊ ಮತ್ತು ಬೀನ್ಸ್‌ ಬೆಳೆಗಳಿಗೆ ಹಾನಿಯಾಗಿದೆ. ಇದರಿಂದಾಗಿ ಟೊಮೆಟೊ ಮತ್ತು ಬೀನ್ಸ್‌ ದರ ದಿಢೀರ್ ಏರಿಕೆಯಾಗಿದೆ. ನಗರದ ವಿವಿಧ ಬಡಾವಣೆಗಳಲ್ಲಿರುವ ಚಿಲ್ಲರೆ ವ್ಯಾಪಾರಿಗಳು ಕೆ.ಜಿ. ಟೊಮೆಟೊ ₹80ರವೆರೆಗೆ ಮಾರಾಟ ಮಾಡುತ್ತಿದ್ದಾರೆ. ಇನ್ನೂ ಒಂದು ತಿಂಗಳು ಬೆಲೆ ಏರಿಕೆ ಮುಂದುವರಿಯುವ ಸಾಧ್ಯತೆ ಇದೆ’ ಎಂದು ಎಪಿಎಂಸಿ ಮಾರುಕಟ್ಟೆಯ ತರಕಾರಿ ವರ್ತಕ ಕುಮಾರ್ ಹೇಳಿದರು.

ಸೊಪ್ಪಿನ ದರ ಏರುಪೇರು
ಮೆಂತ್ಯ ಸೊಪ್ಪು ದುಬಾರಿಯಾಗಿದ್ದು, ಪ್ರತಿ ಕಟ್ಟಿಗೆ ₹35ರವರೆಗೆ ಏರಿದೆ. ಕೊತ್ತಂಬರಿ, ಸಬ್ಬಕ್ಕಿ ₹20 ಹಾಗೂ ದಂಟು, ಪಾಲಕ್‌ ₹15ರಂತೆ ಮಾರಾಟವಾಗುತ್ತಿವೆ. ಬೇಸಿಗೆ ಇರುವುದರಿಂದ ಹಣ್ಣಿನ ದರಗಳೆಲ್ಲ ತಿಂಗಳಿನಿಂದಲೂ ಏರಿವೆ. ಮಾವಿನ ಅವಧಿ ಆರಂಭವಾಗಿರುವುದರಿಂದ 10ಕ್ಕೂ ಹೆಚ್ಚು ತಳಿಯ ಮಾವು ಮಾರುಕಟ್ಟೆಗಳಿಗೆ ಲಗ್ಗೆ ಇಟ್ಟಿವೆ. ಮಾವಿಗೆ ₹ 80ರಿಂದ ₹ 220ರವರೆಗೆ ಬೆಲೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT