ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪ್ಪು ಶಿಲೀಂಧ್ರ: ರಾಜ್ಯಕ್ಕೆ ಮತ್ತೆ 1,930 ವಯಲ್ಸ್ ಹಂಚಿಕೆ

Last Updated 31 ಮೇ 2021, 8:44 IST
ಅಕ್ಷರ ಗಾತ್ರ

ಬೆಂಗಳೂರು: ಕಪ್ಪು ಶಿಲೀಂಧ್ರ (ಬ್ಲ್ಯಾಕ್‌ ಫಂಗಸ್) ರೋಗದ ಚಿಕಿತ್ಸೆಗೆ ವಿವಿಧ ರಾಜ್ಯಗಳಿಗೆ ಹೆಚ್ಚುವರಿಯಾಗಿ ಒಟ್ಟು 30,100 ಎಂಫೋಟೆರಿಸಿನ್-ಬಿ ವಯಲ್ಸ್‌ಗಳನ್ನು ಕೇಂದ್ರ ಸರ್ಕಾರ ಸೋಮವಾರ ಹಂಚಿಕೆ ಮಾಡಿದೆ. ಅದರಲ್ಲಿ ರಾಜ್ಯಕ್ಕೆ 1,930 ಹಂಚಿಕೆ ಮಾಡಲಾಗಿದೆ.

ಈ ರೋಗದ ಚಿಕಿತ್ಸೆಗೆ ಈವರೆಗೆ ರಾಜ್ಯಕ್ಕೆ ಕೇಂದ್ರ ಸರ್ಕಾರ 12,710 ವಯಲ್ಸ್‌ ಹಂಚಿಕೆ ಮಾಡಿದೆ. ವಿವಿಧ ರಾಜ್ಯಗಳಲ್ಲಿರುವ ಕಪ್ಪು ಶಿಲೀಂದ್ರ ರೋಗಿಗಳ ಸಂಖ್ಯೆ ಆಧರಿಸಿ ಕೇಂದ್ರ ಸರ್ಕಾರ ಈ ಔಷಧವನ್ನು ಹಂಚಿಕೆ ಮಾಡುತ್ತಿದೆ.

ಉಳಿದಂತೆ, ಮಹಾರಾಷ್ಟ್ರಕ್ಕೆ 5,900 ಗುಜರಾತ್‌ಗೆ 5,630, ರಾಜಸ್ಥಾನ 3,670, ಮಧ್ಯಪ್ರದೇಶಕ್ಕೆ 1,920, ಉತ್ತರಪ್ರದೇಶಕ್ಕೆ 1,710, ಆಂಧ್ರಪ್ರದೇಶಕ್ಕೆ 1,600, ತೆಲಂಗಾಣ ಮತ್ತು ಹರಿಯಾಣಕ್ಕೆ ತಲಾ 1,200, ದೆಹಲಿಗೆ 1,190 ವಯಲ್ಸ್‌ಗಳನ್ನು ಕೇಂದ್ರ ಹಂಚಿಕೆ ಮಾಡಿದೆ.

ಈ ಬಗ್ಗೆ ಔಷಧ ಇಲಾಖೆಯನ್ನೂ ಹೊಂದಿರುವ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ ವಿ ಸದಾನಂದ ಗೌಡ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT