ಮಳೆ ದೇವರು, ಮೂಲ ನಿವಾಸಿಗಳ ಕುಲದೇವರೂ ಆಗಿರುವ ಇಗ್ಗುತಪ್ಪ ದೇವರ `ಕಲಾಡ್ಜ ಹಬ್ಬ'ದ ಸಂಭ್ರಮದಲ್ಲಿ ಇಂದು ಕೊಡಗು ತೇಲಾಡುತ್ತಿದೆ. ಕುಂಭ ಮಾಸದಲ್ಲಿ ನಡೆಯುವ ಈ ಹಬ್ಬದಲ್ಲಿ ತುಲಾಭಾರದ ವಿಶೇಷತೆ. ಇಂದು ಇಗ್ಗುತಪ್ಪದೇವರ ಉತ್ಸವ ಮೂರ್ತಿಯೊಂದಿಗೆ ಐದು ಕಿ.ಮೀ ದೂರದ ನೆಲಜಿಇಗ್ಗುತಪ್ಪ ದೇವಸ್ಥಾನದ ಮೂಲಕ ಮಲ್ಮ ಬೆಟ್ಟಕ್ಕೆ ತೆರಳಿ ಪೂಜೆ ಮಾಡುತ್ತಾರೆ.

ಈ ಉತ್ಸವಕ್ಕೂ ಐತಿಹಾಸಿಕ ಹಿನ್ನೆಲೆ ಇದೆ. ಕೇರಳದಲ್ಲಿ ಶಂಖ ಒಂದರಿಂದ ಆರು ಗಂಡು ಹಾಗೂ ಒಂದು ಹೆಣ್ಣಿನ ಜನನವಾಯಿತು. ಅವರಲ್ಲಿ ನಾಲ್ಕನೆಯವ ಇಗ್ಗುತಪ್ಪ. ವರವೊಂದರ ಪರಿಣಾಮ ಕೊಡಗಿನ ಪಾಡಿಯ ಕ್ಷೇತ್ರದಲ್ಲಿ ಈತ ನೆಲೆ ನಿಂತ. ಅಂದಿನಿಂದ ಊರಿನ ಜನಕ್ಕೆಲ್ಲ ಒಳ್ಳೆಯದಾಯಿತು. ಈ ಹಿನ್ನೆಲೆಯಲ್ಲಿ ಇಗ್ಗುತಪ್ಪ ನೆಲೆ ನಿಂತ ನೆನಪಿಗಾಗಿ ಧಾನ್ಯ ಲಕ್ಷಿಯ ಪೂಜೆಯ ರೂಪದಲ್ಲಿ ಹುತ್ತರಿ ಹಬ್ಬ ಆಚರಿಸಲಾಗುತ್ತಿದೆ ಎನ್ನುವುದು ಪ್ರತೀತಿ.

ಇಗ್ಗುತಪ್ಪ ದೇವರ ದೇವಸ್ಥಾನದಲ್ಲಿ ಕೊಡವರು ಮಗುವಿನ ನಾಮಕರಣವನ್ನು ಹೆಚ್ಚಾಗಿ ಮಾಡುತ್ತಾರೆ. ವರ್ಷದ 11 ತಿಂಗಳೂ(ಕರ್ಕಾಟಕ ಮಾಸ ಬಿಟ್ಟು) ತುಲಾಭಾರ ನಡೆಯುತ್ತದೆ. ಈ ದೇವಸ್ಥಾನದ ಗರ್ಭಗುಡಿಯನ್ನು ಕೆಲ ವರ್ಷದ ಹಿಂದೆ ಸರ್ಕಾರ ನವೀಕರಣಗೊಳಿಸಿದೆ. ಇದೀಗ ಇಗ್ಗುತಪ್ಪ ಭಕ್ತಜನ ಮಂಡಳಿಯವರು ದೇವಸ್ಥಾನದ ಹಳೆಯ ಕಟ್ಟಡಗಳನ್ನು ಕೆಡವಿ ಆಧುನೀಕರಣ ಮಾಡುತ್ತಿದ್ದಾರೆ. ಇದು ಈ ಬಾರಿಯ ಉತ್ಸವಕ್ಕೆ ಇನ್ನಷ್ಟು ಮೆರಗು ನೀಡಿದೆ. ಅದೇ ರೀತಿ ಸಮೀಪದಲ್ಲಿಯೇ ಇರುವ ನೆಲಜಿಯಲ್ಲಿನ ಇಗ್ಗುತಪ್ಪ ದೇವಸ್ಥಾನದಲ್ಲಯೂ ಬ್ರಹ್ಮ ಕಲಶೋತ್ಸವ ನಡೆಯಲಿದೆ. ಸಂಪರ್ಕಕ್ಕೆ: 9480449290

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.