ಬುಧವಾರ, ಸೆಪ್ಟೆಂಬರ್ 29, 2021
21 °C

ಬಸವರಾಜ ಬೊಮ್ಮಾಯಿ ಆಯ್ಕೆಯ ಹಿಂದೆ ಕೆಲಸ ಮಾಡಿದ ಅಂಶಗಳೇನು? 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸ್ವಚ್ಛ ಮತ್ತು ವಿವಾದ ರಹಿತ ವ್ಯಕ್ತಿತ್ವದ ಮೂಲಕ ಹೆಸರುವಾಸಿಯಾಗಿರುವ ಬಸವರಾಜ ಬೊಮ್ಮಾಯಿ ಅವರನ್ನು ಬಿಜೆಪಿ ಹೈಕಮಾಂಡ್‌ ಕರ್ನಾಟಕದ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿದೆ.  ಹಲವಾರು ಅಂಶಗಳನ್ನು ಗಮನದಲ್ಲಿಟ್ಟುಕೊಂಡೇ ಬಿಜೆಪಿ ಈ ಆಯ್ಕೆ ಮಾಡಿದೆ. ‌

ಯಾವುವು ಆ ಆಂಶಗಳು? 

- ಮೂರು ಬಾರಿಯ ಶಾಸಕರರಾದ ಬೊಮ್ಮಾಯಿ, ಯಡಿಯುರಪ್ಪ ಅವರ ಆಪ್ತರಲ್ಲಿ ಒಬ್ಬರು. ಉತ್ತರ ಕರ್ನಾಟಕದವರೇ ಸಿಎಂ ಆಗಬೇಕು ಎಂಬ ಆಗ್ರಹಗಳನ್ನು ಸಂತೈಸುವುದು ಬಿಜೆಪಿ ತಂತ್ರಗಳಲ್ಲಿ ಒಂದು. 

- ಜಾತಿ, ಶಿಕ್ಷಣ, ಆಡಳಿತ ಸಾಮರ್ಥ್ಯ ಮತ್ತು ಪಕ್ಷದ ಕೇಂದ್ರ ಮುಖಂಡರೊಂದಿಗಿನ ಸಾಮೀಪ್ಯವನ್ನು ಗಮನಿಸಿದರೆ, ಬೊಮ್ಮಾಯಿ ಅವರು 2023ರ ವಿಧಾನಸಭಾ ಚುನಾವಣೆಗೆ ಬಿಜೆಪಿಯ ಅತ್ಯಂತ ಸುರಕ್ಷಿತ ಆಯ್ಕೆ. 

- ಬೊಮ್ಮಾಯಿ ಅವರು ಲಿಂಗಾಯತ ಸಮುದಾಯದವರು. ಇದು ಬಿಜೆಪಿಯ ಪ್ರಬಲ ಮತಬ್ಯಾಂಕ್‌. ಉತ್ತರ ಕರ್ನಾಟಕದ ಹಾವೇರಿ ಜಿಲ್ಲೆಯ ಶಿಗ್ಗಾವಿ ವಿಧಾನಸಭಾ ಕ್ಷೇತ್ರವನ್ನು ಬೊಮ್ಮಾಯಿ ಪ್ರತಿನಿಧಿಸುತ್ತಿದ್ದು, ಆಡಳಿತಾತ್ಮಕವಾಗಿ ಅನುಭವ ಹೊಂದಿದವರು. ಅಲ್ಲದೆ, ಎಲ್ಲ ನಾಯಕರೊಂದಿಗೆ ಅವರು ಹೊಂದಿರುವ ಸುಮಧುರ ಬಾಂಧವ್ಯ ಅವರ ಆಯ್ಕೆಗೆ ನೆರವಾಗಿರಬಹುದು.
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು