ಐಷಾರಾಮಿ ದುಬಾರಿ ಕಾರಿನಲ್ಲಿ ಹಾಗೇ ಸುಮ್ಮನೇ ಒಂದು ಸುತ್ತು ಹಾಕಿ ಬರುವ ಆಸೆ ಯಾರಿಗಿರೊಲ್ಲ? ತಮ್ಮದೇ ಒಂದು ಸ್ವಂತ ಕಾರಿಲ್ಲದವರಿಗೂ ಇಂಥದ್ದೊಂದು ಕನಸಿರುತ್ತೆ. ಸಾಮಾನ್ಯರ ಅಂತಹ ಕನಸುಗಳನ್ನು ಒಂದು ದಿನದ ಮಟ್ಟಿಗಾದರೂ ಈಡೇರಿಸಿದ್ದು ಮರ್ಸಿಡೀಸ್ ಬೆಂಜ್.

ಸಿರಿವಂತರ ವಾಹನ ಎಂದೇ ವಿಶ್ವದೆಲ್ಲೆಡೆ ಹೆಸರಾಗಿದೆ ಮರ್ಸಿಡೀಸ್ ಬೆಂಜ್ ಕಾರು. ಅದು ನಗರದ ವರ್ತುಲ ರಸ್ತೆಯ ಇ ಜೋನ್ ಕ್ಲಬ್‌ನಲ್ಲಿ ಶ್ರೀಸಾಮಾನ್ಯರಿಗೂ ಅನನ್ಯ ಡ್ರೈವಿಂಗ್ ಅನುಭವ ನೀಡಿತು. ಜೊತೆಗೆ ತನ್ನೊಳಗಿನ ಸುರಕ್ಷತೆ, ಎಂಜಿನಿಯರಿಂಗ್ ತಂತ್ರಜ್ಞಾನವನ್ನು ಜನರ ಮುಂದೆ ತೆರೆದಿಟ್ಟಿತು.

ಅಂದು ಅಲ್ಲಿ ಎತ್ತ ಕಣ್ಣು ಹಾಯಿಸಿದರೂ ಅದೇ ಕಾರುಗಳ ಭರಾಟೆ. ಅದರಲ್ಲಿ ಕುಳಿತು ಹಂಪ್ಸ್ ಇಲ್ಲದ ನೈಸ್ ರಸ್ತೆಯಲ್ಲಿ ಸುಂಯ್... ಎಂದು ಹೋಗುವ ಭಾಗ್ಯ ಅಲ್ಲಿದ್ದ ಎಲ್ಲರಿಗೂ ದೊರೆಯಿತು. 80/90 ಕಿಮಿ ವೇಗದಲ್ಲಿ ಸಾಗುವ ಕಾರು ಇದ್ದಕ್ಕಿದ್ದಂತೆ ಅಪಘಾತವಾದರೆ ಹೇಗೆ? ಅಂತೊಂದು ಕಾಲ್ಪನಿಕ ಅನುಭವವನ್ನು ಕಲ್ಪಿಸಿತು.

ಅಂದಹಾಗೆ, ಹೀಗೆ ದಿಢೀರ್ ಅಪಫಾತವಾದಾಗ ಈ ಕಾರಿನ ಸೀಟುಗಳೂ ಬುದ್ಧಿವಂತಿಕೆ ತೋರುತ್ತವಂತೆ. ಅಂದರೆ ಕಾರಿನಲ್ಲಿರುವ ಸೀಟ್, ಸೇಫ್ಟಿ ಏರ್ ಬ್ಯಾಗ್ ಸೇರಿದಂತೆ ಸುರಕ್ಷಾ ಸಾಧನಗಳೆಲ್ಲ ಅಪಘಾತ ಸಂದರ್ಭದಲ್ಲಿ ಸೀಟ್‌ನಲ್ಲಿ ಕುಳಿತ ವ್ಯಕ್ತಿಯನ್ನು ಬಚಾವು ಮಾಡುತ್ತವೆ. ಅದೂ ಇಲ್ಲಿ ನೋಡಲು ಸಿಕ್ಕಿತು.

ಮರ್ಸಿಡಿಸ್ ಬೆಂಜ್‌ನ ಎಂಎಲ್, ಜಿ.ಎಲ್, ಸಿ ಮತ್ತು ಇ ಕ್ಲಾಸ್ ಕಾರುಗಳು, ಹೊಸ ಆವೃತ್ತಿಯ ಎಸ್‌ಎಲ್ 63, ಸಿ 63, ಎಎಂಜಿ ಮತ್ತು ಇತ್ತೀಚೆಗೆ ಮಾರುಕಟ್ಟೆಗೆ ಬಂದು ಜಗತ್ತಿನಾದ್ಯಂತ ಸಂಚಲನ ಮೂಡಿಸಿರುವ ಮತ್ತು ಭಾರತದಲ್ಲಿ ಬಿಡುಗಡೆ ಆಗಿರುವ ಪ್ರತಿಷ್ಠಿತ ಜಿ 55 ಎಎಂಜಿ ಕಾರುಗಳು, ಮಿನುಗುವ ಕೆಂಪು ಬಣ್ಣದ ಎಸ್‌ಎಲ್‌ಎಸ್ ಜತೆಗೆ ಅದರ ಸಿಗ್ನೇಚರ್ ಆಗಿರುವ ಗಲ್ವಿಂಗ್ (ಮೇಲಕ್ಕೆ ತೆರೆದುಕೊಳ್ಳುವ) ಡೋರ್‌ಗಳು ಗ್ರಾಹಕರ ಮನ ಗೆಲ್ಲುವಲ್ಲಿ ಯಶಸ್ವಿಯಾದವು.

ಈ ಕಾರುಗಳಲ್ಲಿ ಕುಳಿತ ಜನಕ್ಕೆ ಸ್ಟಾರ್ ಡ್ರೈವ್ ಎಕ್ಸಪೀರಿಯನ್ಸ್ ಸಿಕ್ಕಿತ್ತು. ಈ ಬಗ್ಗೆ ಮಾತನಾಡಿದ ಮರ್ಸಿಡಿಸ್ ಬೆಂಜ್ ಇಂಡಿಯಾ ವ್ಯಾಪಾರ ಮತ್ತು ಮಾರುಕಟ್ಟೆ ವಿಭಾಗದ ನಿರ್ದೇಶಕ ದೇಬಶಿಶ್ ಮಿತ್ರ, `ನಮ್ಮ ಗ್ರಾಹಕರು ಮತ್ತು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರಿಗೆ ನಮ್ಮ ಕಾರುಗಳಲ್ಲಿ ಅತ್ಯುತ್ತಮ ಸುರಕ್ಷತೆಯ ತಂತ್ರಜ್ಞಾನ ಅನುಭವಗಳನ್ನು ಖುದ್ದಾಗಿ ಪಡೆಯಲು ಅವಕಾಶ ನೀಡಿರುವುದು ದಿ ಸ್ಟಾರ್ ಡ್ರೈವ್ ಕಾರ್ಯಕ್ರಮದ ಪ್ರಮುಖ ಉದ್ದೇಶ. ಇದರೊಂದಿಗೆ ಚಾಲನೆ ಕೌಶಲ್ಯವನ್ನು ಮತ್ತಷ್ಟು ಪಕ್ವ ಮಾಡಿಕೊಳ್ಳಲು ಅವರಿಗೆ ಅವಕಾಶ ಲಭ್ಯವಾಗಿದೆ.~ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.