ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಜೆಯ ಮೋಜಿಗೆ ರೈಲು ಯಾನ

Last Updated 19 ಸೆಪ್ಟೆಂಬರ್ 2019, 9:50 IST
ಅಕ್ಷರ ಗಾತ್ರ

ರೈಲಲ್ಲಿ ಸಂಚರಿಸುವಾಗ ಕಿಟಕಿಯಾಚೆ ಕಣ್ಣು ನೆಟ್ಟು ಕೂತರೆ ಸಾಕು. ಕ್ಷಣಕ್ಷಣಕ್ಕೂ ಬದಲಾಗುವ ಸರಣಿ ಚಿತ್ರಗಳು ಅನಾಯಾಸವಾಗಿ ದಕ್ಕುತ್ತವೆ. ಸುರಂಗ, ಬೆಟ್ಟ, ಕಾಡು, ಮರಳುಗಾಡಿನ ನಡುವೆ ಹಾದು ಹೋಗುವ ರೈಲುಗಳು ಗಮ್ಯ ತಲುಪಿಸುವುದಷ್ಟೇ ಅಲ್ಲ, ಸಾಗುವ ಹಾದಿಯ ಅನುಭವವನ್ನೂ ದಟ್ಟವಾಗಿ ಕಟ್ಟಿಕೊಡುತ್ತವೆ. ಈ ದಸರೆ ರಜೆಯಲ್ಲಿ ಒಬ್ಬಂಟಿಯಾದರೂ, ಗುಂಪಿನಲ್ಲಿದ್ದರೂ ರೈಲಿನಲ್ಲೊಂದು ಸುತ್ತಾಟ ಮಾಡಿ ಬನ್ನಿ. ನೆನಪಿನ ಚಿತ್ರಮಾಲಿಕೆಗೆ ಮತ್ತಷ್ಟು ಸುಂದರ ಪಟಗಳು ಸೇರ್ಪಡೆಯಾಗುವುದು ಖಂಡಿತ.

ಕಲ್ಕಾ-ಶಿಮ್ಲಾ (ಹಿಮಾಲಯನ್ ಕ್ವೀನ್ )

ಈ ಮಾರ್ಗದಲ್ಲಿ ಸಂಚರಿಸುವ ರೈಲು, ‘ಟಾಯ್ ಟ್ರೈನ್’ ಅನ್ನು ಹೋಲುತ್ತದೆ. 1903ರಲ್ಲಿ ಆರಂಭವಾದ 96 ಕಿ.ಮೀ. ಉದ್ದದ ಈ ಮಾರ್ಗ 102 ಸುರಂಗ, 82 ಸೇತುವೆಗಳನ್ನು ಹಾದುಹೋಗುತ್ತದೆ. ಪೈನ್, ಓಕ್, ದೇವದಾರು ಮರಗಳ ದಟ್ಟ ಕಾಡು ಕಣ್ಣಿಗೆ ತಂಪೆರೆಯುತ್ತದೆ. ಕಡಿದಾದ ಏರುಹಾದಿಯಲ್ಲಿ ಸಾಗುವ ಈ ಮಾರ್ಗ ಗಿನ್ನೆಸ್ ವರ್ಲ್ಡ್ ರೆಕಾರ್ಡ್‌ನಲ್ಲಿ ಸ್ಥಾನ ಪಡೆದಿದೆ. 2008ರಿಂದ ಯುನೆಸ್ಕೊ ವಿಶ್ವಪಾರಂಪರಿಕ ತಾಣವಾಗಿಯೂ ಜನಪ್ರಿಯವಾಗಿದೆ.

ಮುಂಬೈ-ಗೋವಾ

ಒಂದು ಕಡೆ ಸಹ್ಯಾದ್ರಿ ಬೆಟ್ಟಸಾಲು ಮತ್ತೊಂದು ಕಡೆ ಅರಬ್ಬಿ ಸಮುದ್ರ, ಇದರ ನಡುವೆ ಸಾಗುವ ಈ ರೈಲು 92 ಸುರಂಗಗಳು, 2000 ಸೇತುವೆಗಳನ್ನು ಹಾದುಹೋಗುತ್ತದೆ.

ಕನ್ಯಾಕುಮಾರಿ-ತಿರುವನಂತಪುರ

ದಕ್ಷಿಣ ಭಾರತದ ಅತ್ಯಂತ ರಮಣೀಯ ತಾಣಗಳಿಗೆ ಸಂಪರ್ಕ ಕಲ್ಪಿಸುವ ಈ ರೈಲು ಯಾನದಲ್ಲಿ, ಕೇರಳ ಹಾಗೂ ತಮಿಳುನಾಡಿನ ವಿಶಿಷ್ಟ ವಾಸ್ತುಶೈಲಿಯ ದೇಗುಲ, ಚರ್ಚ್‌ಗಳನ್ನು ಕಾಣಬಹುದು.

ಸಿಲಿಗುರಿ-ನಿವ್ ಮಾಲ್-ಹಾಸಿಮಾರಾ-ಅಲಿಪುರದೌರ್

ಮಹಾನಂದ ಅಭಯಾರಣ್ಯ, ಚಾಪ್ರಮಾರಿ ಅರಣ್ಯ, ಜಲದಾಪಾಡಾ ಅಭಯಾರಣ್ಯ, ಬುಕ್ಸಾ ಹುಲಿ ಸಂರಕ್ಷಿತ ತಾಣ ಹಾಗೂ ಹಲವಾರು ನದಿಗಳನ್ನು ಹಾದುಹೋಗುತ್ತದೆ.

ಜೋಧ್‌ಪುರ-ಜೈಸಲ್ಮೇರ್ (ಡೆಸರ್ಟ್ ಕ್ವೀನ್ )

ಐಷಾರಾಮಿ ಸೌಲಭ್ಯವುಳ್ಳ ವಿಶೇಷ ರೈಲು ಇದು. ಮರುಭೂಮಿ ಎಂದರೆ ಕೇವಲ ಬರಡು ಎನ್ನುವ ಭಾವನೆ ಹೋಗಲಾಡಿಸುತ್ತದೆ ಈ ಮಾರ್ಗದ ರೈಲು ಪ್ರಯಾಣ. ಈ ಯಾನದಿಂದ, ಹಸಿರಿನಷ್ಟೇ ಮರಳುಗಾಡು ಸಹ ಉಲ್ಲಾಸ ತರಬಲ್ಲದು ಎನ್ನುವ ಅನುಭವವೂ ದಕ್ಕುತ್ತದೆ. ಮರಳುಗಾಡಿನ ಯಾನದಲ್ಲಿ ಅಲ್ಲಲ್ಲಿ ಅಲೆಯುತ್ತಿರುವ ಒಂಟೆಗಳ ಗುಂಪು ಕಾಣಸಿಗುತ್ತವೆ. ಮರಳುಗಾಡಿನ ನಡುವಿನ ಸೂರ್ಯೋದಯ ಹೊಸದೇ ನೋಟ ನೀಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT