ಭಾನುವಾರ, ಡಿಸೆಂಬರ್ 8, 2019
21 °C

‘ಕ್ರಿಯೇಟಿವ್ ಎನ್‌ಕೌಂಟರ್ಸ್‌’ ಕಲಾ ಶಿಬಿರ

Published:
Updated:

ಸಾರ್ವಜನಿಕರಿಗೆ ಕಲಾವಿದರೊಂದಿಗೆ ಬೆರೆಯಲು ಮತ್ತು ಕಲೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸಿಎಂಆರ್ ಯೂನಿವರ್ಸಿಟಿ ‘ಕ್ರಿಯೇಟಿವ್ ಎನ್‌ಕೌಂಟರ್ಸ್‌’ ಕಲಾ ಶಿಬಿರವನ್ನು ಕ್ಯಾಂಪಸ್‌ನಲ್ಲಿ ಇತ್ತೀಚೆಗೆ ಆಯೋಜಿಸಿತ್ತು. ದೇಶದ ವಿವಿಧ ಪ್ರದೇಶಗಳ ಟೆರ‍್ರಾಕೋಟಾ, ಟೇಪೆಸ್ಟಿ, ಚಿತ್ರಕಲೆ, ಶಿಲ್ಪಕಲೆ ಮತ್ತಿತರ ಕ್ಷೇತ್ರಗಳ 19 ಕಲಾವಿದರು ಭಾಗವಹಿಸಿದ್ದರು.

ಚಿತ್ರಕಲಾ ಪರಿಷತ್ತಿನ ಪ್ರಾಂಶುಪಾಲ ತೇಜೇಂದ್ರ ಸಿಂಗ್ ಬವೋನಿ ಮತ್ತು ಸಿಎಂಆರ್ ಯೂನಿವರ್ಸಿಟಿಯ ಸ್ಕೂಲ್ ಆಫ್ ಆರ್ಕಿಟೆಕ್ಚರ್‌ನ ನಿರ್ದೇಶಕ ಮುರಳೀಧರ್ ಈ ಕಲಾ ಶಿಬಿರ ರೂಪಿಸಿದ್ದರು. ಕಲಾವಿದರಿಗೆ ತಮ್ಮ ಕಲೆ ಮತ್ತು ಅನುಭವಗಳನ್ನು ಸಾರ್ವಜನಿಕರು ಮತ್ತು ಕಲಾಪ್ರೇಮಿಗಳಿಗೆ ಪ್ರದರ್ಶಿಸಲು ಮತ್ತು ಹಂಚಿಕೊಳ್ಳಲು ಅವಕಾಶ ಕಲ್ಪಿಸಲಾಯಿತು. ಸಾರ್ವಜನಿಕರಿಗಾಗಿ ಕಲಾ ಪ್ರದರ್ಶನವನ್ನೂ ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಸಿಎಂಆರ್ ಸಂಸ್ಥೆಗಳ ಹಾಗೂ ಸಿಎಂಆರ್ ಯೂನಿವರ್ಸಿಟಿಯ ಅಧ್ಯಕ್ಷ ಕೆ.ಸಿ.ರಾಮಮೂರ್ತಿ, ‘ದೇಶದ ವಿವಿಧ ಭಾಗಗಳಿಂದ ಉದಯೋನ್ಮುಖ ಕಲಾವಿದರನ್ನು ಯೂನಿವರ್ಸಿಟಿ ಕ್ಯಾಂಪಸ್‌ಗೆ ಆಹ್ವಾನಿಸಿ ಪ್ರೋತ್ಸಾಹಿಸುತ್ತೇವೆ. ಅವರ ಕಲಾಕೃತಿಗಳು ಕ್ಯಾಂಪಸ್‌ನಲ್ಲಿ ಪ್ರದರ್ಶನಗೊಳ್ಳಲು ಅವಕಾಶ ಕಲ್ಪಿಸುವುದರ ಜೊತೆಗೆ ಅವರ ಸೃಜನಶೀಲತೆಯನ್ನು ದಾಖಲಿಸುವ ವಿಶೇಷ ಪುಸ್ತಕವನ್ನು ಹೊರತರುತ್ತಿದ್ದೇವೆ’ ಎಂದರು. ಹಿರಿಯ ಕಲಾವಿದೆ ಹಾಗೂ ರೇಖಾ ರಾವ್ ಕಲಾವಿದರಿಗೆ ವೇದಿಕೆ ಸೃಷ್ಟಿಸುವ ಯೂನಿವರ್ಸಿಟಿಯ ಪ್ರಯತ್ನಗಳನ್ನು ಶ್ಲಾಘಿಸಿದರು. 

ಸಿಎಂಆರ್ ಯೂನಿವರ್ಸಿಟಿ 
ಸಿಎಂಆರ್ ಯೂನಿವರ್ಸಿಟಿ(ಸಿಎಂಆರ್‌ಯು) ಕರ್ನಾಟಕದ ಖಾಸಗಿ ಯೂನಿವರ್ಸಿಟಿಯಾಗಿದ್ದು ಸಿಎಂಆರ್ ಯೂನಿವರ್ಸಿಟಿ ಕಾಯ್ದೆ-2013ರ ಅನ್ವಯ ನಿರ್ವಹಿಸಲ್ಪಡುತ್ತಿದೆ. ಸಿಎಂಆರ್ ಯೂನಿವರ್ಸಿಟಿಯು ವಿಶ್ವವಿದ್ಯಾಲಯ ಶಿಕ್ಷಣವನ್ನು ತಾಂತ್ರಿಕ, ಆರೋಗ್ಯ, ಮ್ಯಾನೇಜ್‌ಮೆಂಟ್, ಜೀವ ವಿಜ್ಞಾನಗಳು ಮತ್ತಿತರ ಉನ್ನತ ಹಾಗೂ ವೃತ್ತಿಪರ ಶಿಕ್ಷಣದ ಸಂಬಂಧಿತ ಕ್ಷೇತ್ರಗಳಿಗೆ ಉತ್ತೇಜಿಸುವ ಉದ್ದೇಶ ಹೊಂದಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು