‘ಕ್ವೀನ್’ ಚಿತ್ರದ ತಮ್ಮ ನಟನೆಯಿಂದ ಸಿನಿರಸಿಕರ ಮನಸೂರೆಗೊಂಡ ಸುರುಳಿ ಕೂದಲ ಚೆಲುವೆ ಕಂಗನಾ ರನೋಟ್ ಇತ್ತೀಚೆಗಷ್ಟೇ ತಮ್ಮ 31ನೇ ಹುಟ್ಟುಹಬ್ಬ ಆಚರಿಸಿಕೊಂಡರು. ಮನಾಲಿಯಲ್ಲಿನ ತಮ್ಮ ಮನೆಯ ಸುತ್ತ 31 ಸಸಿಗಳನ್ನು ನೆಡುವ ಮೂಲಕ ವಿಭಿನ್ನವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿರುವ ಅವರು ಹಸಿರಿನ ಮಹತ್ವ ಸಾರಿದ್ದಾರೆ.