ಶುಕ್ರವಾರ, ನವೆಂಬರ್ 22, 2019
25 °C

ಮನರಂಜಿಸಿದ ಪಾಪ್ ಕಲ್ಚರ್ ವೇಷಧಾರಿಗಳು

Published:
Updated:

ಕಾಮಿಕ್ ಕಾನ್ ಇಂಡಿಯಾ ಕಾರ್ಯಕ್ರಮ ಆರಂಭಕ್ಕೆ ಒಂದು ವಾರ ಬಾಕಿ ಇರುವಾಗ ಇಂದಿರಾನಗರದಲ್ಲಿ ಯುವಕ ಮತ್ತು ಯುವತಿಯರು ತಮಗಿಷ್ಟದ ಪಾಪ್ ಕಲ್ಚರ್ ಪಾತ್ರಗಳ ವೇಷ ತೊಟ್ಟು ಸಂಭ್ರಮಿಸಿದರು.

ಸ್ಪೈಡರ್ ಮ್ಯಾನ್, ಬ್ಲಾಕ್ ವಿಡೋ, ಐರನ್ ಮ್ಯಾನ್, ಬ್ಯಾಟ್‌ಮ್ಯಾನ್‌, ವಂಡರ್ ವುಮನ್ ಸೇರಿದಂತೆ ವಿವಿಧ ಪಾಪ್ ಕಲ್ಚರ್ ಪಾತ್ರಗಳ ವೇಷಧಾರಿಗಳು ಗಮನ ಸೆಳೆದರು. ಕಾಮಿನ್ ಕಾನ್ ಇಂಡಿಯಾ ಮತ್ತು ವಪೌರ್ ಜಂಟಿಯಾಗಿ ಈ ಪಾತ್ರಧಾರಿಗಳಿಗೆ  ‘ಸೂಪರ್ ಹಿರೋ ಪಾರ್ಟಿ’ ಆಯೋಜಿಸಿತ್ತು. ಪಾರ್ಟಿಯಲ್ಲಿ ವೇಷಧಾರಿಗಳು ವಿವಿಧ ಮೋಜಿನ ಆಟ, ಸೆಲ್ಫಿ, ಉಡುಗೊರೆ ನೀಡಿ ಸಂಭ್ರಮಿಸಿರು.

‘ಪಾಪ್ ಕಲ್ಚರ್ ಪಾತ್ರಗಳ ವೇಷಧಾರಣೆ ಭಾರತದಲ್ಲಿ ಜನಪ್ರಿಯಗೊಳ್ಳುತ್ತಿದೆ. ಸಾಕಷ್ಟು ಯುವ ಜನತೆ ಪಾಪ್ ಪಾತ್ರಗಳ ವೇಷಧಾರಣೆಗೆ ಮುಂದಾಗುತ್ತಿದ್ದಾರೆ’ ಎಂದು ಕಾಮಿನ್ ಕಾನ್ ಇಂಡಿಯಾದ ಸಂಸ್ಥಾಪಕ ಜಟಿನ್ ವರ್ಮ ಹೇಳುತ್ತಾರೆ.

ನ.16 ಮತ್ತು 17 ರಂದು ನಡೆಯಲಿರುವ ಕಾಮಿಕ್ ಕಾನ್ ಇಂಡಿಯಾ ಕಾರ್ಯಕ್ರಮದ ಪೂರ್ವಭಾರಿಯಾಗಿ ವೇಷಧಾರಿಗಳಲ್ಲಿ ಉತ್ಸಾಹ ತುಂಬಲು ಈ ಪಾರ್ಟಿ ಆಯೋಜಿಸಲಾಗಿತ್ತು. 

ಪ್ರತಿಕ್ರಿಯಿಸಿ (+)