‘ತಮ್ಮ ಈ ಹಿಂದಿನ ಎರಡು ಸಿನಿಮಾ ಹಾಡುಗಳಿಗೆ ಬಂಪರ್ ಸಿಕ್ಕಿದೆ. ಈ ಚಿತ್ರದ ಹಾಡುಗಳಿಗೂ ಪ್ರೇಕ್ಷಕ ಸ್ಪಂದಿಸುತ್ತಾನೆ’ ಎನ್ನುವ ಭರವಸೆ ವ್ಯಕ್ತಪಡಿಸಿದರು ಶರಣ್. ಶರಣ್ ವಿಭಿನ್ನ ಗೆಟಪ್ಪಿನಲ್ಲಿ ಕಾಣಿಸಿಕೊಂಡು ಗಮನ ಸೆಳೆದಿರುವ ‘ಜೈಲಲಿತಾ’ ಚಿತ್ರದ ಆಡಿಯೊ ಬಿಡುಗಡೆ ಇತ್ತೀಚೆಗೆ ನಡೆಯಿತು. ಅಂದಹಾಗೆ ಈ ಮುನ್ನ ಬಳಕೆಯಲ್ಲಿದ್ದ ‘ಜಯಲಲಿತಾ’ ಚಿತ್ರ ಶೀರ್ಷಿಕೆ ‘ಜೈಲಲಿತಾ’ ಎಂದಾಗಿದೆ.

‘ಜೈಲಲಿತಾ’ ಹಾಡುಗಳು ಹಿಟ್ ಆಗುತ್ತವೆ ಎಂದ ಶರಣ್, ಈ ಯಶಸ್ಸಿನಲ್ಲಿ ತಮ್ಮ ಪಾತ್ರವೇನೂ ಇಲ್ಲ ಎಂದರು. ಯಶಸ್ಸಿನ ಪಾಲನ್ನು ಕೊರಿಯಾಗ್ರಾಫರ್, ಗೀತರಚನೆಕಾರರು, ಸಂಗೀತ ನಿರ್ದೇಶಕರು ಮತ್ತು ಗಾಯಕರಿಗೆ ಅವರು ಅರ್ಪಿಸಿದರು. ಸಮಾರಂಭದಲ್ಲಿ ಹಾಜರಿದ್ದ ಕಲಾವಿದರ ಸಮೂಹವೆಲ್ಲ ‘ಜೈಲಲಿತಾ’ ಹಾಡುಗಳಿಗೆ ಜೈಕಾರ ಹಾಕಿತು. ನಟಿ ಐಶ್ವರ್ಯಾ ದೇವನ್, ಚಿತ್ರದ ನಿರ್ದೇಶಕ ಪಿ. ಕುಮಾರ್ ಮಾತುಗಳು ಸಾಹಿತ್ಯ–ಸಂಗೀತವನ್ನು ಕೇಂದ್ರೀಕರಿಸಿತ್ತು. ಸಂಗೀತ ನಿರ್ದೇಶಕ ಶ್ರೀಧರ್, ಶಶಾಂಕ್ ಶೇಷಗಿರಿ ಮತ್ತು ಸುಪ್ರಿಯಾ ಲೋಹಿತ್ ಎನ್ನುವ ಇಬ್ಬರು ಹೊಸ ಗಾಯಕರನ್ನು ಈ ಚಿತ್ರದ ಮೂಲಕ ಪರಿಚಯಿಸಿದ್ದಾರೆ.

ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ, ಸಂಗೀತ ನಿರ್ದೇಶಕ ಹರಿಕೃಷ್ಣ, ನಿರ್ದೇಶಕ ದಿನಕರ್, ನಿರ್ಮಾಪಕರಾದ ಅಣಜಿ ನಾಗರಾಜ್, ಉಮೇಶ್ ಬಣಕಾರ್, ಚಲನಚಿತ್ರ ವಾಣಿಜ್ಯ ಮಂಡಳಿ ಕಾರ್ಯದರ್ಶಿ ಭಾ.ಮಾ. ಗಿರೀಶ್, ನಟರಾದ ಐಶ್ವರ್ಯಾ ದೇವನ್, ರವಿಶಂಕರ್ ಗೌಡ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.