ಗುರುವಾರ , ಡಿಸೆಂಬರ್ 8, 2022
18 °C
ಜಾಮೀನು ಕೋರಿದ ಆರೋಪಿಗಳು

ಅತ್ಯಾಚಾರ ಪ್ರಕರಣ: ‘ಹನಿಟ್ರ್ಯಾಪ್’ ಆಯಾಮದಿಂದ ತನಿಖೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅತ್ಯಾಚಾರ ಪ್ರಕರಣದ ಆರೋಪಿಯೂ ಆದ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಅವರ ಹೇಳಿಕೆ ಹೊಸ ತಿರುವು ನೀಡಿದ್ದು, ಎಸ್‌ಐಟಿ ಅಧಿಕಾರಿಗಳು ಈಗ ‘ಹನಿಟ್ರ್ಯಾಪ್’ ಆಯಾಮದಲ್ಲಿ ತನಿಖೆ ಕೈಗೊಂಡಿದ್ದಾರೆ.

‘ವಿಡಿಯೊ ಸೃಷ್ಟಿಸಿ ಷಡ್ಯಂತ್ರ ಮಾಡಿ ಬ್ಲ್ಯಾಕ್‌ಮೇಲ್ ಮಾಡಲಾಗಿತ್ತು’ ಎಂದು ರಮೇಶ ಜಾರಕಿಹೊಳಿ ಸದಾಶಿವನಗರ ಠಾಣೆಗೆ ದೂರು ನೀಡಿದ್ದರು. ಇದನ್ನೇ ಕೇಂದ್ರವಾಗಿಟ್ಟುಕೊಂಡು ಎಸ್‌ಐಟಿ ಆಧಿಕಾರಿಗಳು, ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ.

ಪ್ರಕರಣದ ಆರೋಪಿಗಳು ಎನ್ನಲಾದ ನರೇಶ್ ಗೌಡ ಹಾಗೂ ಶ್ರವಣ, ನಿರೀಕ್ಷಣಾ ಜಾಮೀನು ಕೋರಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಮೇ 29ಕ್ಕೆ ವಿಚಾರಣೆಗೆ ಬರಲಿದೆ.

‘ಈಗ ಯಾವ ಕ್ರಮ ಕೈಗೊಳ್ಳಬೇಕೆಂದುತಿಳಿಯಲು ಅಧಿಕಾರಿಗಳು ಕಾನೂನು ತಜ್ಞರ ಮೊರೆ ಹೋಗಿದ್ದಾರೆ. ‘ಇದು ಸೂಕ್ಷ್ಮ ಪ್ರಕರಣ. ಹೈಕೋರ್ಟ್‌ನಲ್ಲೂ ಮೊಕದ್ದಮೆ ಇದೆ. ತನಿಖಾ ವರದಿ ಸಲ್ಲಿಸಿ ಹೈಕೋರ್ಟ್‌ನ ನಿರ್ದೇಶನದಂತೆ ತನಿಖೆ ಮುಂದುವರಿಸಲಾಗುವುದು’ ಎಂದು ಎಸ್‌ಐಟಿ ಮೂಲಗಳು ಹೇಳಿವೆ.

‘ವಿಡಿಯೊ ಕಳಿಸಿ ಹಣ ಕೇಳಿದ್ದ ಸಂತ್ರಸ್ತೆ’
’ಲೈಂಗಿಕ ಸಂಪರ್ಕದ ವಿಡಿಯೊವನ್ನು ಯುವತಿಯೇ ಚಿತ್ರೀಕರಿಸಿಟ್ಟುಕೊಂಡಿದ್ದರು. ಅದನ್ನೇ ರಮೇಶ ಜಾರಕಿಹೊಳಿ ಅವರಿಗೂ ಕಳುಹಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈಗಾಗಲೇ ಕೊಟ್ಟಿದ್ದೇನೆ, ಪುನಃ ಹಣ ಕೊಡುವುದಿಲ್ಲ ಎಂದು ರಮೇಶ ತಿಳಿಸಿದ್ದರು. ಆ ನಂತರ ವಿಡಿಯೊ ಬಹಿರಂಗವಾಗಿದೆ. ಷಡ್ಯಂತ್ರದಲ್ಲಿ ಯುವತಿ ಭಾಗಿಯಾಗಿದ್ದಾರೆ ಎಂದು ರಮೇಶ ಹೇಳಿಕೆ ನೀಡಿದ್ದಾರೆ’ ಎಂದು ಎಸ್‌ಐಟಿ ಮೂಲಗಳು ಹೇಳಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು