ಶುಕ್ರವಾರ, ಫೆಬ್ರವರಿ 3, 2023
23 °C
ಚಿತ್ರದುರ್ಗ ಡಿವೈಎಸ್ಪಿ ನೋಟಿಸ್‌ಗೆ ಪತ್ರ

₹ 3 ಕೋಟಿ ಆಮಿಷ ಆರೋಪ| ಆನ್‌ಲೈನ್‌ ಹೇಳಿಕೆಗೆ ಸಿದ್ಧ: ‘ಒಡನಾಡಿ’ ಪರಶುರಾಮ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಮುರುಘಾ ಶರಣರ ಪ್ರಕರಣದಿಂದ ಹಿಂದೆ ಸರಿಯಲು ₹ 3 ಕೋಟಿ ಆಮಿಷ ಕುರಿತ ನನ್ನ ಹೇಳಿಕೆಗೆ ಸಾಕ್ಷ್ಯಧಾರ ನೀಡಲು ಇದೇ 29ರಂದು ಚಿತ್ರದುರ್ಗಕ್ಕೆ ಬರುವಂತೆ ತಿಳಿಸಲಾಗಿದ್ದು, ಬೆನ್ನುನೋವಿನ ಕಾರಣ ದೂರ ಪ್ರಯಾಣ ಮಾಡಲು ಆಗಿಲ್ಲ. ಹೀಗಾಗಿ, ಗೂಗಲ್‌ ಮೀಟ್‌ ಅಥವಾ ವಾಟ್ಸ್‌ಆ್ಯಪ್‌ ಮೂಲಕ ಹೇಳಿಕೆ ಪರಿಗಣಿಸಬೇಕು’ ಎಂದು ಒಡನಾಡಿ ಸಂಸ್ಥೆ ನಿರ್ದೇಶಕ ಎಂ.ಎಲ್‌.ಪರಶು‍ರಾಮ್‌ ಅವರು ಚಿತ್ರದುರ್ಗ ಪೊಲೀಸರಿಗೆ  ಮಂಗಳವಾರ ಪತ್ರ  ಬರೆದಿದ್ದಾರೆ. 

‘ಚಿತ್ರದುರ್ಗದ  ಸಂತ್ರಸ್ತ  ಬಾಲಕಿಯರ  ಕುರಿತು ವಿಚಾರಣೆಗೆ  ಹಾಜರಾಗುವಂತೆ  ನ.30ರಂದು ಮಕ್ಕಳ ಕಲ್ಯಾಣ ಸಮಿತಿ ಪತ್ರ ಬರೆದಿದೆ. ಎರಡೂ ವಿಚಾರಗಳೂ ಮುಖ್ಯವಾಗಿವೆ. ಈಗಾಗಲೇ ಫೋನ್ ಮೂಲಕ ನನ್ನ ಅನಾರೋಗ್ಯವನ್ನು ಗಮನಕ್ಕೆ ತಂದಿದ್ದೇನೆ. ಮತ್ತೊಂದು ದಿನಾಂಕ ನಿಗದಿಗೊಳಿಸಬೇಕು. ಇಲ್ಲವೇ, ಆನ್‌ಲೈನ್‌ ಮೂಲಕ ಹೇಳಿಕೆ ಪಡೆಯಬೇಕು’ ಎಂದು ಕೋರಿದ್ದಾರೆ. 

‘ಚಿತ್ರದುರ್ಗ ಪೊಲೀಸರು ಮೈಸೂರಿಗೇ ಬಂದು ಹೇಳಿಕೆ ಪಡೆಯಬಹುದು. ಅಂತೆಯೇ ಈ ಪ್ರಕರಣಗಳಲ್ಲಿ ಜೀವ ಬೆದರಿಕೆ ಇರುವುದರಿಂದ ವಿಶೇಷ ಅವಕಾಶ ಕಲ್ಪಿಸಿದರೆ, ಸಿಆರ್‌ಪಿಸಿ ಕಲಂ 164 ಅಡಿ ನ್ಯಾಯಾಧೀಶರ ಮುಂದೆ ಹೇಳಿಕೆಗಳನ್ನು ನೀಡಲು ಸಿದ್ಧನಿದ್ದೇನೆ. ಸೂಕ್ತ ಸ್ಥಳ ನಿಗದಿಗೊಳಿಸಿ ಹಾಗೂ ರಕ್ಷಣೆ ಒದಗಿಸಬೇಕು’ ಎಂದೂ ಅವರು ಪ್ರತಿಕ್ರಿಯಿಸಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು