ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ಯಾಷನ್ ಟ್ರೆಂಡ್ಸ್-2020

Last Updated 1 ಜನವರಿ 2020, 19:31 IST
ಅಕ್ಷರ ಗಾತ್ರ
ADVERTISEMENT
""
""

ಹೊಸ ವರ್ಷದ ಮ್ಯಾಜಿಕ್ಕೇ ಹಾಗೆ. ಹಳತೆಲ್ಲಾ ಮೂಲೆಗೆ ಸರಿದು ಹೊಸತು ಮಾತ್ರ ಕಣ್ಣುಗಳನ್ನು ಕೋರೈಸುವಂತೆ ಮಾಡುತ್ತದೆ. ಫ್ಯಾಷನ್‌ ಜಗತ್ತು ಈ ವಿಷಯದಲ್ಲಿ ತುಂಬ ಕ್ರಿಯೇಟಿವ್‌. 2020ರ ಕೆಲವು ಫ್ಯಾಷನ್ ಟ್ರೆಂಡ್ಸ್ ಇಲ್ಲಿವೆ.

ಉಗುರು ಉಂಗುರುಗಳು

ಉಗುರಿಗೆ ಬಣ್ಣ ಹಚ್ಚುವುದು, ಬಗೆ ಬಗೆಯ ವಿನ್ಯಾಸಗಳನ್ನು ಆ ಬಣ್ಣಗಳಲ್ಲಿ ಮೂಡಿಸುವುದು, ಮಣಿಗಳನ್ನು ಮೆತ್ತುವುದು… ಹೀಗೆ ಹಲವು ಬಗೆಯ ನೇಲ್ ಮೇಕಪ್‌ಗಳು ನಿನ್ನೆಯವರೆಗೂ ಸದ್ದು ಮಾಡಿವೆ. ಈ ವರ್ಷ ಹೊಸದಾಗಿ ಉಗುರು ಉಂಗುರಗಳು ಮಾರುಕಟ್ಟೆಗೆ ಲಗ್ಗೆ ಇಡಲಿವೆ.

ಚಿನ್ನ, ಬೆಳ್ಳಿ ಲೋಹಗಳನ್ನು ಬಳಸಿ ಮುತ್ತುಗಳು, ವಜ್ರಗಳು, ವರ್ಣರಂಜಿತ ಹರಳುಗಳನ್ನು ಹುದುಗಿಸಿದ ಉಂಗುರಗಳನ್ನು ತಯಾರಿಸುತ್ತಿದ್ದಾರೆ ವಿನ್ಯಾಸಕಾರರು. ಈಗಾಗಲೇ ಕೆಲವು ದೇಶಗಳಲ್ಲಿ ಇಂತಹ ಉಂಗುರಗಳು ಬಳಕೆಯಲ್ಲಿವೆ. ಈ ವರ್ಷವೆಲ್ಲಾ ಇವುಗಳದ್ದೇ ಕಾರುಬಾರು ಎಂದು ಹೇಳುತ್ತಿದ್ದಾರೆ ತಜ್ಞರು. ಚಿನ್ನ, ಬೆಳ್ಳಿ ಕೊಳ್ಳಲಾಗದವರಿಗೆ ಲೋಹಗಳಿಂದ ತಯಾರಿಸಿದಅಗ್ಗದ ಉಂಗುರಗಳೂ ದೊರೆಯಲಿವೆ.

ಪರಿಸರಸ್ನೇಹಿ ಪಾದರಕ್ಷೆಗಳು

ಈ ವರ್ಷ ಫ್ಯಾಷನ್ ಪ್ರಪಂಚ ಪರಿಸರಸ್ನೇಹಿಯಾಗುವತ್ತ ಹೆಜ್ಜೆ ಇಡಲಿದೆ ಎಂಬ ನಿರೀಕ್ಷೆ ಹಲವರಲ್ಲಿದೆ. ಹೀಗಾಗಿಯೇ ಪರಿಸರಸ್ನೇಹಿ ವಸ್ತು, ಉಪಕರಣಗಳ ತಯಾರಿಗೆ ಕೆಲವು ಸಂಸ್ಥೆಗಳು ಆಸಕ್ತಿ ತೋರುತ್ತಿವೆ. ಹೀಗಾಗಿ ಪರಿಸರಸ್ನೇಹಿ ಪಾದರಕ್ಷೆಗಳು ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಬರುವ ನಿರೀಕ್ಷೆ ಇದೆ.

ಬಿದಿರು ಮತ್ತು ಮಂದವಾದ ಬಟ್ಟೆಗಳನ್ನು ಕೂಡಿಸಿ ಸ್ಟೈಲಿಷ್ ಆಗಿ ಕಾಣುವಂತಹ ಚಪ್ಪಲಿಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಕೆಲಸ ನಡೆಯುತ್ತಿದೆ. ಈಗಾಗಲೇ ಅಂತರ್ಜಾಲದಲ್ಲಿ ಹರಿದಾಡುತ್ತಿರುವ ಬಂಬೂ ಹೈಹೀಲ್ಸ್ ಯುವತಿಯರ ಮನಸೂರೆ ಮಾಡಿವೆ. ಸಿಂಪಲ್ ಲುಕ್ ಬೇಕೆನ್ನುವವರಿಗೆ ಫ್ಲಿಫ್ ಫ್ಲಾಪ್ಸ್, ವೆಡ್ಜೆಸ್, ಸ್ಲಿಪ್ಪರ್ಸ್, ಆ್ಯಂಕಲ್ ಸ್ಟ್ರಾಪ್ ಸ್ಯಾಂಡಲ್ಸ್… ಹೀಗೆ ಹಲವು ವಿಧದ ಪರಿಸರಸ್ನೇಹಿ ಪಾದರಕ್ಷೆಗಳು ತಯಾರಾಗುತ್ತಿವೆ. ಇದರ ಜತೆಗೆ ಚುಂಕಿಬೂಟ್‌ಗಳು ಈ ವರ್ಷದ ಟ್ರೆಂಡ್ ಆಗುವ ಸಾಧ್ಯತೆ ಇದೆ.

ಹೊಸ ವರ್ಣ

ಮುಖದ ಕಾಂತಿಯನ್ನು ಹೆಚ್ಚಿಸುವ ಯಾವುದಾದರೂ ಒಂದು ಬಣ್ಣ ಪ್ರತಿ ವರ್ಷ ಕಲರ್ ಆಫ್ ದಿ ಇಯರ್ ಆಗಿ ಗಮನ ಸೆಳೆಯುತ್ತದೆ. ಮೊಜಾಯಿಕ್ ಬ್ಲೂ, ಸೂಪರ್ ಪಿಂಕ್ ಹೀಗೆ ಕೆಲವು ವರ್ಣಗಳು ಸ್ಪರ್ಧೆಯಲ್ಲಿವೆ. ತಿಳಿಬಣ್ಣಗಳೇ 2020ರಲ್ಲಿ ಹೆಚ್ಚು ಜನಪ್ರಿಯವಾಗಲಿವೆ ಎಂಬ ನಿರೀಕ್ಷೆ ಇದೆ. ಅದರಲ್ಲೂ ಸಮುದ್ರ ತೀರಗಳಲ್ಲಿ ಕಂಗೊಳಿಸುವ ಬಣ್ಣಗಳೇ ಹೆಚ್ಚು ಜನಪ್ರಿಯವಾಗುವ ಸಾಧ್ಯತೆಯೂ ಇದೆ. ಸಮುದ್ರದ ಅಲೆಗಳು, ನೊರೆಯಲ್ಲಿ ಕಾಣಿಸುವ ತಿಳಿಹಸಿರು ಬಣ್ಣದ ಸಿಫೋಮ್ ಬಣ್ಣ, ಮತ್ತು ನಿಯೊ ಮಿಂಟ್ ಈ ಬಾರಿ ಸದ್ದು ಮಾಡುವ ಸಾಧ್ಯತೆ ಇದೆ.

ರಫೆಲ್ಸ್

ರಂಗು ಕುಚ್ಚುಗಳಿರುವ ಗೌನ್‌ಗಳು ಮಕ್ಕಳಿಗೆ ಹೆಚ್ಚು ನಪ್ಪುತ್ತವೆ ಎಂಬ ಭಾವನೆ ಮೊನ್ನೆಯವರೆಗೂ ಹಲವರಲ್ಲಿ ಇತ್ತು. ಈಗ ವನಿತೆಯರ ವಸ್ತ್ರ ಪ್ರಪಂಚದಲ್ಲಿ ಇವುಗಳದ್ದೇ ಹವಾ. ಈ ವರ್ಷ ರಫೆಲ್ಸ್ ದಿರಿಸುಗಳು ಹೊಸ ವಿನ್ಯಾಸದೊಂದಿಗೆ ಫ್ಯಾಷನ್ ಲೋಕದಲ್ಲಿ ಸದ್ದು ಮಾಡುವ ನಿರೀಕ್ಷೆ ಇದೆ. ಅಲೆಗಳಂತೆ ಕಂಗೊಳಿಸುವ ಕುಚ್ಚುಗಳು ಸೀರೆಗಳಿಂದ ಹಿಡಿದು ಬಿಕಿನಿಗಳವರೆಗೆ ಎಲ್ಲ ಕಡೆ ರಾರಾಜಿಸಲಿವೆ ಎಂಬುದು ಫ್ಯಾಷನ್ ಪಂಡಿತರ ಅಂದಾಜು.

ಸ್ಕರ್ಟ್‌ಗಳಿಂದ ಆರಂಭವಾದ ಈ ಟ್ರೆಂಡ್ ಡಿಸೈನ್ ಸೀರೆ, ಜಾಕೆಟ್‌ವರೆಗೂ ತಲುಪಿದೆ. ಈ ವರ್ಷವೆಲ್ಲಾ ವಸ್ತ್ರ ಮಳಿಗೆಗಳಲ್ಲಿ ರಫೆಲ್ ಜಾಕೆಟ್‌ಗಳು, ಕುರ್ತಾಗಳು, ಟಾಪ್ಸ್, ಸೀರೆಗಳು ಕಾಣಸಿಗಬಹುದು.

ಸಾವಯವ ಫ್ಯಾಬ್ರಿಕ್

ಫ್ಯಾಷನ್ ದಿರಿಸುಗಳಲ್ಲಿ ಫ್ಯಾಬ್ರಿಕ್‌ ಉತ್ಪನ್ನಗಳಿಗೆ ಹೆಚ್ಚು ಪ್ರಾಮುಖ್ಯತೆ. ಆದರೆ ಹಲವು ವರ್ಷಗಳಿಂದ ಬಳಕೆಯಲ್ಲಿರುವ ಕಾಟನ್, ಲೆನಿನ್‌ಗೆ ವಿದಾಯ ಹೇಳಬಹುದು ಎಂಬುದು ಕೆಲವು ಫ್ಯಾಷನ್ ಪ್ರಿಯರ ಮಾತು. ಸಾಗುವ ಗುಣ ಇರುವಂತಹ ಹಗುರ ಬಟ್ಟೆಗಳು 2020ರಲ್ಲಿ ಹೆಚ್ಚು ಜನಪ್ರಿಯವಾಗಲಿವೆ ಎಂಬ ನಿರೀಕ್ಷೆ ಇದೆ. ತೆಳುವಾದ ಉಣ್ಣೆ ಬಟ್ಟೆಗಳು ಮತ್ತು ಕ್ರೆಪ್ ಮೆಟಿರಿಯಲ್ ವಸ್ತ್ರ ಲೋಕವನ್ನು ಆಳಬಹುದು. ಅದರಲ್ಲೂ ಫ್ಯಾಷನ್ ವಸ್ತುಗಳ ತಯಾರಿಕೆಗೆ ಸಾವಯವ ದಾರಗಳನ್ನೇ ಹೆಚ್ಚಾಗಿ ಬಳಸುವ ಸಾಧ್ಯತೆ ಇದೆ. 2020ರ ವರ್ಷ ಆರ್ಗಾನಿಕ್ ಇಯರ್ ಆಗಿ ಖ್ಯಾತಿ ಗಳಿಸಿದರೂ ಅಚ್ಚರಿ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT