ನಟ ಕಮಲ್ ಹಾಸನ್ ಅವರ ಎರಡನೇ ಮಗಳು ಅಕ್ಷರಾ ಹಾಸನ್ ಕನ್ನಡ ಸಿನಿಮಾದಲ್ಲಿ ಅಭಿನಯಿಸುವುದು ಖಚಿತವಾಗಿದೆ.
ನಾಗಶೇಖರ್ ನಿರ್ದೇಶನದ ಈ ಸಿನಿಮಾದಲ್ಲಿ ರವಿಚಂದ್ರನ್ ಮಗ ವಿಕ್ರಮ್ ನಾಯಕನಾಗಿ ಅಭಿನಯಿಸಲಿದ್ದಾರೆ. ಕನ್ನಡ ಹಾಗೂ ತಮಿಳು ಬಾಷೆಗಳಲ್ಲಿ ಈ ಸಿನಿಮಾ ನಿರ್ಮಾಣವಾಗಲಿದೆ.
ಅಕ್ಷರಾ ಈಗಾಗಲೇ ಕಥೆಯನ್ನು ಕೇಳಿದ್ದು, ಕಥೆ ಇಷ್ಟವಾಗಿದೆಯಂತೆ. ಈ ಸಿನಿಮಾದ ಪಾತ್ರ ಅಕ್ಷರಾ ಅವರಿಗೆ ಸೂಕ್ತವಾಗಿ ಹೊಂದುತ್ತದೆ ಎನ್ನುವುದು ನಿರ್ದೇಶಕರ ಅಭಿಪ್ರಾಯ. ಕನಕಪುರ ಶ್ರೀನಿವಾಸ್ ಬಂಡವಾಳ ಹೂಡಲಿದ್ದು ಆರ್.ಎಸ್. ಪ್ರೊಡಕ್ಷನ್ ಸಂಸ್ಥೆಯಿಂದ ಸಿನಿಮಾ ನಿರ್ಮಾಣವಾಗಲಿದೆ.