ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗೋಲ್ಡನ್ ಬ್ರಿಡ್ಜ್’ ಮೇಲೆ ಕಾಲಿಟ್ಟಾಗ...

Last Updated 12 ಆಗಸ್ಟ್ 2018, 19:30 IST
ಅಕ್ಷರ ಗಾತ್ರ

ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ವಿಯೆಟ್ನಾಂನ ‘ಬಂಗಾರದ ಸೇತುವೆ’ (ಗೋಲ್ಡನ್‌ ಬ್ರಿಡ್ಜ್) ದೇಶದ ಪ್ರವಾಸೋದ್ಯಮದ ದಿಕ್ಕನ್ನೇ ಬದಲಿಸಿದೆ. ಈ ನಿರ್ಮಾಣದಿಂದಾಗಿ ವಿಶ್ವದಲ್ಲೇ ಅತ್ಯಂತ ವೇಗವಾಗಿ ಪ್ರವಾಸೋದ್ಯಮ ಕ್ಷೇತ್ರವನ್ನು ಅಭಿವೃದ್ಧಿಪಡಿಸುತ್ತಿರುವ ದೇಶ ಎಂಬ ಹೆಗ್ಗಳಿಕೆಗೂ ವಿಯೆಟ್ನಾಂ ಪಾತ್ರವಾಗಿದೆ.

ಇದು ಊರಿಂದೂರಿಗೆ ಸಂಪರ್ಕ ಕಲ್ಪಿಸುವ ಸೇತುವೆಯಲ್ಲ. ನಿಸರ್ಗ ಸೌಂದರ್ಯವನ್ನು ಸವಿಯುವ ಉದ್ದೇಶಕ್ಕಾಗಿ ಮಾತ್ರ ಈ ಸೇತುವೆ ನಿರ್ಮಿಸಿರುವುದು ವಿಶೇಷ. ಸೇತುವೆಯ ಎರಡೂ ದಿಕ್ಕುಗಳಲ್ಲಿ ಹಚ್ಚ ಹಸಿರಿನ ಬೆಟ್ಟಗಳು, ಕೆಳಭಾಗದಲ್ಲಿ ಮೈ ಝುಮ್ಮೆನ್ನಿಸುವ ಕಣಿವೆ, ಸ್ವಚ್ಛ ಗಾಳಿ, ಮುಗಿಲೇ ಕೈಗೆ ತಾಕಿದಂತೆ... ಈ ಸೇತುವೆಯ ಮೇಲೆ ನಡೆದು ಹೋಗುತ್ತಿದ್ದರೆ ಸ್ವರ್ಗ ಸುಖವೇ ಸರಿ. ಪ್ರವಾಸಿಗರ ಪಾಲಿಗೆ ನಿಸರ್ಗದ ರಮಣೀಯ ಸೌಂದರ್ಯವನ್ನು ಕಣ್ತುಂಬಿಕೊಳ್ಳುವುದೇ ಸೊಗಸಾದ ಅನುಭವ.

ಡಾ–ನಾಂಗ್‌ನ ಹೊರಭಾಗದಲ್ಲಿಬಾಲ್‌ ಪರ್ವತದ ನಡುವೆ ಇರುವ ಈ ಸೇತುವೆ ವಿಶ್ವದ ಅತ್ಯದ್ಭುತ ಸೇತುವೆಗಳಲ್ಲೊಂದು. ಈ ಸೇತುವೆಯನ್ನು ಬೃಹತ್‌ ಕಲ್ಲಿನ ಎರಡು ಕೈಗಳು ಎತ್ತಿ ಹಿಡಿದಂತೆ ವಿನ್ಯಾಸಗೊಳಿಸಲಾಗಿದೆ.

‘ಕಲ್ಲಿನಿಂದ ಕೊರೆದು ಮಾಡಿರುವ ವಿನ್ಯಾಸದಂತೆ ಕಾಣುವ ಈ ಕೈಗಳ ಅಸ್ಥಿಪಂಜರವನ್ನು ಉಕ್ಕಿನ ಮೆಷ್‌ಗಳಿಂದ ನಿರ್ಮಾಣ ಮಾಡಲಾಗಿದೆ. ನಂತರ ಫೈಬರ್‌ ಗ್ಲಾಸ್‌ನಿಂದ ಅಂತಿಮ ಸ್ಪರ್ಶ ನೀಡಲಾಗಿದೆ. ಒಂದು ವರ್ಷದಲ್ಲಿ ಸೇತುವೆ ಪೂರ್ಣಗೊಂಡಿದೆ’ ಎಂದು ಸೇತುವೆ ನಿರ್ಮಾಣ ಮಾಡಿರುವ ಟಿ.ಎ. ಲ್ಯಾಂಡ್‌ಸ್ಕೇಪಿಂಗ್‌ ಆರ್ಕಿಟೆಕ್ಟ್‌ ಸಂಸ್ಥೆಯ ಪ್ರತಿನಿಧಿ ಬೋರ್ಡ್‌ ಪಂಡ ತಿಳಿಸಿದ್ದಾರೆ.

ವಿಯೆಟ್ನಾಂಗೆ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ಉದ್ದೇಶದಿಂದ ವಿಭಿನ್ನ ಮಾದರಿಯಲ್ಲಿ ಸೇತುವೆ ನಿರ್ಮಾಣ ಮಾಡಲಾಗಿದೆ. 2018ರ ಮೊದಲ ಎರಡು ತಿಂಗಳಲ್ಲಿ2.86 ಲಕ್ಷ ವಿದೇಶಿ ಪ್ರವಾಸಿಗರು ಭೇಟಿ ನೀಡಿದ್ದಾರೆ. ಪ್ರವಾಸಿಗರ ಸಂಖ್ಯೆ 2017ಕ್ಕೆ ಹೋಲಿಸಿದರೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ.

ಪ್ರವಾಸೋದ್ಯಮದಲ್ಲಿ ಏರುಗತಿಯಲ್ಲಿ ಸಾಗುತ್ತಿರುವ ಜಗತ್ತಿನ ಹತ್ತು ರಾಷ್ಟ್ರಗಳ ಪಟ್ಟಿಯಲ್ಲಿ ವಿಯೆಟ್ನಾಂ ಸ್ಥಾನ ಪಡೆದಿದೆ ಎಂದು ಯುನೈಟೆಡ್‌ ನ್ಯಾಷನಲ್ಸ್‌ ವರ್ಲ್ಡ್‌ ಟೂರಿಸಂ ಆರ್ಗನೈಟೇಷನ್‌ ವರದಿ ತಿಳಿಸಿದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT