ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಣಕಾಲು ಮುರಿ ಬಿದ್ದರೆ ಮೈಕೈ ಮುರಿ!

Last Updated 10 ಜೂನ್ 2013, 19:59 IST
ಅಕ್ಷರ ಗಾತ್ರ

ದೊಂದು ವಿಚಿತ್ರ ಎನಿಸುವ ಆಟ. ಶರೀರ ನಿಯಂತ್ರಣದಲ್ಲಿ ಇಟ್ಟುಕೊಂಡು ಏಣಿ ಏರಬೇಕು. ಸ್ವಲ್ಪ ಯಾಮಾರಿದರೂ ಸೀದಾ ಪಾತಾಳವೇ ಗತಿ, ಮೈಕೈ ಮುರಿದುಕೊಳ್ಳುವುದು ದಿಟ.

ಇದೇ ಮೊಣಕಾಲು ಮುರಿ ಆಟ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಯಡಹಳ್ಳಿ, ಕೆಂಚರಾಮನಹಳ್ಳಿ ಗ್ರಾಮಗಳಲ್ಲಿ ಕಾಣಸಿಗುತ್ತದೆ ಈ ಆಟ. ಗಂಡಸುತನಕ್ಕೆ ಸವಾಲು ಎನ್ನುವ ಈ ಆಟಕ್ಕೆ `ಮಿಂಡರ ಗಣಿ', `ಮಿಂಡರ ಜೋಕಾಲಿ' ಎನ್ನುವ ಹೆಸರೂ ಇದೆ.

ತರುಣರು ಶರೀರ ಸ್ವಾಸ್ಥ್ಯ ಕಾಪಾಡಿಕೊಳ್ಳುವ ಜೊತೆಗೆ  ಮನಸ್ಸನ್ನು ಹಾಗೂ ಶರೀರವನ್ನು ಏಕಾಗ್ರ ಚಿತ್ತದೆಡೆಗೆ ಸಾಗಿಸುವ ಮೂಲ ಉದ್ದೇಶ ಈ ಆಟದ್ದು. ಅದೇನೇ ಇದ್ದರೂ ಹಲವರ ಪಾಲಿಗೆ ಇದು ಕಾಸಿಗಾಗಿ ಮಾಡುವ `ಕೌಶಲ್ಯವೂ' ಹೌದು.

ಈ ಆಟವನ್ನು ಷರತ್ತು ಕಟ್ಟುವ ಮೂಲಕ ಆಡುತ್ತಾರೆ. ಅಂದರೆ ಗೆದ್ದವರಿಗೆ ಹಣದ ರೂಪದ್ಲ್ಲಲೋ, ವಸ್ತುಗಳ ರೂಪದಲ್ಲಿಯೋ ಹಣ ಸಿಗುತ್ತದೆ. ಮಕ್ಕಳ ಹೊಟ್ಟೆ-ಬಟ್ಟೆಗಾಗಿ ಈ `ಸರ್ಕಸ್' ಮಾಡುವ ಅಪ್ಪಂದಿರೇ ಹೆಚ್ಚು.

ಹೀಗಿದೆ ಆಟ
ವಿವಿಧ ಆಕಾರದ ಮೂರು ಕಂಬಗಳು ಇಲ್ಲಿರುತ್ತವೆ. ಏಣಿಗೆ ಬಳಸುವ ಬಿದಿರು ಇತ್ಯಾದಿ ಬಳಸಿ ಮೊಣಕಾಲು ಮುರಿ ಕಂಬ ಸಿದ್ಧಪಡಿಸಿರುವರು. ಈ ಏಣಿಯನ್ನು ಏರುವ ಸಂದರ್ಭದಲ್ಲಿ  ಶರೀರದ ಸಮತೂಕ ಕಾಯ್ದುಕೊಂಡು ಏರಲು ಅಣಿಯಾಗಬೇಕು. ಕೈ ಹಿಡಿಯುವಾಗಲೂ ಎಚ್ಚರಿಕೆ ಅಗತ್ಯ.

ಜೊತೆಗೆ ಏಣಿಯ ಮೇಲೆ ಕಾಲು ಇಡುವಾಗ ಶರೀರದ ಭಾರ ಸಮಸ್ಥಿತಿಯಲ್ಲಿ ಇರುವಂತೆ ಇಟ್ಟುಕೊಳ್ಳಬೇಕು. ಸ್ವಲ್ಪ ತಪ್ಪಿದರೂ ಆ ಏಣಿಯು ತಿರುವು ಮುರುವಾಗುತ್ತದೆ. ಆಗ ದೇವರೇ ಗತಿ. ಏಣಿಯನ್ನು ಏರಿದಾತ ಅದರ ತುದಿಯನ್ನು ಮುಟ್ಟಿ ಬರುವುದು ಈ ಆಟದ ವಿಶೇಷ.ಅಂದ ಹಾಗೆ ಇದು ಶ್ರಾವಣ ಮಾಸದ ವಿಶೇಷ ಎನ್ನುತ್ತಾರೆ ಗ್ರಾಮಸ್ಥರು. ಆದರೆ ಈಚೆಗೆ ಈ ಕ್ರೀಡೆ ಮರೆಯಾಗುತ್ತಿದೆ ಎಂಬ ಆತಂಕವೂ ಅಲ್ಲಿಯವರದ್ದು.
-ವೈ.ಬಿ.ಕಡಕೋಳ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT