ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹13,158 ಕೋಟಿ ಪೂರಕ ಅಂದಾಜು

ಹೊಸ ಕಾರು ಖರೀದಿಗೆ ₹2 ಕೋಟಿ
Last Updated 23 ಮಾರ್ಚ್ 2021, 16:29 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಸರ್ಕಾರ 2020–21 ರ ಸಾಲಿನಲ್ಲಿ ಅನುಮೋದನೆ ಪಡೆದಿದ್ದ ಬಜೆಟ್‌ನ ಮೊತ್ತಕ್ಕಿಂತ ಹೆಚ್ಚಿನ ಮೊತ್ತವನ್ನು ಖರ್ಚು ಮಾಡಲು ₹13,158.25 ಕೋಟಿ ಮೊತ್ತದ ಪೂರಕ ಅಂದಾಜನ್ನು ಮಂಗಳವಾರ ವಿಧಾನಸಭೆಯಲ್ಲಿ ಮಂಡಿಸಿತು.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಪರವಾಗಿ ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ ಪೂರಕ ಅಂದಾಜುಗಳು ಮೂರನೇ ಕಂತಿನ ಬೇಡಿಕೆಗಳ ಪ್ರಸ್ತಾವವನ್ನು ಮಂಡಿಸಿದರು.

ಇದರಲ್ಲಿ ₹2,000 ಕೋಟಿ ಮೊತ್ತ ಇಂಧನ ಇಲಾಖೆಯ ವೆಚ್ಚಗಳು, ರೈತರಿಗೆ ಸಹಾಯಧನ, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಮತ್ತು ಪುನರ್‌ವಸತಿಯೂ ಸೇರಿದೆ.

ಅಲ್ಲದೆ ಬಿಎಂಟಿಸಿ ನೌಕರರ ಸಂಬಳಕ್ಕೆ ₹320 ಕೋಟಿ, ವಾಣಿಜ್ಯ ಬ್ಯಾಂಕುಗಳಲ್ಲಿ ಮಾಡಿರುವ ಸಾಲ ಮನ್ನಾಕ್ಕೆ ₹173 ಕೋಟಿ, ಹೊಸ ಸಚಿವರು, ರಾಜ್ಯಸಭಾ ಮತ್ತು ಲೋಕಸಭಾ ಸದಸ್ಯರಿಗೆ ಹೊಸ ವಾಹನ ಖರೀದಿಸಲು ₹2 ಕೋಟಿ ಖರೀದಿಗೆ ಎಂದು ತೋರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT