ಹಂದಿಯೊಂದಿಗೆ ಬಂದಿದ್ದ ‘ರ‍್ಯಾಂಬೊ’ ಚಿತ್ರ ಗಾಂಧಿನಗರದಲ್ಲಿ ಹೊಸ ಹವಾ ಸೃಷ್ಟಿಸಿತ್ತು. ಚಿತ್ರದಲ್ಲಿ ದುಡಿದ ಎಲ್ಲರಿಗೂ ದೊಡ್ಡ ಬ್ರೇಕ್ ಸಿಕ್ಕಿತ್ತು. ನಟ ಶರಣ್ ಅವರ ಸಿನಿಮಾ ಬದುಕಿಗೆ ಈ ಸಿನಿಮಾ ಹೊಸ ಚೈತನ್ಯ ನೀಡಿದ್ದು ಗುಟ್ಟೇನಲ್ಲ. ಇದೇ ತಂಡ ಮತ್ತೆ ‘ರ‍್ಯಾಂಬೊ 2’ ಆಗಿ ಜನರ ಮುಂದೆ ಬರಲು ಸಜ್ಜಾಗಿದೆ. ಆದರೆ, ಈ ಚಿತ್ರದಲ್ಲಿ ಹಂದಿ ಮಾತ್ರ ಇಲ್ಲ!

ನಾಲ್ಕು ಪಾತ್ರಗಳ ಸುತ್ತ ಕಥೆ ಹೆಣೆಯಲಾಗಿದೆಯಂತೆ. ಶ್ರೀಲಂಕಾದ ಗಡಿಯಿಂದ ಪಾಕಿಸ್ತಾನದ ಗಡಿವರೆಗೂ ಪಯಣಿಸಿ ಚಿತ್ರೀಕರಣ ನಡೆಸಲಾಗಿದೆಯಂತೆ. ಬದುಕಿನ ಅರ್ಥ ತಿಳಿಸುವ ಬಗೆಯನ್ನು ಕಾಮಿಡಿ ಮಿಶ್ರಿತ ಥ್ರಿಲ್ಲರ್‌ನೊಂದಿಗೆ ಹೇಳಲಾಗಿದೆ ಎಂಬುದು ಚಿತ್ರತಂಡದ ಅಂಬೋಣ.

ಚಿತ್ರದ ಬಗ್ಗೆ ಹೇಳಲು ಚಿತ್ರತಂಡ ಸುದ್ದಿಗೋಷ್ಠಿ ಕರೆದಿತ್ತು. ‘ಸಣ್ಣದಾದ ಎಳೆಯೊಂದನ್ನು ಇಟ್ಟುಕೊಂಡು ಕಥೆ ಹೊಸೆಯಲಾಗಿದೆ. ಇದೊಂದು ಭಿನ್ನವಾದ ಕಾಮಿಡಿ ಚಿತ್ರ’ ಎಂದು ನಿರ್ದೇಶಕ ಅನಿಲ್‌ಕುಮಾರ್. ರ‍್ಯಾಂಬೊ ಚಿತ್ರದಲ್ಲಿ ಕೆಲಸ ಮಾಡಿದ್ದ ತಂತ್ರಜ್ಞರೇ ಬಂಡವಾಳ ಹೂಡಿರುವುದು ಈ ಚಿತ್ರದ ವಿಶೇಷಗಳಲ್ಲೊಂದು. ‘ಇಂಡಸ್ಟ್ರಿಯಲ್ಲಿ ನಾನು ಕ್ಯಾರೆಕ್ಟರ್ ಆ್ಯಕ್ಟರ್ ಆಗಿದ್ದೆ. ರ‍್ಯಾಂಬೊ ಚಿತ್ರ ನನಗೆ ಹೊಸ ಜೀವನ ನೀಡಿತು. ಹಿಂದಿನ ಚಿತ್ರಗಳಲ್ಲಿ ನಾನು ಹೆಚ್ಚು ಮಾತನಾಡಿದ್ದೇನೆ. ಇದರಲ್ಲಿ ಮಾತು ಕಡಿಮೆ. ಇದು ಪಾತ್ರದ ಮೂಲಕ ಮಾತನಾಡುವ ಸಿನಿಮಾ’ ಎಂದರು ನಾಯಕ ಶರಣ್.

ಚಿತ್ರಕ್ಕೆ ಹಣ ಹೂಡುವ ಮೂಲಕ ನಿರ್ಮಾಪಕನಾದ ಖುಷಿಯಲ್ಲಿದ್ದರು ಹಾಸ್ಯನಟ ಚಿಕ್ಕಣ್ಣ. ಅವರೇ ಸ್ವಯಂಪ್ರೇರಿತರಾಗಿ ಚಿತ್ರಕ್ಕೆ ಹಣ ಹೂಡಿದ್ದಾರಂತೆ. ‘ಚಿತ್ರದಲ್ಲಿ ಡಿ.ಜೆ. ಪಾತ್ರ ಮಾಡಿದ್ದೇನೆ. ನನ್ನ ಹೇರ್ ಸ್ಟೈಲ್ ಬದಲಾಗಿದೆ. ಬಂಡವಾಳ ಹೂಡಿದಾಗ ಮೊದಲು ಭಯವಿತ್ತು. ಆದರೆ, ಎಲ್ಲರೂ ಒಟ್ಟುಗೂಡಿ ಒಳ್ಳೆಯ ಸಿನಿಮಾ ಮಾಡಿರುವ ಖುಷಿಯಿದೆ’ ಎಂದು ಹೇಳುವುದನ್ನು ಅವರು ಮರೆಯಲಿಲ್ಲ.

ನಟಿ ಆಶಿಕಾ ಮೊದಲ ಬಾರಿಗೆ ಈ ಚಿತ್ರದ ಮೂಲಕ ಪೂರ್ಣಪ್ರಮಾಣದ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ‘ರಾಜಸ್ಥಾನದಲ್ಲಿ ಕಡುಬಿಸಿಲಿನ ನಡುವೆಯೂ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದು ಖುಷಿ ಕೊಟ್ಟಿತು. ನಾನು ಚಿತ್ರದಲ್ಲಿ ಬೋಲ್ಡ್ ಹುಡುಗಿಯಾಗಿ ನಟಿಸಿದ್ದೇನೆ’ ಎಂದರು. ಚಿತ್ರದ ಕ್ರಿಯೇಟಿವ್ ಹೆಡ್ ತರುಣ್ ಸುಧೀರ್, ‘ಇದು ಅಚಾನಕ್ ಆಗಿ ನಿರ್ಮಾಣಗೊಂಡ ಚಿತ್ರ. ಈಗಾಗಲೇ ಚಿತ್ರೀಕರಣ ಮುಗಿದಿದೆ’ ಎಂದರು. ಅರ್ಜುನ್ ಜನ್ಯ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿರುವ ಜೊತೆಗೆ ಬಂಡವಾಳ ಹೂಡಿಕೆಯ ಪಾಲುದಾರರಲ್ಲಿಯೂ ಅವರು ಒಬ್ಬರು. ಸುಧಾಕರ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಮುಂದಿನ ತಿಂಗಳು ಆಡಿಯೊ ಬಿಡುಗಡೆಗೆ ಚಿತ್ರತಂಡ ಸಿದ್ಧತೆ ನಡೆಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.