ಬ್ರಿಟಿಷ್ ಕೌನ್ಸಿಲ್ ತನ್ನ ‘ಗ್ರೇಟ್ ಟಾಕ್ಸ್’ ಉಪನ್ಯಾಸ ಮಾಲಿಕೆಯಲ್ಲಿ ಖ್ಯಾತ ವಿಜ್ಞಾನಿ, ಮತ್ತು ಲೇಖಕ ಪ್ರೊಫೆಸರ್ ಲೂಯಿಸ್ ಡಾರ್ಟ್ನೆಲ್ ಅವರ ಉಪನ್ಯಾಸವನ್ನು ಜುಲೈ 31ರಂದು ಆಯೋಜಿಸಿದೆ. ಕಸ್ತೂರ್ಬಾ ಕ್ರಾಸ್ ರಸ್ತೆಯಲ್ಲಿರುವ ಬ್ರಿಟಿಷ್ ಕೌನ್ಸಿಲ್ ಕಚೇರಿಯಲ್ಲಿ ಬೆಳಿಗ್ಗೆ 11ಗಂಟೆಗೆ ಉಪನ್ಯಾಸ ನಡೆಯಲಿದೆ.

ಡಾ. ಡಾರ್ಟ್ನೆಲ್ ಅವರು ‘ಆಸ್ಟ್ರೋಬಯೋಲಜಿ ಮತ್ತು ಅನ್ಯಗ್ರಹ ಜೀವಿ’ಗಳ ಬಗ್ಗೆ ಮಾತನಾಡಲಿದ್ದಾರೆ.

ಯೂನಿವರ್ಸಿಟಿ ಆಫ್ ವೆಸ್ಟ್ಮಿಸ್ಟರ್ನಲ್ಲಿ ಸೈನ್ಸ್ ಕಮ್ಯೂನಿಕೇಷನ್ ಪ್ರೊಫೆಸರ್ ಆಗಿರುವ ಲೂಯಿಸ್ ಡಾರ್ಟ್ನೆಲ್ ಅವರು ಟೆಡೆಕ್ಸ್ ಭಾಷಣಕಾರರಾಗಿ ಜನಪ್ರಿಯರಾದವರು. ಆಸ್ಟ್ರೋಬಯೋಲಜಿಯಲ್ಲಿ ಡಾಕ್ಟರೇಟ್ ಪದವೀಧರ. ನಾಲ್ಕು ಪುಸ್ತಕಗಳನ್ನು ಬರೆದಿದ್ದಾರೆ. ‘ನ್ಯೂ ಸೈಂಟಿಸ್ಟ್’ ಮತ್ತಿತರ ಪ್ರಮುಖ ವಿಜ್ಞಾನ ನಿಯತಕಾಲಿಕಗಳಲ್ಲಿ ಅವರ ಲೇಖನಗಳು ಪ್ರಕಟವಾಗಿವೆ.ಅವರ ಇತ್ತೀಚಿನ ಕೃತಿ ‘ಒರಿಜಿನ್ಸ್: ಹೌ ದಿ ಅರ್ಥ್ ಮೇಡ್ ಅಸ್’, ‘ಸಂಡೇ ಟೈಮ್ಸ್’ನ ಅತ್ಯಧಿಕ ಮಾರಾಟ ಕೃತಿ ಎಂಬ ಹೆಗ್ಗಳಿಕೆ ಪಡೆದಿದೆ.

ಭಾರತೀಯ ವಿದ್ಯಾರ್ಥಿಗಳಿಗೆ ಹೆಚ್ಚು ಅವಕಾಶ ಸೃಷ್ಟಿಸಲು ಬ್ರಿಟಿಷ್ ಕೌನ್ಸಿಲ್ ವಿವಿಧ ವಿಷಯಗಳ ಮೇಲೆ ವರ್ಷವಿಡೀ ಉಪನ್ಯಾಸಗಳನ್ನು ಏರ್ಪಡಿಸಲಿದೆ.ಇಂಗ್ಲೆಂಡ್ನ ಪ್ರಮುಖ ಉಪನ್ಯಾಸಕಾರರು ತಮ್ಮ ಜ್ಞಾನವನ್ನು ಹಂಚಿಕೊಳ್ಳಲಿದ್ದಾರೆ.

ನೋಂದಣಿ ಮತ್ತು ಇತರ ವಿವರಗಳಿಗೆ ಸಂಪರ್ಕಿಸಿ: www.britishcouncil.in/events/great-talks

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.