ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಜಿಟಲ್‌ ಯುಗದಲ್ಲಿ ಆಡಳಿತದ ವೇಗ ಹೆಚ್ಚಲಿ: ಸುರೇಂದ್ರನಾಥ್‌ ತ್ರಿಪಾಠಿ

Last Updated 18 ಜನವರಿ 2022, 16:47 IST
ಅಕ್ಷರ ಗಾತ್ರ

ಬೆಂಗಳೂರು: ‘ನಾವೀಗ ಡಿಜಿಟಲ್‌ ಯುಗಕ್ಕೆ ಕಾಲಿಟ್ಟಿದ್ದೇವೆ. ಬೆಳಕಿನ ವೇಗದಲ್ಲಿ ಮಾಹಿತಿ ಪಸರಿಸುವ ಈ ಕಾಲಘಟ್ಟದಲ್ಲಿ ಆಡಳಿತ ಯಂತ್ರವೂ ಚುರುಕು ಪಡೆದುಕೊಳ್ಳಬೇಕು’ ಎಂದು ನವದೆಹಲಿಯ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಪಬ್ಲಿಕ್‌ ಅಡ್ಮಿಸ್ಟ್ರೇಷನ್‌ನ (ಐಐಪಿಎ) ವ್ಯವಸ್ಥಾಪ‍ಕ ನಿರ್ದೇಶಕ ಸುರೇಂದ್ರನಾಥ್‌ ತ್ರಿಪಾಠಿ ತಿಳಿಸಿದರು.

ಐಐಪಿಎ ಹಾಗೂ ಸಾರ್ವಜನಿಕ ವ್ಯವಹಾರಗಳ ಕೇಂದ್ರ (ಪಿಎಸಿ) ಹಮ್ಮಿಕೊಂಡಿದ್ದ ‘ಸಾರ್ವಜನಿಕ ವ್ಯವಹಾರಗಳ ಸೂಚ್ಯಂಕ–ಭಾರತದ ರಾಜ್ಯಗಳಲ್ಲಿ ಆಡಳಿತ’ ವಿಷಯದ ಕುರಿತ ವೆಬಿನಾರ್‌ನಲ್ಲಿ ಮಂಗಳವಾರ ಅವರು ಮಾತನಾಡಿದರು.

‘ಹಿಂದೆಲ್ಲಾ ಯೋಜನೆಯೊಂದನ್ನು ಸಿದ್ಧಪಡಿಸಲು 100 ದಿನ ತೆಗೆದುಕೊಳ್ಳಲಾಗುತ್ತಿತ್ತು. ಅದು ಮುಗಿದ ಅಧ್ಯಾಯ. ಈಗ ನಾವು ಯೋಜನೆಗಳನ್ನು ರೂಪಿಸಿದಷ್ಟೇ ಕ್ಷಿಪ್ರ ಗತಿಯಲ್ಲಿ ಅವುಗಳನ್ನು ಅನುಷ್ಠಾನಗೊಳಿಸಬೇಕು’ ಎಂದರು.

ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಅಡ್ವಾನ್ಸ್ಡ್‌ ಸ್ಟಡೀಸ್‌ನ (ಎನ್‌ಐಎಎಸ್‌) ಪ್ರೊ. ಸುಪ್ರಿಯಾ ರಾಯ್‌ ಚೌಧರಿ, ‘ಆರ್ಥಿಕ ಅಭಿವೃದ್ಧಿಗಿಂತಲೂ ವ್ಯಕ್ತಿಗತ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಬೇಕು. ಆರ್ಥಿಕ ಅಭಿವೃದ್ಧಿಯಲ್ಲಿ ಕರ್ನಾಟಕ ಉತ್ತಮ ಸಾಧನೆ ಮಾಡುತ್ತಿದೆ. ಆದರೆ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ರಾಜ್ಯದ ಸಾಧನೆ ಅಷ್ಟೇನು ಉತ್ತಮವಾಗಿಲ್ಲ’ ಎಂದು ಅಭಿಪ್ರಾಯಪಟ್ಟರು.

ನಿವೃತ್ತ ಐಎಎಸ್‌ ಅಧಿಕಾರಿ ಕೆ.ಜೈರಾಜ್‌,ಪಿಎಸಿಯ ಅನ್ನಪೂರ್ಣ ರವಿಚಂದರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT