ಯಳಂದೂರು: ತಾಲ್ಲೂಕಿನ ಮೆಲ್ಲಹಳ್ಳಿ ಬಳಿ ಪ್ರೌಢ ಮತ್ತು ಪಿಯು ಕಾಲೇಜಿನ ಹೆಣ್ಣುಮಕ್ಕಳಿಗಾಗಿನಿರ್ಮಿಸಲಾಗಿರುವ ಸುಸಜ್ಜಿತ ವಸತಿ ನಿಲಯ ಉದ್ಘಾಟನೆ ಕಂಡು ನಾಲ್ಕಾರು ತಿಂಗಳು ಕಳೆದಿವೆ.ಆದರೆ, ಹಾಸ್ಟೆಲ್ ಮಾತ್ರ ಬಾಲಕಿಯರ ಬಳಕೆಗೆ ಮುಕ್ತಗೊಂಡಿಲ್ಲ.

ಈಗಾಗಲೇ 2019–20ನೇ ಸಾಲಿನ ಶಾಲಾ–ಕಾಲೇಜು ಶೈಕ್ಷಣಿಕ ಚಟುವಟಿಕೆಗಳು ಆರಂಭಗೊಂಡಿವೆ. ಹಾಸ್ಟೆಲ್ ಇನ್ನೂ ಬಳಕೆಗೆ ಮುಕ್ತಗೊಳ್ಳದಿರುವುದರಿಂದ ಈವರ್ಷ ವಿವಿಧ ಶಾಲೆ, ಕಾಲೇಜುಗಳಿಗೆ ದಾಖಲಾದ ಹೆಣ್ಣುಮಕ್ಕಳು ಹಾಸ್ಟೆಲ್ನಿಂದ ದೂರಉಳಿಯುವಂತೆ ಆಗಿದೆ.

ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಾ ಅಭಿಯಾನದ (ಆರ್ಎಂಎಸ್ಎ) ಅಡಿಯಲ್ಲಿ ರಾಜ್ಯದ 74 ಕಡೆಗಳಲ್ಲಿ ಇಂತಹ ಹಾಸ್ಟೆಲ್ ನಿರ್ಮಿಸಲಾಗಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಮೂರು ಹಾಸ್ಟೆಲ್ ನಿರ್ಮಾಣ ಆಗಿದೆ.ಮೆಲಹಳ್ಳಿ ಬಳಿ ₹ 2.50 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, 9ರಿಂದ 12ನೇ ತರಗತಿಯ 100 ವಿದ್ಯಾರ್ಥಿನಿಯರು ಇಲ್ಲಿ ಉಳಿದುಕೊಳ್ಳಬಹುದು.ಪ್ರತಿತಿಂಗಳು ಸರ್ಕಾರ ₹ 900 ವೆಚ್ಚದಲ್ಲಿ ಉಚಿತ ಊಟ, ವಸತಿ ಮತ್ತಿತರ ಸೌಲಭ್ಯ ಒದಗಿಸುತ್ತದೆ.

ಅನುಮತಿಗೆ ಕಾಯುತ್ತಿದ್ದೇವೆ: ‘ಅಡುಗೆಯವರ ನೇಮಕಾತಿಗೆ ಸರ್ಕಾರದ ಮಟ್ಟದಲ್ಲಿ ಸಿದ್ಧತೆ ನಡೆದಿದೆ. ರಾತ್ರಿ ಕಾವಲುಗಾರ ಮತ್ತು ವಾರ್ಡನ್ ಆಯ್ಕೆ ಮಾಡಬೇಕಿದೆ. ತಾಂತ್ರಿಕ ಅನುಮೋದನೆಗೆಅಧಿಕಾರಿಗಳು ಕಾಯುತ್ತಿದ್ದು, ಅಗತ್ಯ ಅನುಮತಿ ಸಿಕ್ಕ ಕೂಡಲೇ ಅರ್ಜಿ ವಿತರಿಸಲಾಗುವುದು.ಪ್ರಸಕ್ತ ಸಾಲಿನಲ್ಲಿಯೇ ದಾಖಲಾತಿಗೆ ಅವಕಾಶ ಮಾಡಿಕೊಡಲಾಗುವುದು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿಇಒ ವಿ.ತಿರುಮಲಾಚಾರಿ ತಿಳಿಸಿದರು.

‘ಪಟ್ಟಣದಿಂದ ಹಾಸ್ಟೆಲ್ 4 ಕಿ.ಮೀ ದೂರ ಇದೆ. ವಸತಿ ನಿಲಯಕ್ಕೆ ಸೇರಲುವಿದ್ಯಾರ್ಥಿನಿಯರು ಸಾರಿಗೆ ಸಮಸ್ಯೆ ಎದುರಿಸುತ್ತಿದ್ದಾರೆ. ಸಮೀಪದಲ್ಲಿ ಕಸ್ತೂರಬಾ ವಸತಿಶಾಲೆ ಮತ್ತು ಆದರ್ಶ ವಿದ್ಯಾಲಯಗಳು ಇವೆ. ಈ ಮಕ್ಕಳ ಪೋಷಕರು ಹಾಸ್ಟೆಲ್ಗೆಸೇರಿಸಲು ಆಸಕ್ತಿ ತೋರುತ್ತಿಲ್ಲ. ಪಿಯು ಕಾಲೇಜುಗಳು ಪಟ್ಟಣದಲ್ಲಿವೆ. ಹೀಗಾಗಿ ದೂರದಹಾಸ್ಟೆಲ್ಗೆ ಬರಲು ಒಪ್ಪುತ್ತಿಲ್ಲ’ ಎನ್ನುತ್ತಾರೆ ಅಧಿಕಾರಿಗಳು.

ಉದುರಿದ ಗಾಜು:ಈಗಾಗಲೇ ಕಟ್ಟಡದ ನೆಲ ಅಂತಸ್ತಿನ ಕಿಟಕಿಯ ಗಾಜುಗಳು ಒಡೆದಿವೆ. ಕಾಂಪೌಂಡ್ ಇಲ್ಲದ ಕಾರಣದಿಂದಾಗಿ ಹಲವರು ಬಾಗಿಲು ಮತ್ತು ಕಿಟಕಿಗಳತ್ತ ಕಲ್ಲು ಬೀಸುತ್ತಾರೆ. ಮಕ್ಕಳ ಬಳಕೆಗೆ ಮೊದಲುಇಂತಹ ಸಮಸ್ಯೆಗಳನ್ನು ನಿವಾರಿಸಬೇಕು ಎನ್ನುತ್ತಾರೆ ಪೋಷಕರು.

ಶೀಘ್ರ ಆರಂಭ: ಶಾಸಕ ಎನ್.ಮಹೇಶ್
‘ಉದ್ಘಾಟನೆಯಾಗಿರುವ ಹೆಣ್ಣುಮಕ್ಕಳ ವಸತಿನಿಲಯ ತೆರೆಯಲು ಕ್ರಮ ವಹಿಸಲಾಗುವುದು.ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದು, ಎಲ್ಲ ವರ್ಗದ ಬಾಲಕಿಯರ ದಾಖಲಾತಿಗೆಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ಶಾಸಕ ಎನ್.ಮಹೇಶ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.