ಶುಕ್ರವಾರ, ಜೂನ್ 18, 2021
24 °C

ರಾಮನಗರ ಆಸ್ಪತ್ರೆಯಲ್ಲಿ ಕೋವಿಡ್ ಪೀಡಿತರಿಗೆ ನೃತ್ಯದ 'ಮದ್ದು' 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕಿನ ಡಾ.‌ಚಂದ್ರಮ್ಮ ದಯಾನಂದ ಸಾಗರ್ ಆಸ್ಪತ್ರೆಯು ಕೋವಿಡ್ ಪೀಡಿತರಿಗೆ ವಿಭಿನ್ನ ರೀತಿಯ ಚಿಕಿತ್ಸೆ ನೀಡುತ್ತಿದೆ. 

ಸೋಂಕಿತರು ಮಾನಸಿಕವಾಗಿ ಲವಲವಿಕೆಯಿಂದ ಇದ್ದಷ್ಟೂ ಬೇಗ ಗುಣಮುಖರಾಗುತ್ತಾರೆ ಎಂಬ ಉದ್ದೇಶದಿಂದ ಹಾಡು, ನೃತ್ಯದ ‌ಮೂಲಕ ಅವರನ್ನು ಖುಷಿಯಿಂದ ಇಡುವ ಕಾರ್ಯವನ್ನು ಆಸ್ಪತ್ರೆಯ ವೈದ್ಯರು, ಶುಶ್ರೂಷಕರು ಮಾಡುತ್ತಿದ್ದಾರೆ. 

'ನಮ್ಮ ಆಸ್ಪತ್ರೆಯ ಡಾ. ಅಶೋಕ್ ಮತ್ತು ಡಾ. ಮದನ್ ಅವರ ಮಾರ್ಗದರ್ಶನದಲ್ಲಿ ಶುಶ್ರೂಷಕರು ಮತ್ತು ವೈದ್ಯರು ಈ ಕಾರ್ಯ ಮಾಡುತ್ತಿದ್ದಾರೆ. ರೋಗಿಗಳ ಮುಂದೆ ಕನ್ನಡ ಚಿತ್ರಗೀತೆಗಳಿಗೆ ನೃತ್ಯ ಮಾಡುತ್ತಿದ್ದಾರೆ. ಇದರಿಂದ ರೋಗಿಗಳಲ್ಲಿ ವಿಶ್ವಾಸ, ಆತ್ಮ ಸ್ಥೈರ್ಯ ತುಂಬಲು ಸಾಧ್ಯವಾಗುತ್ತಿದೆ' ಎಂದು ಆಸ್ಪತ್ರೆ ಸಿಬ್ಬಂದಿ ಪ್ರೀತಮ್ ಗೌಡ 'ಪ್ರಜಾವಾಣಿ' ಗೆ ತಿಳಿಸಿದರು.

'67 ವೈದ್ಯರು ಕಾರ್ಯನಿರ್ವಹಿಸುತ್ತಿದ್ದು, ಸದ್ಯ 165 ಕೋವಿಡ್ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಸರ್ಕಾರಿ ಕೋಟಾದಡಿ ದಾಖಲಾಗುವ ರೋಗಿಗಳಿಗೆ ಉಚಿತವಾಗಿ, ಖಾಸಗಿ ಕೋಟಾದಡಿ ದಾಖಲಾಗುವ ರೋಗಿಗಳಿಂದ ಔಷಧ ಮತ್ತು ಆಮ್ಲಜನಕ ವ್ಯವಸ್ಥೆಯ ಶುಲ್ಕ ಮಾತ್ರ ಪಡೆಯಲಾಗುತ್ತಿದೆ' ಎಂದು ಅವರು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು