ಸೋಮವಾರ, ಮೇ 16, 2022
27 °C

‘ಟಿಪ್ಪು ಸುಲ್ತಾನ್ ಪಠ್ಯ ಕೈಬಿಡುವುದಿಲ್ಲ’: ಶಿಕ್ಷಣ ಸಚಿವ ಬಿ.ಸಿ.ನಾಗೇಶ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪಠ್ಯದಿಂದ ಟಿಪ್ಪು ಸುಲ್ತಾನ್ ಕುರಿತ ವಿಷಯ ಕೈಬಿಡುವುದಿಲ್ಲ. ಸಾಕ್ಷ್ಯಾಧಾರ ಇಲ್ಲದ ಅಂಶಗಳಿದ್ದರೆ ಕೈಬಿಡಲಾಗುವುದು. ‘ಮೈಸೂರು ಹುಲಿ’ ಎಂಬ ಬಿರುದು ಕೈಬಿಡುವುದಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.

ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ‘ಶಾಸಕ ಅಪ್ಪಚ್ಚು ರಂಜನ್‌ ಅವರು ಟಿಪ್ಪುವಿನ ಕುರಿತ ಪಠ್ಯ ಕೈಬಿಡಬೇಕು. ಉಳಿಸಿದರೆ ಆತನ ಎಲ್ಲ ಅಂಶವನ್ನು ಸೇರಿಸಬೇಕು ಎಂದು ಒತ್ತಾಯಿಸಿದ್ದರು. ಅವರು ಪೂರಕವಾದ ಮಾಹಿತಿಗಳನ್ನೂ ನೀಡಿದ್ದಾರೆ. ಟಿಪ್ಪು ಆಡಳಿತದಲ್ಲಿ ಕನ್ನಡ ತೆಗೆದು ಪರ್ಷಿಯನ್‌ ಭಾಷೆ ಜಾರಿ ತಂದದ್ದು ಮತ್ತು ಕೊಡವರ ಮೇಲೆ ದೌರ್ಜನ್ಯ ಎಸಗಿದ ಬಗ್ಗೆ ದಾಖಲೆಗಳನ್ನು ಸಲ್ಲಿಸಿದ್ದಾರೆ ಎಂದು ವಿವರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು