ಗುರುವಾರ , ಸೆಪ್ಟೆಂಬರ್ 19, 2019
26 °C

ಲ್ಯಾಕ್ಮೆ ಫ್ಯಾಷನ್‌ ವೀಕ್‌ನಲ್ಲಿ ನಟ ಆಯುಷ್ಮಾನ್‌ ಮಿಂಚು

Published:
Updated:
Prajavani

ವಾರವಿಡೀ ಮುಂಬೈನಲ್ಲಿ ನಡೆಯುತ್ತಿರುವ ‘ಲ್ಯಾಕ್ಮೆ ಫ್ಯಾಷನ್‌ ವೀಕ್‌ ವಿಂಟರ್‌/ಫೆಸ್ಟಿವ್‌ 2019’ ನಾಲ್ಕನೇ ದಿನದ (ಆ24 ಶನಿವಾರ ರಾತ್ರಿ) ಝಲಕ್‌ಗಳಿವು. ರೂಪದರ್ಶಿಗಳು ಮತ್ತು ವಿನ್ಯಾಸಕಾರರ ಮನಮೋಹಕ ಪ್ರಸ್ತುತಿಗಳು ಗಮನ ಸೆಳೆದವು.

ವಿಶೇಷವಾಗಿ ರೋಹಿತ್‌ ಗಾಂಧಿ ಮತ್ತು ರಾಹುಲ್‌ ಖನ್ನಾ ಅವರ ವಿನ್ಯಾಸಗಳನ್ನು ಬಾಲಿವುಡ್‌ ನಟ/ರೂಪದರ್ಶಿ ಆಯುಷ್ಮಾನ್‌ ಖುರಾನಾ ಮತ್ತು ದಿಶಾ ಪಟಾನಿ ಅವರು ಪ್ರದರ್ಶಿಸಿದ್ದು ಮನಮೋಹಕವಾಗಿತ್ತು. ಪಟಾನಿ, ಗನ್‌ಮೆಟಲ್‌ನ ಉದ್ದ ತೋಳಿನ ಮತ್ತು ವಿ (V) ನೆಕ್‌ ಶೇಪ್‌ನಲ್ಲಿ ಇಳಿಬಿಟ್ಟ, ಹೈ ಸ್ಲಿಟ್‌ ಸ್ಲಿಂಕಿ ಗೌನ್‌ನಲ್ಲಿ ಕಣ್ಮನ ಸೆಳೆದರು. ಅವರ ಜೊತೆ ಬ್ಲ್ಯಾಕ್‌ ಡಬಲ್‌ ಬ್ರೆಸ್ಟೆಡ್‌, ಒನ್‌ ಬಟನ್‌ನ ಮೊಣಕಾಲುದ್ದದ ಕೋಟು ತೊಟ್ಟು ನಟ ಆಯುಷ್ಮಾನ್‌ ಖುರಾನಾ ಮಿಂಚಿದರು. ಕೋಟ್‌ನ ತೋಳುಗಳ ಮೇಲೆ ಬಿಡಿಸಿದ ಚಿತ್ತಾರಗಳು ಭರ್ಜರಿ ಗಮನ ಸೆಳೆದವು. 

ಅನುಶ್ರೀ ರೆಡ್ಡಿ ಮತ್ತು ಅರ್ಪಿತಾ ಮೆಹ್ತಾ ಅವರ ವಿನ್ಯಾಸಗಳಿಗೆ ಅನನ್ಯ ಪಾಂಡೇ ರೂಪದರ್ಶಿಯಾಗಿದ್ದರು. ಅಂಬಿಕಾ ಲಾಲ್‌ ಅವರ ವಿನ್ಯಾಸಗಳಿಗೆ ರಿಯಾ ಚಕ್ರವರ್ತಿ, ಗೌರಿಕಾ ಶರ್ಮಾ ಅವರ ವಿನ್ಯಾಸಕ್ಕೆ ಹಿಮಾಂಶು ವರ್ಮಾ, ಬಂದನಾ ನರುಲಾ ಅವರ ವಿನ್ಯಾಸಗಳಿಗೆ ಶಿಬಾನಿ ದಾಂಡೇಕರ್‌, ಪಿಂಕಿ ಅಗರವಾಲ್‌ ಅವರ ವಿನ್ಯಾಸಕ್ಕೆ ಅದಾ ಶರ್ಮಾ ರೂಪದರ್ಶಿಯಾಗಿ ಗಮನ ಸೆಳೆದರು.

Post Comments (+)