ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರೋತ್ಸವದ ಮೆಲುಕುಗಳು 3

Last Updated 28 ಜನವರಿ 2016, 19:45 IST
ಅಕ್ಷರ ಗಾತ್ರ

ನಗರದಲ್ಲಿ ಅಂತರರಾಷ್ಟ್ರೀಯ ಚಿತ್ರೋತ್ಸವ ಶುರುವಾಗಿದೆ. ಸಿನಿಮೋತ್ಸವ ಕುರಿತ ಸಣ್ಣ ಸಣ್ಣ ಮಾಹಿತಿ ಆಸಕ್ತಿಕರ. ಅಂಥ ಮಾಹಿತಿಯ ಮೂರನೆ ಕಂತು ಇದು.

* ಮುಂಬೈನ ನ್ಯೂ ಎಂಪೈರ್‌ ಸಿನಿಮಾ ಮಂದಿರದಲ್ಲಿ ಭಾರತದ ಮೊಟ್ಟ ಮೊದಲ ಅಂತರರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಉದ್ಘಾಟಿಸಿದವರು ಅಂದಿನ ಕೇಂದ್ರ ಸಮಾಚಾರ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವರಾಗಿದ್ದ ಕನ್ನಡಿಗ ಆರ್‌. ಆರ್‌. ದಿವಾಕರ್‌.

* ‘ಗ್ರೀನ್‌ ಸಿನಿ’ ಪ್ರಪಂಚದ ಪ್ರಥಮ ಆನ್‌ಲೈನ್‌ ಚಲನಚಿತ್ರೋತ್ಸವ ಆರಂಭವಾಗಿದ್ದು 2005ರಲ್ಲಿ. ಅದೇ ವರ್ಷ ನವ ತಂತ್ರಜ್ಞಾನ ಡಿಜಿಟಲ್‌ ಮೂಲಕ ಚಲನಚಿತ್ರ ವಿತರಣೆಯೂ ಶುರುವಾಯಿತು.

* ಕಾನ್‌ ಚಿತ್ರೋತ್ಸವದಲ್ಲಿ ರೆಡ್‌ ಕಾರ್ಪೆಟ್‌ (ಕೆಂಪು ನೆಲಹಾಸು) ಬಹು ಪ್ರಖ್ಯಾತಿ. ಎರಡು ಕಿಲೋಮೀಟರ್‌ ಉದ್ದವಿರುವ ರೆಡ್‌ ಕಾರ್ಪೆಟ್‌ ಅನ್ನು ಚಿತ್ರೋತ್ಸವದ ಸಂದರ್ಭದಲ್ಲಿ ದಿನಕ್ಕೆ ಮೂರು ಸಲ ಬದಲಾಯಿಸುವ ಪದ್ಧತಿ ಇದೆ.

* ಅಮೆರಿಕದ ನಿಗದಿತ ನಗರಗಳಲ್ಲಿ ನಿರ್ದಿಷ್ಟ ದಿನಗಳಂದು ಜರುಗುವ ಸಂಚಾರಿ ಚಲನಚಿತ್ರೋತ್ಸವ (ಯುಎನ್‌ಎಎಫ್‌ಎಫ್‌)ಗಳು ಜನಪ್ರಿಯತೆ ಪಡೆದಿವೆ.

* ವೆನಿಸ್‌ ಚಲನಚಿತ್ರೋತ್ಸವ ಮೊದಲಿಗೆ ಎರಡು ವರ್ಷಕ್ಕೊಮ್ಮೆ ಜರುಗುತ್ತಿತ್ತು. 1935ರ ಬಳಿಕ ಈ ಚಿತ್ರೋತ್ಸವವನ್ನು ಪ್ರತಿವರ್ಷ ಸಂಘಟಿಸಲಾಗುತ್ತಿದೆ.

* ವಯಸ್ಕರ ಚಿತ್ರಗಳಿಗಾಗಿಯೇ ಅಮೆರಿಕದ ‘ಸನ್‌ ಡಾನ್ಸ್’ ಚಲನಚಿತ್ರೋತ್ಸವದಲ್ಲಿ 1991ರಲ್ಲಿ ಮಧ್ಯ ರಾತ್ರಿ (ಮಿಡ್‌ ನೈಟ್‌) ಪ್ರದರ್ಶಿನಿ ವಿಭಾಗ ಪ್ರಾರಂಭಗೊಂಡಿತು.

* ಈಗ ಪ್ರಸಿದ್ಧ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳು ಕಾಯಂ ಆಗಿ ಪ್ರತಿ ವರ್ಷ ಸಂಘಟನೆಯಾಗುತ್ತಿದ್ದರೂ ಬಹುತೇಕ ಚಿತ್ರಗಳು ಆರಂಭದಲ್ಲಿ ಅನೇಕ ಏಳುಬೀಳುಗಳನ್ನು ಅನುಭವಿಸಿವೆ. ಭಾರತೀಯ ಅಂತರರಾಷ್ಟ್ರೀಯ ಚಿತ್ರೋತ್ಸವ 1952ರಲ್ಲಿ ಶುರುವಾಯಿತು. ಆದರೆ 2ನೇ ಅಂತರರಾಷ್ಟ್ರೀಯ ಚಿತ್ರೋತ್ಸವ ನಡೆದಿದ್ದು 1961ರಲ್ಲಿ (ನವದೆಹಲಿ).

* ಇಟಲಿಯ ವೆನಿಸ್ ಚಲನಚಿತ್ರೋತ್ಸವದಲ್ಲಿ ಪ್ರಶಸ್ತಿ ಗೆಲ್ಲುವ ಪ್ರಥಮ ಚಿತ್ರಕ್ಕೆ ‘ಚಿನ್ನದ ಸಿಂಹ’ ಪ್ರತಿಕೃತಿ ನೀಡುವ ಪರಿಪಾಠವಿದೆ.

* ಭಾರತ ಸರ್ಕಾರದ ಚಲನಚಿತ್ರೋತ್ಸವ ನಿರ್ದೇಶನಾಲಯ 2004ರ ನಂತರ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಕಾಯಂ ಆಗಿ ‘ಗೋವಾ’ದಲ್ಲಿಯೇ ಏರ್ಪಡಿಸುತ್ತ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT