ಲಡಾಖ್‌ನಲ್ಲಿರುವ ಪರ್ವತಗಳ ತಪ್ಪಲಿನಲ್ಲಿ ಹರಿಯುವ ಶೈಯೋಕ್ ನದಿಯ ಸಂಗ ಕೆಲವೊಮ್ಮೆ ಏಕತಾನತೆ ಅನಿಸಿದರೆ, ಅದು ಮರೆಯಾದಾಗ ಕಸಿವಿಸಿ ಸೃಷ್ಟಿಯಾಗುತ್ತದೆ. ಲಡಾಖಿನಲ್ಲಿ ಹಲವು ನದಿಗಳು ಸೇರಿ ಒಂದುಗೂಡಿದರೆ ಇವೇ ನದಿ ದೇಶಗಳ ಗಡಿಯಾಗಿ ಬೇರ್ಪಡಿಸುವ ರೇಖೆಗಳಾಗುತ್ತವೆ. ಇಂಥ ನದಿಯ ದಡದಲ್ಲೇ ಸಾಗಿದಾಗ ಆದ ಸಂಭ್ರಮ, ಭ್ರಮೆ, ದುಗುಡ ಹೀಗೆ ನಾನಾನುಭವಗಳಿಗೆ ಅಕ್ಷರ ರೂಪ ನೀಡಿದ್ದಾರೆ ಲೇಖಕರು.