ಭಾನುವಾರ, ಏಪ್ರಿಲ್ 18, 2021
32 °C

‘ಜಮೀನು ಒತ್ತುವರಿ ಮಾಡಿಕೊಂಡಿಲ್ಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ‘ಬಿಳಿಗಿರಿರಂಗನಬೆಟ್ಟದಲ್ಲಿರುವ ಡಾ.ಎಚ್‌.ಸುದರ್ಶನ್‌ ನೇತೃತ್ವದ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರ (ವಿಜಿಕೆಕೆ)ವು ಯಾವುದೇ ಜಮೀನನ್ನು ಒತ್ತುವರಿ ಮಾಡಿಕೊಂಡಿಲ್ಲ’ ಎಂದು ಕೇಂದ್ರದ ಗೌರವಾಧ್ಯಕ್ಷ ಡಾ.ಎಂ.ಜಡೇಸ್ವಾಮಿ ಹೇಳಿದರು.

‘ವಿಜಿಕೆಕೆಯು ಸರ್ವೆ ನಂಬರ್‌ 4/66ಪಿ ನಲ್ಲಿರುವ 4 ಎಕರೆ ಜಮೀನನ್ನು ನಾವು ಕೃಷಿ ಉದ್ದೇಶಕ್ಕೆ ಖರೀದಿಸಿದ್ದೇವೆ. ಔಷಧಿ ಗಿಡಗಳು ಹಾಗೂ ಇತರೆ ಮರಗಳನ್ನು ಬೆಳೆಸಲಾಗಿದೆ’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಪರಿಸರ ಶಿಕ್ಷಣ ಆಯರ್ವೇದ ಚಿಕಿತ್ಸಾ ಕೇಂದ್ರ 14 ಎಕರೆ ಪ್ರದೇಶದಲ್ಲಿದೆ. ಇದರಲ್ಲಿ ಇದೇ ಸರ್ವೆ ನಂಬರ್‌( 4/66ರ 4 ಎಕರೆ) ಪ್ರದೇಶ ಮಾತ್ರ ವಿವಾದಿತ ಸ್ಥಳವಾಗಿದೆ. ಉಪ ವಿಭಾಗಾಧಿಕಾರಿಗಳ ನ್ಯಾಯಾಲಯ 2005 ಮತ್ತು 2011ರಲ್ಲಿ ಯಥಾಸ್ಥಿತಿ ಕಾಪಾಡಲು ಇಬ್ಬರಿಗೂ ತಿಳಿಸಿದೆ. ಅದರಂತೆ ಕಾಪಾಡಿಕೊಂಡು ಬರಲಾಗಿದೆ’ ಎಂದರು.

‘ವಿಜಿಕೆಕೆ ಪರಿಸರ ಶಿಕ್ಷಣ ಆಯುರ್ವೇದ ಚಿಕಿತ್ಸಾ ಕೇಂದ್ರವನ್ನು ಬುಡಕಟ್ಟು ಜನರ ಕಲ್ಯಾಣಕ್ಕಾಗಿ ನಿರ್ಮಿಸಲಾಗಿದೆ. 25ಕ್ಕೂ ಹೆಚ್ಚು ಗಿರಿಜನರು ಇಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಬುಡಕಟ್ಟು ಸಮುದಾಯ, ಸಂಸ್ಕೃತಿ ಅಧ್ಯಯನ, ಮಹಿಳೆಯರ ಸಬಲೀಕರಣ, ಶಿಕ್ಷಣ ಮತ್ತು
ಆರೋಗ್ಯಕ್ಕೆ ಇಲ್ಲಿ ಬರುವ ಆದಾಯವನ್ನು ಬಳಸಲಾಗುತ್ತದೆ. ಆದ್ದರಿಂದ, ಪ್ರಕೃತಿ ಕೇಂದ್ರ ಗಿರಿಜನರ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಸೀಮಿತವಾಗಿದೆ ಎಂದ ಅವರು, ಯಾವುದೇ ಸ್ಥಳವನ್ನು ಒತ್ತುವರಿ ಮಾಡಿಕೊಂಡಿಲ್ಲ’ ಎಂದು ಹೇಳಿದರು.

‘ಕೇಂದ್ರ ಸ್ಥಾಪನೆಗೆ ನಬಾರ್ಡ್ ಸಂಸ್ಥೆಯಿಂದ ಸಾಲ ಪಡೆದಿದ್ದು, ಬಡ್ಡಿಯೊಂದಿಗೆ ವಾಪಸ್ ಮಾಡಲಾಗಿದೆ. ಪರಿಸರ ಸ್ನೇಹಿ ಚಟುವಟಿಕೆಗಳಿಗಾಗಿ ಮಾತ್ರ ನಬಾರ್ಡ್ ಹಾಗೂ ಪ್ರವಾಸೋದ್ಯಮ ಇಲಾಖೆಗೆ ಪ್ರಸ್ತಾವ ಸಲ್ಲಿಸಿ ನಿಯಮಾನುಸಾರ ಲಭ್ಯವಿದ್ದ ಅನುದಾನ ಪಡೆದು ಸದುಪಯೋಗ ಮಾಡಿಕೊಳ್ಳಲಾಗಿದೆ. ಈ ವಿಚಾರದಲ್ಲಿ ರೈತ ಸಂಘದವರ ಆರೋಪ ಸತ್ಯಕ್ಕೆ ದೂರ’ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸೋಲಿಗ ಅಭಿವೃದ್ಧಿ ಸಂಘದ ಅಧ್ಯಕ್ಷ ರಂಗೇಗೌಡ, ಕಾರ್ಯದರ್ಶಿ ಬೇದೆಗೌಡ, ಗೊರುಕನ ವ್ಯವಸ್ಥಾಪಕ ಬಸವಣ್ಣ, ಮುತ್ತಯ್ಯ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು