ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶಪ್ರೇಮ ಮೈ-ಮನ ರೋಮಾಂಚನ

Last Updated 15 ಆಗಸ್ಟ್ 2019, 15:30 IST
ಅಕ್ಷರ ಗಾತ್ರ

ಸ್ವಾತಂತ್ರ್ಯ ದಿನಾಚರಣೆ ಸಂಭ್ರಮಕ್ಕೆ ಒರಾಯನ್‌ ಮಾಲ್‌ನಲ್ಲಿ ಆಯೋಜಿ ಸಿರುವ ಫ್ಲವರ್‌ ಶೋ ವಿಶೇಷ ಮೆರುಗು ತಂದಿದೆ. ನಳನಳಿಸುವ ಬಣ್ಣ, ಬಣ್ಣದ ಹೂವುಗಳಲ್ಲಿ ಅರಳಿ ನಿಂತ ಚಂದ್ರಯಾನ–2 ರಾಕೆಟ್‌, ತೂಪು ಮತ್ತು ಯುದ್ಧ ವಿಮಾನಗಳು ದೇಶಭಕ್ತಿಯ ಸಿಂಚನ ಮಾಡುತ್ತವೆ.

ಈ ಬಾರಿ ‘ಇಂಡಿಯಾ ಥೀಮ್‌’ ಫ್ಲವರ್‌ ಶೋ ಅನ್ನು ಭಾರತೀಯ ವಾಯುಪಡೆಯ ಏರ್‌ ಚೀಫ್‌ ಮಾರ್ಷಲ್‌ ಅರ್ಜುನ್‌ ಸಿಂಗ್‌ ಅವರಿಗೆ ಅರ್ಪಿಸಲಾಗಿದೆ. ಕಳೆದ ಬಾರಿಗಿಂತ ಭಿನ್ನವಾಗಿರುವ ಫ್ಲವರ್‌ ಶೋದಲ್ಲಿ ಭಾರತೀಯ ವಾಯುಸೇನೆಯ ಶಕ್ತಿ, ಸಾಹಸಗಳು ಅನಾವರಣಗೊಂಡಿವೆ.

ಮಾಲ್‌ನ ಲೇಕ್‌ಸೈಡ್‌ ಬಳಿ ವಾಯುಪಡೆ ಬ್ಯಾಂಡ್‌ ‘ವಾರಿಯರ್ಸ್‌ ಸಿಂಫೋನಿ ಆರ್ಕೆಸ್ಟ್ರಾ’ ನುಡಿಸಿದ ದೇಶಭಕ್ತಿ ಗೀತೆಗಳು ಮೈ, ಮನಗಳನ್ನು ಪುಳಕಗೊಳಿಸುತ್ತವೆ.

ಮಾಲ್‌ ಪ್ರವೇಶಿಸುತ್ತಲೇ ಉಡಾವಣೆಗೆ ಸಜ್ಜಾಗಿ ನಿಂತ ಚಂದ್ರಯಾನ ರಾಕೆಟ್‌ ಎಲ್ಲರ ಗಮನ ಸೆಳೆಯುತ್ತದೆ. ಅಚ್ಚ ಬಿಳಿ ಬಣ್ಣದ ಹೂವುಗಳಲ್ಲಿ ಅರಳಿ ನಿಂತಿರುವ ‘ಚಂದ್ರಯಾನ–2’ ಈ ಫ್ಲವರ್‌ ಶೋ ಪ್ರಮುಖ ಆಕರ್ಷಣೆ. ಬಾಹುಬಲಿ ರಾಕೆಟ್‌ ಮುಂದೆ ನಿಂತುಸೆಲ್ಫಿ ತೆಗೆದುಕೊಳ್ಳಲು ಪೈಪೋಟಿ ಕಂಡುಬರುತ್ತಿದೆ.

ಮಾಲ್‌ನ ನೆಲ ಮಹಡಿಯ ವಿಶಾಲ ಜಾಗದಲ್ಲಿ ನಿಂತಿರುವ ತೇಜಸ್‌ ಲಘು ಯುದ್ಧ ವಿಮಾನ, ತೋಪು, ವೈಮಾನಿಕ ಪ್ರದರ್ಶನದ ವೇಳೆ ಆಗಸದಲ್ಲಿ ಸಾಹಸ ಮೆರೆಯುತ್ತ ತ್ರಿವರ್ಣದಲ್ಲಿ ಚಿತ್ತಾರ ಬಿಡಿಸುವ ಯುದ್ಧ ವಿಮಾನಗಳು ಆಕರ್ಷಕವಾಗಿವೆ. ಸಾಂಪ್ರದಾಯಿಕ ನೃತ್ಯದಲ್ಲಿ ತೊಡಗಿರುವ ನರ್ತಕಿಯರು ಹೂವುಗಳಲ್ಲಿ ಮೈದೆಳೆ ದಿದ್ದಾರೆ. ಪ್ರತಿಯೊಂದು ಪ್ರತಿಕೃತಿಗಳು ನೋಡುಗರೊಂದಿಗೆ ಮೌನದಲ್ಲಿ ಸಂಭಾಷಣೆ ನಡೆಸುವಂತೆ ಭಾಸವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT