ಮಂಗಳವಾರ, ಜನವರಿ 28, 2020
21 °C

ಬ್ರೂಸ್ಕಿ ಬ್ರೂಯಿಂಗ್‌ನಿಂದ ‘ಕ್ರಿಸ್‌ಮಸ್‌ ಬ್ರಂಚ್‌’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಡಿ.25 ರಂದು ಕ್ರಿಸ್‌ಮಸ್‌ ಬ್ರಂಚ್‌ ಆಯೋಜಿಸುವ ಮೂಲಕ ಬಿವೈಜಿ ಬ್ರೂಸ್ಕಿ ಬ್ರೂಯಿಂಗ್‌ ಕಂಪೆನಿ, ತಿಂಡಿಪ್ರಿಯರಿಗೆ ಕ್ರಿಸ್‌ಮಸ್‌ ಉಡುಗೊರೆ ನೀಡುತ್ತಿದೆ. 

ಬ್ರೂಸ್ಕಿ ಬ್ರೂಯಿಂಗ್‌, ತನ್ನ ಸವಿರುಚಿಯಾದ ತಿಂಡಿ–ತಿನಿಸುಗಳಿಗೆ ಪ್ರಸಿದ್ಧಿ. ಆದರೆ ಕ್ರಿಸ್‌ಮಸ್‌ ದಿನದಂದು ಕೇವಲ ದೈನಂದಿನ ಮೆನು ಮಾತ್ರವಲ್ಲದೇ, ಕ್ರಿಸ್‌ಮಸ್‌ ಬ್ರಂಚ್‌ನಲ್ಲಿ ವಿವಿಧ ಕೇಕ್‌ಗಳು, ಆಹಾರ ಪದಾರ್ಥಗಳು ಕೂಡ ಇರಲಿದೆ. 

ಸಾಮಾನ್ಯವಾಗಿ ಕ್ರಿಸ್‌ಮಸ್‌ ತಿಂಗಳಲ್ಲಿ ಸಿಗುವ ಪ್ಲಮ್‌, ಕ್ರ್ಯಾಮ್‌ಬೆರಿ, ಸ್ಟಾರ್‌ ಕಟ್‌ ಕೇಕ್‌ನಂತಹ ವಿವಿಧ ಬಗೆಯ ಕೇಕ್‌ಗಳು ಬ್ರೂಸ್ಕಿ ಬ್ರೂಯಿಂಗ್‌ನ ಕ್ರಿಸ್‌ಮಸ್‌ ಬ್ರಂಚ್‌ನಲ್ಲಿ ಇರಲಿದೆ. ಇದರ ಜೊತೆಗೆ ಕ್ರಿಸ್‌ಮಸ್‌ ವಿಶೇಷ ಖಾದ್ಯಗಳಾದ, ಮುಲ್ಲೆಡ್‌ ವೈನ್‌, ಎಗ್‌ನಾಗ್‌, ಟರ್ಕಿ, ಸಂಪ್ರದಾಯಿಕ ಯೂಲ್‌ ಲಾಗ್‌, ಕ್ರೊಕೆಂಬಷ್‌, ಮಿನ್ಸ್‌ಡ್‌ ಪೈ ಕೂಡ ಇರಲಿವೆ. ಬಿವೈಜಿ ಬ್ರೂಸ್ಕಿ ಬ್ರೂಯಿಂಗ್‌ ಕಂಪೆನಿಯ ಎರಡೂ ಶಾಖೆಗಳಲ್ಲೂ ಕ್ರಿಸ್‌ಮಸ್‌ ಬ್ರಂಚ್‌ ಲಭ್ಯವಿದೆ. ಕ್ರಿಸ್‌ಮಸ್‌ ಬ್ರಂಚ್‌ ಪ್ಯಾಕೇಜ್‌ ₹950. ಡಿ.25ರಂದು ಮಧ್ಯಾಹ್ನ 12.30 ರಿಂದ ಕ್ರಿಸ್‌ಮಸ್‌ ಬ್ರಂಚ್‌ ಆರಂಭ.

ಸ್ಥಳ:  ಬಿವೈಜಿ ಬ್ರೂಸ್ಕಿ ಬ್ರೂಯಿಂಗ್‌ ಕಂಪೆನಿ, ಹೆಣ್ಣೂರು ಬಾಗ್ಲೂರು ರಸ್ತೆ, (ಎಕ್ಸ್‌ಎಲ್‌ಆರ್‌8 ಒಳಂಗಾಣ ಸ್ಟೇಡಿಯಂ, ವಿಸ್ತಾರ್‌ ಮುಂಭಾಗ) ಬಿವೈಜಿ ಬ್ರೂಸ್ಕಿ ಬ್ರೂಯಿಂಗ್‌ ಕಂಪೆನಿ, ಸರ್ಜಾಪುರ ರಸ್ತೆ, ವಿಪ್ರೋ ಕಾರ್ಪೋರೇಟ್‌ ಕಚೇರಿ ಹತ್ತಿರ  

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು