ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗವಿಕಲರಿಗಾಗಿ ‘ಕ್ವಿಜೆಬಲ್ಡ್‌’

Seva Auction
Last Updated 10 ಡಿಸೆಂಬರ್ 2019, 19:46 IST
ಅಕ್ಷರ ಗಾತ್ರ

ಇತ್ತೀಚೆಗೆ ಅಂಗವಿಕಲ ವ್ಯಕ್ತಿಗಳ ಅಂತರರಾಷ್ಟ್ರೀಯ ದಿನದ ಅಂಗವಾಗಿಎಲ್.ಟಿ.ಐ ಸಹಭಾಗಿತ್ವದಲ್ಲಿಸೇವಾ-ಇನ್-ಆಕ್ಷನ್‌ ಸಂಸ್ಥೆಯು ಅಂಗವಿಕಲ ಮಕ್ಕಳಿಗಾಗಿ ‘ಕ್ವಿಜೆಬಲ್ಡ್‌ 2019 ಎಂಬ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಿತ್ತು.

ನಗರದ ಬುಲ್‌ಟೆಂಪಲ್‌ ರಸ್ತೆಯಲ್ಲಿರುವ ಬಿ.ಎಂ.ಎಸ್‌ ಎಂಜಿನಿಯರಿಂಗ್‌ ಕಾಲೇಜ್‌ನ ಒಳಾಂಗಣ ಸ್ಟೇಡಿಯಂನಲ್ಲಿ ಆಟಿಸಂ, ಸೆರಿಬ್ರಲ್‌ ಪಾಲ್ಸಿ, ದೃಷ್ಟಿದೋಷ ಹಾಗೂ ಶ್ರವಣದೋಷವುಳ್ಳ ಮಕ್ಕಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.ಮೈಸೂರು, ದಾವಣಗೆರೆ, ಗದಗ, ಧಾರವಾಡ ಮತ್ತು ಕಲಬುರಗಿಯ ಕಣ್ಣು ಕಾಣದ ಮತ್ತು ಕಿವಿ ಕೇಳದ ಸುಮಾರು 160 ಮಕ್ಕಳು ಸ್ಫರ್ಧೆಯಲ್ಲಿ ಭಾಗವಹಿಸಿದರು.

5ನೇ ವರ್ಷದ ಕ್ವಿಜೆಬಲ್ಡ್‌ 2019ರ ಉದ್ಘಾಟನಾ ಕಾರ್ಯಕ್ರಮವನ್ನು ಅಂಗವಿಕಲ ಹಾಗೂ ಹಿರಿಯನಾಗರಿಕರ ಸಬಲೀಕರಣ ಇಲಾಖೆಯ ನಿರ್ದೇಶಕರಾದಕೆ. ಲೀಲಾವತಿ,ರಿಟೈರ್ಡ್‌ ಸ್ಕ್ವಾಡ್ರನ್‌ ಲೀಡರ್‌ಶಿಪ್ರಾ ಶರ್ಮ ಉದ್ಘಾಟಿಸಿದರು.ಸೇವಾ-ಇನ್-ಆಕ್ಷನ್‌ ಸಂಸ್ಥೆಯ ಅಧ್ಯಕ್ಷರಾದರುಮಾ ಬ್ಯಾನರ್ಜಿ ಮತ್ತು ಸಂಸ್ಥೆಯ ಕಾರ್ಯದರ್ಶಿಗಳಾದರಾಜ ಶೇಖರ ರೆಡ್ಡಿ, ನಗರದ ಎಲ್‌.ಟಿ.ಐಉಸ್ತುವಾರಿ ವಿನೋದ್‌ ಕುಮಾರ್‌ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಈ ರಸಪ್ರಶ್ನೆ ಸ್ಪರ್ಧೆಯನ್ನು ಕ್ಯೂರಿಯಾಸಿಟಿ ನಾಲೆಡ್ಜ್‌ ಸಲ್ಯೂಷನ್ಸ್ ಸಂಸ್ಥೆ, ಕನ್ನಡ ಮತ್ತು ಇಂಗ್ಲಿಷ್‌ ಭಾಷೆಗಳೆರಡರಲ್ಲೂ ನಡೆಸಿಕೊಟ್ಟರು. ಗುಂಪು ಎ (ಬುದ್ಧಿ ನ್ಯೂನತೆಯುಳ್ಳ ಮಕ್ಕಳು), ಗುಂಪು ಬಿ(ಆಟಿಸಮ್‌ ಮತ್ತುಸೆರಿಬ್ರಲ್‌ ಪಾಲ್ಸಿಮಕ್ಕಳು), ಗುಂಪು ಸಿ(ಕಣ್ಣು ಕಾಣದ ಮಕ್ಕಳು),ಗುಂಪು ಡಿ ( ಕಿವಿ ಕೇಳದ ಮಕ್ಕಳು) ನಾಲ್ಕು ವಿಭಾಗಗಳಲ್ಲಿ ಅಂತಿಮ ಸುತ್ತು ತಲುಪಿದ ಪ್ರತಿ ಗುಂಪಿನ, ಎರಡು ತಂಡಗಳಿಗೆ ಪ್ರಥಮ ಬಹುಮಾನ ₹ 10 ಸಾವಿರ, ದ್ವಿತೀಯ ₹ 6 ಸಾವಿರ ನಗದು ಬಹುಮಾನ ನೀಡಲಾಯಿತು.

ವಿಜೇತರು:ಗುಂಪು ಎಯಲ್ಲಿ ಸ್ಪ್ಯಾಸ್ಟಿಕ್ಸೊಸೈಟಿ ಆಫ್‌ ಕರ್ನಾಟಕ‌ದ ಮಾರ್ಟಿನ್‌,ಧನುಷ್‌. ಎನ್‌ ಪ್ರಥಮ ಬಹುಮಾನ ಹಾಗೂ ಸೊಫಿಯಸ್ಕೂಲ್‌ನ ಶರ್ಲಿ ಅಮಂದಡಿಮೆಲ್ಲೊ, ಸೌರವ್‌.ಜಿ ದ್ವಿತೀಯ ಬಹುಮಾನ ಪಡೆದರು. ಗುಂಪು ಬಿಯಲ್ಲಿಶ್ರದ್ಧಾಂಜಲಿಇಂಟಿಗ್ರೇಟೆಡ್‌ ಸ್ಕೂಲ್‌, ಎ.ಪಿ.ಡಿಸಂಸ್ಥೆಯಶರವಣ. ಎಮ್,ಸೊಹಾನ್‌ ರೆಕ್ಸ್ ಪ್ರಥಮ ಹಾಗೂಆಶಾಕಿರಣ್‌ ವಿಶೇಷ ಶಾಲೆಯಛೇತನ್‌ ಚೌಡಾರೆಡ್ಡಿ,ಅನುಭವ್‌ ನಂದಿ‌ ದ್ವಿತೀಯ ಬಹುಮಾನ ಗಳಿಸಿದರು.ಗುಂಪು ಸಿಯಲ್ಲಿಸರ್ಕಾರಿ ಅಂಧ ಮಕ್ಕಳ ವಸತಿಯುತ ಶಾಲೆ ದಾವಣಗೆರೆಯಜಿ.ಟಿ. ಕಿರಣ್, ಮಂಜುಳ.ಬಿ.ಎನ್‌ ಪ್ರಥಮ ಹಾಗೂಸರ್ಕಾರಿ ಅಂಧ ಮಕ್ಕಳ ವಸತಿಯುತ ಶಾಲೆ ಕಲಬುರಗಿಯಅನಿಲ್‌ ಕುಮಾರ್‌, ಬಲಭೀಮ ದ್ವಿತೀಯ ಬಹುಮಾನ ಪಡೆದರು. ಗುಂಪು ಡಿಯಲ್ಲಿಶೀಲಾ ಕೊತ್ವಾಲ ಇನ್‌ಸ್ಟಿಸ್ಟ್ಯೂಟ್‌ ಫಾರ್‌ ದಿಡೆಫ್‌ ಬೆಂಗಳೂರಿನಬಾಲಮುರುಗನ್‌‌. ಎ, ಸೈಯದ್‌ ರಜಕ್ ಪ್ರಥಮ ಹಾಗೂಸರ್ಕಾರಿ ಕಿವುಡು ಮಕ್ಕಳ ವಸತಿಯುತ ಶಾಲೆ ಮೈಸೂರಿನಪ್ರಮೋದ್‌ ಕೆ.ಪಿ, ಫರಾನ್‌ ಖಾನ್ ದ್ವಿತೀಯ‍ಬಹುಮಾನ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT