ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆಯು ಡಿ. 14ರಿಂದ ಖ್ಯಾತ ವ್ಯಂಗ್ಯಚಿತ್ರಕಾರ ಪಿ.ಕೆ.ಎಸ್. ಕುಟ್ಟಿ ಅವರ ವ್ಯಂಗ್ಯಚಿತ್ರ ಮತ್ತು ಕ್ಯಾರಿಕೇಚರ್ ಪ್ರದರ್ಶನ ‘ಕುಟ್ಟಿ – ಒಂದು ನೆನಪು’ ಆಯೋಜಿಸಿದೆ.

ಕೇರಳದ ಒಟ್ಟಪಾಲಮ್‍ನವರಾದ ಕುಟ್ಟಿ ಅವರು, ದೇಶದ ಹಲವು ಪ್ರಮುಖ ಪತ್ರಿಕೆಗಳಾದ ನ್ಯಾಷನಲ್ ಹೆರಾಲ್ಡ್, ಫ್ರೀ ಪ್ರೆಸ್ ಜರ್ನಲ್, ಹಿಂದುಸ್ತಾನ್ ಸ್ಟಾಂಡರ್ಡ್, ಆನಂದಬಜಾರ್ ಪತ್ರಿಕಾ, ಆಜ್‍ಕಾಲ್ ಗಳಲ್ಲಿ ವ್ಯಂಗ್ಯಚಿತ್ರಕಾರರಾಗಿ ಕೆಲಸ ಮಾಡಿದ್ದಾರೆ. ಅವರು ಖ್ಯಾತ ವ್ಯಂಗ್ಯಚಿತ್ರಕಾರ ಶಂಕರ್ ಪಿಳ್ಳೈ ಅವರನ್ನು ತಮ್ಮ ಗುರು ಎಂದು ಹೇಳುತ್ತಿದ್ದರು. ಶಂಕರ್ಸ್ ವೀಕ್ಲಿ ಪತ್ರಿಕೆಯಲ್ಲಿ ಅವರ ವ್ಯಂಗ್ಯಚಿತ್ರಗಳು ಪ್ರಕಟವಾಗುತ್ತಿದ್ದವು.

ಭಾರತದ ಸ್ವಾತಂತ್ರ್ಯಪೂರ್ವದಿಂದ ನಡೆದ ರಾಜಕೀಯ ಮತ್ತು ಸಾಮಾಜಿಕ ಸ್ಥಿತ್ಯಂತರಗಳನ್ನು ಕುಟ್ಟಿ ಅವರ ವ್ಯಂಗ್ಯಚಿತ್ರಗಳಲ್ಲಿ ನಾವು ಕಾಣಬಹುದು. ಈ ಪ್ರದರ್ಶನದಲ್ಲಿ ಅವರ 60 ರಾಜಕೀಯ ವ್ಯಂಗ್ಯಚಿತ್ರಗಳನ್ನು ಮತ್ತು ಕ್ಯಾರಿಕೇಚರ್‌ಗಳನ್ನು ಪ್ರದರ್ಶಿಸಲಾಗುತ್ತಿದೆ.

‘ಕುಟ್ಟಿ – ಒಂದು ನೆನಪು’: ಉದ್ಘಾಟನೆ–ಚೀಪುರು ಕಿರಣ್ ಕುಮಾರ್. ಸ್ಥಳ– ಭಾರತೀಯ ವ್ಯಂಗ್ಯಚಿತ್ರ ಗ್ಯಾಲರಿ, ನಂ. 1 ಮಿಡ್ ಫೋರ್ಡ್ ಹೌಸ್, ಟ್ರಿನಿಟಿ ವೃತ್ತ, ಎಂ.ಜಿ. ರಸ್ತೆ, ಡಿ.14, ಬೆಳಿಗ್ಗೆ 11. ಈ ಪ್ರದರ್ಶನವು ಡಿ.28ರವರಗೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.