ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಬ್ಬರಿಗೆ ಹಾಕಿದ ಮತ ಬೇರೊಬ್ಬರಿಗೆ ಹೋಗುತ್ತದೆಯೇ...

Last Updated 31 ಮಾರ್ಚ್ 2023, 19:40 IST
ಅಕ್ಷರ ಗಾತ್ರ

ಪ್ರತಿ ಬಾರಿ ಚುನಾವಣೆ ನಡೆದು, ಫಲಿತಾಂಶ ಪ್ರಕಟವಾದಾಗಲೂ ವಿದ್ಯುನ್ಮಾನ ಮತಯಂತ್ರಗಳನ್ನು (ಇವಿಎಂ) ತಿರುಚಲಾಗಿದೆ ಎಂಬ ಆರೋಪ ಕೇಳಿಬರುತ್ತದೆ. ಮತದಾನದ ದಿನವೇ ಮತಯಂತ್ರಗಳು ಸರಿಯಾಗಿ ಕೆಲಸ ಮಾಡಲಿಲ್ಲ, ಯಾವುದೋ ಅಭ್ಯರ್ಥಿಗೆ ಮತ ಒತ್ತಿದರೆ ಮತ್ಯಾವುದೋ ಅಭ್ಯರ್ಥಿಗೆ ಮತ ಬೀಳುತ್ತದೆ ಎಂಬ ಆರೋಪಗಳೂ ಕೇಳಿಬರುತ್ತವೆ. ಇಂತಹ ಆರೋಪಗಳ ನಿರ್ವಹಣೆಗೆ ಚುನಾವಣಾ ಆಯೋಗವು ಪರಿಹಾರ ವ್ಯವಸ್ಥೆಯನ್ನು ಹೊಂದಿದೆ. ಮತದಾನದ ಸಂದರ್ಭದಲ್ಲಿ ಬರುವ ದೂರುಗಳನ್ನು ಸ್ಥಳದಲ್ಲಿಯೇ ಪರಿಹರಿಸಲು ಈ ವ್ಯವಸ್ಥೆ ಅವಕಾಶ ಮಾಡಿಕೊಡುತ್ತದೆ. ಮತದಾನವು ಸರಿಯಾಗಿ ನಡೆಯುತ್ತಿದೆ ಎಂದು ಖಚಿತಪಡಿಸಿಕೊಳ್ಳುವ ಮತ್ತು ಸರಿಯಾಗಿ ನಡೆಯದೇ ಇದ್ದರೆ, ಆ ಬಗ್ಗೆ ದೂರು ನೀಡುವ ಎಲ್ಲಾ ಹಕ್ಕೂ ಮತದಾರನಿಗೆ ಇದೆ.

ಮತದಾರನು ತಾನು ಮತ ಹಾಕಿದ ಅಭ್ಯರ್ಥಿಗೇ ಮತ ಬಿದ್ದಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ‘ವಿವಿಪ್ಯಾಟ್‌’ ವ್ಯವಸ್ಥೆ ಅನುವು ಮಾಡಿಕೊಡುತ್ತದೆ. ಮತದಾರನು ಮತಯಂತ್ರದಲ್ಲಿ ಗುಂಡಿ ಒತ್ತಿದ ನಂತರ, ‘ವಿವಿಪ್ಯಾಟ್‌’ ಯಂತ್ರವು ಚೀಟಿಯ ರೂಪದಲ್ಲಿ ಮತವನ್ನು ದೃಢಪಡಿಸುತ್ತದೆ. ಈ ಯಂತ್ರವು ತಪ್ಪು ಮತವನ್ನು ತೋರಿಸಿದರೆ, ಮತದಾರನು ಸ್ಥಳದಲ್ಲಿಯೇ ಅದಕ್ಕೆ ಆಕ್ಷೇಪ ವ್ಯಕ್ತಪಡಿಸಬಹುದು. ಮತದಾರನ ಆರೋಪವನ್ನು ಅಥವಾ ದೂರನ್ನು ಮತಗಟ್ಟೆಯ ಪ್ರಿಸೈಡಿಂಗ್‌ ಅಧಿಕಾರಿಯು ತಳ್ಳಿಹಾಕುವಂತಿಲ್ಲ. ಬದಲಿಗೆ,

1. ಇಂತಹ ಆರೋಪ ಅಥವಾ ದೂರು ನೀಡಿದ ನಂತರದ ಪ್ರಕ್ರಿಯೆ ಬಗ್ಗೆ ಮತದಾರನಿಗೆ ಮಾಹಿತಿ ನೀಡಬೇಕು. ದೂರು ಸುಳ್ಳಾಗಿದ್ದರೆ, ಎದುರಿಸಬೇಕಾದ ಕ್ರಮಗಳ ಬಗ್ಗೆ ಮತದಾರನಿಗೆ ಮಾಹಿತಿ ನೀಡಬೇಕು

2. ಮತದಾರನಿಂದ ಲಿಖಿತ ರೂಪದಲ್ಲಿ ದೂರನ್ನು ಸ್ವೀಕರಿಸಬೇಕು

3. ಪರೀಕ್ಷಾರ್ಥವಾಗಿ ಮತ ಚಲಾಯಿಸುವಂತೆ ಮತದಾರನಿಗೆ ಸೂಚಿಸಬೇಕು. ಪರೀಕ್ಷಾರ್ಥ ಮತ ಚಲಾವಣೆಯ ವೇಳೆ ಅಭ್ಯರ್ಥಿ ಅಥವಾ ಅಭ್ಯರ್ಥಿಯ ಪಕ್ಷದ ಪ್ರತಿನಿಧಿಗಳು ಮತಗಟ್ಟೆಯಲ್ಲಿ ಇರಬೇಕು. ಪರೀಕ್ಷಾರ್ಥ ಮತ ಚಲಾವಣೆಯ ನಂತರ ವಿವಿಪ್ಯಾಟ್‌ನಲ್ಲಿ ಬರುವ ಚೀಟಿಯನ್ನು ಪರಿಶೀಲಿಸಬೇಕು

4. ಒಬ್ಬ ಅಭ್ಯರ್ಥಿಗೆ ಹಾಕಿದ ಮತವು ಬೋರೊಬ್ಬ ಅಭ್ಯರ್ಥಿಗೆ ಹೋಗುತ್ತಿದೆ ಎಂಬುದನ್ನು ಪರೀಕ್ಷಾರ್ಥ ಮತ ಚಲಾವಣೆಯು ದೃಢಪಡಿಸಿದರೆ, ತಕ್ಷಣವೇ ಮತ ಚಲಾವಣಾ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕು

5. ಮತ ಚಲಾವಣೆ ಮತ್ತು ದಾಖಲಾತಿಯಲ್ಲಿ ಲೋಪವಾಗುತ್ತಿರುವ ಬಗ್ಗೆ ರಿಟರ್ನಿಂಗ್‌ ಅಧಿಕಾರಿಗೆ ತಕ್ಷಣವೇ ಮಾಹಿತಿ ನೀಡಬೇಕು ಮತ್ತು ರಿಟರ್ನಿಂಗ್‌ ಅಧಿಕಾರಿಯ ಸೂಚನೆಯನ್ನು ಪಾಲಿಸಬೇಕು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT