ದಿನಮಣಿ ಸೂರ್ಯನ ಮುಖ ಧುಮುಧುಮು ಅನ್ನುತ್ತಿದೆ. ಒಂದು ಸಣ್ಣ ತಿಳಿಗಾಳಿಗೂ ಹಾತೊರೆಯುತ್ತದೆ ದೇಹ. ಬಾಯಾರಿದ ಹಕ್ಕಿಗಳಿಗೂ ನೀರು ಸಿಗದ ಬವಣೆ.

ನಸುಕಿನಿಂದಲೇ ಚಾಕರಿಯಲ್ಲಿ ತೊಡಗಿರುವ ಕತ್ತೆ, ಕುದುರೆಗಳ ಗಂಟಲು ಆರಿದರೂ ಮತ್ತೆ ಮೂಟೆ ಹೇರುತ್ತಿದ್ದಾನೆ ನಿರ್ದಯಿ ಮಾಲೀಕ. ಅಷ್ಟು ದೂರದ ದೇಗುಲಕ್ಕಾಗಿ ನಡೆದು ಬಸವಳಿದ ಭಕ್ತನದು ಪಂಚಪಾತ್ರೆಯ ಅಷ್ಟೂ ತೀರ್ಥವನ್ನು ಆಪೋಶನ ಮಾಡುವಂತಹ ದಾಹ.

ಪ್ರಕೃತಿಯನ್ನೇ ಕ್ಯಾನ್ವಾಸ್ ಮಾಡಿಕೊಂಡ ವಸಂತನಿಗೆ ಕೊಲಾಜ್ ಪೇಂಟಿಂಗ್ ಮುಗಿಸಿದ ತೃಪ್ತಿ. ಎಲ್ಲೆಲ್ಲೂ ಇಂತಿಪ್ಪ ಬೆಡಗು ಆವರಿಸಿಕೊಂಡಿರುವಾಗ ಸೂರ್ಯನಿಗೆ ಸ್ವಿಚಾಫ್ ಆಗಲು ಮನಸ್ಸೇ ಬರುತ್ತಿಲ್ಲ.

ಮುಸ್ಸಂಜೆಯಲ್ಲೂ ಪಶ್ಚಿಮದುದ್ದಕ್ಕೂ ವರ್ಣದೋಕುಳಿ... ಕೆಂಪು, ಕೇಸರಿ ಚಾದರ ಹೊದ್ದ ಅವನು ಮೇಘಮಾಲೆಗಳ ನಡುವೆ ಕಣ್ಣಾಮುಚ್ಚಾಲೆ ಮುಂದುವರಿಸುತ್ತಾನೆ. ಹಾಗೂ ಹೀಗೂ ರಮಿಸಿ ಮನೆಗೆ ಸೂರ್ಯನನ್ನು ಕಳುಹಿಸಿದ ಚಂದಮಾಮ ಮಂದಹಾಸ ದೊಂದಿಗೆ ವಿರಾಜಮಾನನಾಗುತ್ತಾನೆ.

ನಭೋಮಂಡಲದ ಕತ್ತಲು ಅಳಿಸುವ ಅವನದು ಬೇರೆಯದೇ ಗತ್ತು. ಪಕ್ಕದಲ್ಲೇ ಕಣ್ಣು ಮಿಟುಕಿಸುವ ಚುಕ್ಕಿಯ ನಗುವಿನಲ್ಲಿ ಚಂದಮಾಮನಿಗಿಂ ತಲೂ ತನ್ನ ಪ್ರಕಾಶವೇ ಒಂದು ತೂಕ ಹೆಚ್ಚು ಎಂಬ ಭ್ರಮೆ.

ಹಾಂ... ಈ ಚಂದಮಾಮನ ಚಂದ್ರಿಕೆಗಾಗಿ ಈ ಚುಕ್ಕಿಯ ನಗೆಬೆಳಕಿಗಾಗಿ ಬೆಂಗಳೂರಿನಲ್ಲಿ ಕಾಯುತ್ತಿದ್ದಾಳೆ ದ್ರೌಪದಿ! ತಿಗಳರು ಎಂದು ಗುರುತಿಸಿಕೊಳ್ಳುವ ವಹ್ನಿಕುಲ ಕ್ಷತ್ರಿಯ ಜನಾಂಗದ ದ್ರೌಪದಿ ಭಕ್ತರು ತಿಳಗರ ಪೇಟೆಯಲ್ಲಿ ವಾರ್ಷಿಕ ಸಂಭ್ರಮದ ಪ್ರತೀಕ್ಷೆಯಲ್ಲಿದ್ದಾರೆ... ನಿಜ, ಬೆಂಗಳೂರಿನ ಐತಿಹಾಸಿಕ ಕರಗ ಉತ್ಸವಕ್ಕೆ ಚುಕ್ಕಿ ಚಂದ್ರಮರದೇ ಸಾರಥ್ಯ! ಚೈತ್ರ ಮಾಸದ ಮೊದಲ ಹುಣ್ಣಿಮೆಯೇ ಈ ಕರಗೋತ್ಸವದ ಮುಹೂರ್ತ.

ಮಹಾಭಾರತದುದ್ದಕ್ಕೂ ಸಾತ್ವಿಕ ಕಳೆಯಿಂದ ಗಮನ ಸೆಳೆಯುವ ದ್ರೌಪದಿ, ಲೋಕಕಂಟಕನಾಗಿ ಮೆರೆಯುತ್ತಿದ್ದ ತ್ರಿಪುರಾಸುರನೆಂಬ ರಾಕ್ಷಸನ ಸಂಹಾರಕ್ಕಾಗಿ ಶಕ್ತಿದೇವತೆಯ ಅವತಾರ ತಾಳಿದಳು ಎಂಬ ಕಥೆ ಇದೆ. ಹೀಗೆ ಶಕ್ತಿದೇವತೆಯಾಗಿ ಅಸುರರೊಂದಿಗೆ ಯುದ್ಧಸನ್ನದ್ಧಳಾದ ದ್ರೌಪದಿ ತನಗೊಂದು ಸೈನಿಕ ಪಡೆಯನ್ನೂ ಸೃಷ್ಟಿಸಿಕೊಂಡಿದ್ದಳಂತೆ. ಅವರೇ ವೀರಕುಮಾರರು.

ಲೋಕಕಲ್ಯಾಣ ಮಾಡಿದ ದ್ರೌಪದಿ ಯುದ್ಧ ಮುಗಿದ ತಕ್ಷಣ ತನ್ನ ಪೂರ್ವಾಶ್ರಮಕ್ಕೆ ಮರಳಲು ಅಣಿಯಾಗುತ್ತಿದ್ದಂತೆ ವೀರಕುಮಾರರಿಗೆ ದುಃಖವಾಗುತ್ತದೆ. ತಾಯೀ ನಮ್ಮಂದಿಗೆ ಇಲ್ಲೇ ನೆಲೆಸಿ, ನೀವೇ ನಮ್ಮ ಅಧಿದೇವತೆ ಎಂದು ವೀರಕುಮಾರರು ಮಾಡಿದ ಪ್ರಾರ್ಥನೆಗೆ ದ್ರೌಪದಿ ತಥಾಸ್ತು ಎನ್ನುವಂತಿರಲಿಲ್ಲ. ಒಲ್ಲೆ ಎಂದರೆ ಮಕ್ಕಳ ಮನಸ್ಸನ್ನು ನೋಯಿಸಿದಂತಾಗುತ್ತದೆ ಎಂಬ ಉಭಯಸಂಕಟ.

ಅದಕ್ಕೇ ಪ್ರತಿ ಹೊಸ ವರ್ಷದಲ್ಲಿ ಬರುವ ಮೊದಲ ಹುಣ್ಣಿಮೆಯಂದು ನಿಮ್ಮಲ್ಲಿಗೆ ಬರುತ್ತೇನೆ ಎಂದಳು. ಚಾಂದ್ರಮಾನ ಯುಗಾದಿಯಂದೇ ಹೊಸ ವರ್ಷಾರಂಭ ಎಂಬ ಲೆಕ್ಕಾಚಾರ ದೊಂದಿಗೆ, ಚೈತ್ರ ಮಾಸದ ಮೊದಲ ಹುಣ್ಣಿಮೆಯ ದಿನ ದ್ರೌಪದಿ ಧರೆಗಿಳಿದು ಬರುತ್ತಾಳೆ ಎಂಬುದು ಭಕ್ತರ ನಂಬಿಕೆ.

ತ್ರಿಪುರಾಸುರ ಸಂಹಾರಕ್ಕೆ ದ್ರೌಪದಿ ಸೃಷ್ಟಿಸಿದ ವೀರಕುಮಾರರು ತಾವೇ ಎಂದು ವಹ್ನಿಕುಲ ಕ್ಷತ್ರಿಯ ವಂಶಸ್ಥರು (ತಿಗಳರು) ನಂಬುತ್ತಾರೆ. ಶಕ್ತಿದೇವತೆ ದ್ರೌಪದಿಯ ಆಗಮನ ಮತ್ತು ಆರಾಧನೆಯಾದ ಕರಗ ಉತ್ಸವವನ್ನು ತಮ್ಮ ಸಮುದಾಯ ಹಬ್ಬವಾಗಿ ಉತ್ಸವ-ಜಾತ್ರೆಯ ರೂಪದಲ್ಲಿ ನಡೆಸುವವರೂ ಇವರೇ.

ಮೇಲಾಗಿ, ಕರಗ ಹೊತ್ತವರ ಅಂಗರಕ್ಷಕರಾಗಿ ಕರಗವನ್ನು ಪುರಮೆರವಣಿಗೆಗೆ ಕೊಂಡೊಯ್ಯುವ ಸಂದರ್ಭ ದ್ರೌಪದಿ ಪಾತ್ರಧಾರಿಯ ಸುತ್ತಮುತ್ತ ನಡೆಯುವ ವ್ರತಧಾರಿ `ಕುಮಾರರು~ ತಿಗಳ ಜನಾಂಗದವರೇ ಆಗಿರುವುದು ಈ ನಂಬಿಕೆಗೆ ಇಂಬುಕೊಡುವಂತಿದೆ.

ತಿಳಗರ ಪೇಟೆಯಲ್ಲಿರುವ ಶ್ರೀ ಧರ್ಮರಾಯಸ್ವಾಮಿ ದೇವಸ್ಥಾನದ ಕರಗಕ್ಕೆ ಬೆಂಗಳೂರು ಕರಗ ಎಂಬ ಹೆಗ್ಗಳಿಕೆ. ಈ ಬಾರಿ ಚೈತ್ರ ಹುಣ್ಣಿಮೆಯಾದ ಏಪ್ರಿಲ್ ಆರರಂದು (ಶುಕ್ರವಾರ) ರಾತ್ರಿ ನಡೆಯಲಿದೆ. ಇಲ್ಲಿ ಕಳೆದ 800 ವರ್ಷಗಳಿಂದಲೂ ಕರಗ ನಡೆಯುತ್ತಿದೆ ಎಂದು ಹೇಳಲಾಗುತ್ತದೆ.

ಕರಗವು ಭಕ್ತಿ ಮತ್ತು ಸೌಂದರ್ಯ ಬೆರೆತದ್ದು. ದ್ರೌಪದಿ ಪಾತ್ರಧಾರಿ ತಲೆಯಲ್ಲಿ ಹೊರುವ ಕರಗವು ಹೂವಿನ ತೇರಿನ ರೂಪದಲ್ಲಿರುತ್ತದೆ. ಆರೇಳು ಅಡಿ ಎತ್ತರದ ಕರಗವನ್ನು ದುಂಡು ದುಂಡಗಿನ ಮಲ್ಲಿಗೆ ಮೊಗ್ಗುಗಳಿಂದ ತಯಾರಿಸುವುದೂ ಒಂದು ಕಲೆ. ಅದನ್ನು ಕಣ್ತುಂಬಿಕೊಳ್ಳುವುದೇ ಒಂದು ಸಂಭ್ರಮ.

ಮಧ್ಯರಾತ್ರಿ ತುಂಬು ಬೆಳದಿಂಗಳಲ್ಲಿ ದೇವಸ್ಥಾನದಿಂದ ಶುರುವಾಗುವ ವಲಸರಿ (ಪುರ ಮೆರವಣಿಗೆ) ಮತ್ತೆ ದೇವಸ್ಥಾನ ತಲುಪುವ ಹೊತ್ತಿಗೆಮರುದಿನದ ಸೂರ್ಯ ನೆತ್ತಿ ಮೇಲಿರುತ್ತಾನೆ. ಬೆಂಗಳೂರು ದಿನೇದಿನೇ ಬೆಳೆಯುತ್ತಿರುವ ಕಾರಣ ಕರಗದ ದಾರಿಯಲ್ಲೂ ವಿಸ್ತರಣೆಯಾಗಿದೆ. ಅಷ್ಟೂ ವೇಳೆ ಕರಗವನ್ನು ಕೆಳಗಿಳಿಸುವಂತಿಲ್ಲ.

ಶುದ್ಧಾತಿಶುದ್ಧ, ಪರಮ ಕಠಿಣ ವ್ರತಸ್ಥ ರಾಗಿರುವ ಕಾರಣಕ್ಕೇ ದ್ರೌಪದಿ ಪಾತ್ರಧಾರಿಗೆ ದಣಿವಿನ ಅರಿವಾಗುವುದಿಲ್ಲ, ಕರಗದ ಹೂವು ಬಾಡುವುದಿಲ್ಲ ಎನ್ನುತ್ತಾರೆ ಆಸ್ತಿಕರು. ಮುಖ್ಯವಾಗಿ, ಕರಗ ಒಮ್ಮೆ ಮುಡಿಯೇರಿದರೆ ಅದನ್ನು ಸ್ವತಃ ಪಾತ್ರಧಾರಿಯೂ ಕೈಯಲ್ಲಾಗಲೀ, ಕೈಯಲ್ಲಿ ಹಿಡಿದಿರುವ ದಂಡದಲ್ಲಾಗಲಿ ಮುಟ್ಟುವಂತಿಲ್ಲ.

ಯಾವುದೇ ಆಧಾರವಿಲ್ಲದೆ, ಅಷ್ಟು ಭಾರವನ್ನು ಸುದೀರ್ಘಾವಧಿ ಹೊರಲು ದೈವೀಶಕ್ತಿಯೇ ಪ್ರೇರಣೆ ಅಲ್ಲವೇ ಎಂಬ ಪ್ರಶ್ನೆ ಅವರದು. ಹೀಗೆ, ದೇವಸ್ಥಾನಕ್ಕೆ ಮರಳಿದ ನಂತರ ಅಲ್ಲಿ ನಡೆಯುವ ವಾದ್ಯಗೋಷ್ಠಿ ಮತ್ತು ಕರಗ ನರ್ತನ ಇಡೀ ಮಹೋತ್ಸವದ ವಿಶೇಷ.

ದ್ರೌಪದಿಯನ್ನು ಶಕ್ತಿದೇವತೆಯ ರೂಪದಲ್ಲಿ ಆರಾಧಿಸುವ ಉತ್ಸವ ಇದಾದರೂ ಪಾತ್ರಧಾರಿಗಳು ಮತ್ತು ವ್ರತಧಾರಿಗಳು ಪುರುಷರೇ ಆಗಿರುತ್ತಾರೆ. ಆರತಿ, ಪೊಂಗಲ್ ಸೇವೆ, ಕುಂಭ-ಕಳಸ ಸೇವೆಗಳಿಗಷ್ಟೇ ಮಹಿಳೆಯರು ಇಲ್ಲಿ ಸೀಮಿತ. ಕರಗ ಪಾತ್ರಧಾರಿ ಉತ್ಸವಕ್ಕೆ ವಿಜಯದಶಮಿಯಿಂದಲೇ ಅಂದರೆ ನವರಾತ್ರಿಯ ಶುಭಮುಹೂರ್ತದಿಂದಲೇ ವ್ರತಾದಿ ನಿಷ್ಠೆಗಳೊಂದಿಗೆ ಸಜ್ಜಾಗುತ್ತಾರೆ.

ಕರಗ ಹೊರುವ ದಿನ ಮುತ್ತೈದೆಯಂತೆ ವೇಷ ಧರಿಸುವ ಈ ಪಾತ್ರಧಾರಿ ತನ್ನ ಮಡದಿಯ ಮಾಂಗಲ್ಯಸರವನ್ನೂ ಧರಿಸಿರುತ್ತಾರೆ. ಶಕ್ತಿದೇವತೆ ದ್ರೌಪದಿ ಮಾಂಗಲ್ಯಭಾಗ್ಯವನ್ನೂ, ಸಂತಾನಭಾಗ್ಯವನ್ನೂ, ಸನ್ಮಂಗಲವನ್ನು ಕರುಣಿಸುವ ಮಹಾತಾಯಿ ಎಂಬ ನಂಬಿಕೆಯಿಂದ ಪ್ರತಿ ಮನೆ ಮುಂದೆಯೂ ಪುಡಿ ರಂಗೋಲಿ, ಹೂವಿನ ರಂಗೋಲಿ ಮಾಡಿ ಕರಗವನ್ನು ಬರಮಾಡಿಕೊಳ್ಳಲು ಜನ ಮುಗಿಬೀಳುವುದು ಸಾಮಾನ್ಯ. ಆದರೆ ಹೀಗೆ ತನ್ನದೇ ಮನೆ ಮುಂದೆ ಕರಗ ಬಂದರೂ ದ್ರೌಪದಿ ಪಾತ್ರಧಾರಿಯ ಪತ್ನಿ ಕರಗವನ್ನು ನೋಡುವಂತಿಲ್ಲವಂತೆ.

ಸರ್ವಜನಾಂಗದಶಾಂತಿಯ ಕರಗ
ಕರಗ, ಯಾವುದೇ ಪ್ರದೇಶದಲ್ಲಿ ಜರುಗಿದರೂ ಅದು ಸರ್ವಧರ್ಮೀಯರನ್ನು ಆಕರ್ಷಿಸುತ್ತದೆ. ಬೆಂಗಳೂರು ಕರಗದಲ್ಲೂ ಇಂತಹ ಒಂದು ವೈಶಿಷ್ಟ್ಯವಿದೆ. ಪುರ ಮೆರವಣಿಗೆಯ ಸಂದರ್ಭದಲ್ಲಿ ಕರಗ ತಿಗಳರ ಪೇಟೆ ಬಳಿಯಿರುವ ಹಜರತ್ ತವಕ್ಕಲ್ ಮಸ್ತಾನ್ ಷಾ ದರ್ಗಾಕ್ಕೆ ಭೇಟಿ ನೀಡುವ ಸಂಪ್ರದಾಯ 18ನೇ ಶತಮಾನದಿಂದಲೂ ಅನೂಚಾನವಾಗಿ ನಡೆದುಬಂದಿದೆ.

ಕರಗದ ಇತಿಹಾಸ ಹೇಳುವಂತೆ 18ನೇ ಶತಮಾನದಲ್ಲಿ ಬದುಕಿದ್ದ ಹಜರತ್ ತವಕ್ಕಲ್ ಮಸ್ತಾನ್ ಷಾ ಎಂಬ ಮುಸಲ್ಮಾನಿ ಸಂತ, ಪ್ರತಿ ಚೈತ್ರ ಹುಣ್ಣಿಮೆ ವೇಳೆ ಧರೆಗಿಳಿದು ಬರುವ ದ್ರೌಪದಿಯು ತನ್ನ ಮರಣಾನಂತರ ತನ್ನ ಆವಾಸಸ್ಥಾನದಲ್ಲಿ ಅರೆಕ್ಷಣ ವಿರಮಿಸುವಂತೆ ಪ್ರಾರ್ಥಿಸಿದ ಪ್ರಕಾರ ಕರಗ ರೂಪಿ ದ್ರೌಪದಿ ದರ್ಗಾಕ್ಕೆ ಭೇಟಿ ನೀಡುತ್ತಾಳೆ ಎಂಬುದು ನಂಬಿಕೆ.

ದರ್ಗಾಕ್ಕೆ ಮೂರು ಪ್ರದಕ್ಷಿಣೆ ಬರುವ ಕರಗವು ಅಲ್ಲಿನ ಖಾಜಿಗೆ ನಿಂಬೆಹಣ್ಣು ನೀಡಿ ಅವರಿಂದಲೂ ಪಡೆಯುವುದು ರೂಢಿ. ಈ ಮೂರು ಸುತ್ತಿನಲ್ಲಿ ಮೊದಲ ಸುತ್ತನ್ನು ನಡೆಯುವ ಮೂಲಕವೂ, ಎರಡನೇ ಸುತ್ತನ್ನು ಮಂಡಿಯೂರಿ ಪ್ರದಕ್ಷಿಣೆ ಬರುವ ಮೂಲಕವೂ, ಕೊನೆಯ ಸುತ್ತನ್ನು ನೃತ್ಯದ ಮೂಲಕವೂ ಪೂರೈಸುವುದು ವಿಶೇಷ. ಈ ಸಂದರ್ಭದಲ್ಲಿ ದರ್ಗಾವು ಸರ್ವಧರ್ಮೀಯರ ಶಾಂತಿಯ ತೋಟ ಎಂಬ ಮಾತಿಗೆ ಅನ್ವರ್ಥದಂತೆ ಭಾಸವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.