ಗಡಿಪಾರಿನಿಂದ ತಪ್ಪಿಸಿಕೊಳ್ಳಲು ವಕೀಲರನ್ನೇ ನಂಬಿರುವ ಮಲ್ಯ

ನವದೆಹಲಿ: ಭಾರತಕ್ಕೆ ಗಡಿಪಾರು ಆಗುವುದರಿಂದ ತಪ್ಪಿಸಿಕೊಳ್ಳಲು ಉದ್ಯಮಿ ವಿಜಯ್ ಮಲ್ಯ ಅವರು ತಮ್ಮ ವಕೀಲೆ ಕ್ಲಾರ್ ಮಾಂಟೆಗೊಮೆರಿ ಅವರನ್ನೇ ನಂಬಿಕೊಂಡಿದ್ದಾರೆ. ಚಿಲಿಯ ಮಾಜಿ ಸರ್ವಾಧಿಕಾರಿ ಅಗಸ್ಟೊ ಪಿನೊಷೆಟ್, ಥಾಯ್ಲೆಂಡ್ನ ಮಾಜಿ ಪ್ರಧಾನಿ ತಕ್ಸಿನ್, ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸ್ಸಾಂಜ್ ಗಡಿಪಾರು ಪ್ರಕರಣಗಳಲ್ಲಿ ಅವರ ಪರ ಕ್ಲಾರ್ ವಕಾಲತ್ತು ವಹಿಸಿದ್ದರು. ಗಡಿಪಾರು ಪ್ರಕರಣಗಳಲ್ಲೇ ಕ್ಲಾರ್ ಅವರು ಪರಿಣಿತಿ.
ಕ್ಲಾರ್ ವಹಿಸಿಕೊಂಡ ಪ್ರಕರಣಗಳಲ್ಲಿ ಬಹುತೇಕ ಜಯಗಳಿಸಿದ್ದಾರೆ. ಈಗ ಮಲ್ಯ ಅವರ ಪ್ರಕರಣವನ್ನೂ ಅವರೇ ನಿರ್ವಹಿಸುತ್ತಿದ್ದಾರೆ. ಈ ಪ್ರಕರಣದ ತೀರ್ಪು ಸೋಮವಾರ ಪ್ರಕಟವಾಗಲಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.