ಬುಧವಾರ, ಜುಲೈ 6, 2022
23 °C
ಕೊಳದ ಮಠದ ಶಾಂತವೀರ ಸ್ವಾಮೀಜಿ ಬೇಸರ

‘ಬಸವಣ್ಣನ ಗುರು ಅಲ್ಲಮರನ್ನು ಮರೆತ ಜನ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಬಸವಶ್ರೀ ಪ್ರಶಸ್ತಿ ಪ್ರದಾನವನ್ನು ಬಹಳ ವಿಜೃಂಭಣೆಯಿಂದ ಮಾಡುತ್ತಾರೆ. ಆದರೆ, ಬಸವಣ್ಣನವರ ಗುರುಗಳಾ‌ದ ಅಲ್ಲಮ ಪ್ರಭುಗಳನ್ನು ಜನ ಮರೆತಿದ್ದಾರೆ’ ಎಂದು ಕೊಳದ ಮಠ ಮಹಾ ಸಂಸ್ಥಾನದ ಪೀಠಾಧ್ಯಕ್ಷ ಶಾಂತವೀರ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.

ಕೊಳದ ಮಠದಲ್ಲಿ ಶುಕ್ರವಾರ ಆಯೋಜಿಸಿದ್ದ ‘ರೇಣುಕ, ಬಸವ, ಅಕ್ಕ ಮಹಾದೇವಿ ಜಯಂತ್ಯುತ್ಸವ ಹಾಗೂ ಅಲ್ಲಮಶ್ರೀ ಪ್ರಶಸ್ತಿ ಪ್ರದಾನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮಠಕ್ಕೆ ಅಗೌರವ ತೋರಿದ ರಾಜ ಕಾರಣಿಗಳು ಸೋಲನ್ನು ಕಂಡಿದ್ದಾರೆ. ಎಸ್‌.ಎಂ. ಕೃಷ್ಣ ಅವರು ನಮ್ಮ ಮಾತನ್ನು ಮೀರಿ ಪ್ರಮಾಣವಚನ ಸ್ವೀಕರಿಸಲು ಮುಂದಾಗಿ ಅಧಿಕಾರ ಕಳೆದುಕೊಂಡರು. ಅವರ ಬದಲಿಗೆ ವೀರಪ್ಪ ಮೊಯಿಲಿ ಮುಖ್ಯಮಂತ್ರಿಯಾದರು. ಪರಂಪರೆಗೆ ಯಾರೂ ಧಕ್ಕೆ ತರಬಾರದು. ಜಲಕಂಠೇಶ್ವರನ ದರ್ಶನ ಪಡೆಯದೇ ರಾಜ್ಯದಲ್ಲಿ ಯಾವ ರಾಜಕಾರಣಿಯೂ ಮುಖ್ಯಮಂತ್ರಿಯಾಗಿಲ್ಲ’ ಎಂದರು.

‘ಸರ್ಕಾರದಿಂದ ಮಠವು ಒಂದು ಪೈಸೆಯನ್ನೂ ಪಡೆದಿಲ್ಲ. ಅದರ ಅವ ಶ್ಯಕತೆಯೂ ನಮಗಿಲ್ಲ. ಬದಲಾಗಿ ಸಾವಿ ರಾರು ಎಕರೆ ಜಮೀನನ್ನು ಮಠದ ವತಿಯಿಂದಲೇ ದಾನ ಮಾಡಲಾಗಿದೆ’ ಎಂದರು. 

ಬೆಂಗಳೂರು ದೂರದರ್ಶನ ಕೇಂದ್ರದ ಸಹಾಯಕ ನಿರ್ದೇಶಕಿ ಸಿ.ನಿರ್ಮಲಾ ಎಲಿಗಾರ್‌ ಹಾಗೂ ಲೀಲಾದೇವಿ ಆರ್‌.ಪ್ರಸಾದ್‌ ಉಪನ್ಯಾಸ ನೀಡಿದರು. ಕೆಳದಿಯ ಕವಲೇದುರ್ಗ ಮ‌ಹಾಸಂಸ್ಥಾನ ಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಗುರುಲಿಂಗ ಜಂಗಮದೇವರ ಮಠದ ನಟರಾಜ ಸ್ವಾಮೀಜಿ, ಓಂಕಾರಾಶ್ರಮ ಮಠದ ಮಧುಸೂದನಾನಂದಪುರಿ ಸ್ವಾಮೀಜಿ, ಗಂಜಾಂ ಮಠದ ಚಿದ್ಘನ್ನ ಸ್ವಾಮೀಜಿ, ಶಾಸಕ ಎಸ್‌.ವಿ.ರಾಮದಾಸ್‌ ಹಾಗೂ ಬಿಜೆಪಿ ಮುಖಂಡ ಚಿ.ನಾ.ರಾಮು ಭಾಗವಹಿಸಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು