ತಮ್ಮ ಪರಿಚಯದ ಕಾರ್ಡು ತೋರಿಸುವ ಮೂಲಕ ವಿಡಿಯೊ ಪ್ರಾರಂಭವಾಗುತ್ತದೆ. ನಂತರ ‘ನಾನು ನನ್ನ ಡಿಎನ್ಎ ಪರೀಕ್ಷೆ ಮಾಡಿಸಿದೆ ಇದರಲ್ಲಿ ತಿಳಿದುದೇನೆಂದರೆ ನಾನು 16.66% ಹಿಂದು. 16.66% ಮುಸ್ಲಿಂ. 16.66% ಕ್ರಿಶ್ಚಿಯನ್, 16.66 ಸಿಖ್, ಅಷ್ಟೆ ಪ್ರಮಾಣದ ಬುದ್ಧ, ಅಷ್ಟೆ ಪ್ರಮಾಣದಲ್ಲಿ ವಿಶ್ವದ ಇತರ ಧರ್ಮಕ್ಕೂ ಸೇರಿದವನಾಗಿದ್ದೇನೆ. ಆದರೆ ನಾನು ನನ್ನ ಆತ್ಮಸಾಕ್ಷಿಯ ಒಳಹೊಕ್ಕು ಅನ್ವೇಷಣೆ ಮಾಡಿದಾಗ ತಿಳಿದದ್ದು ನಾನು ಶೇ100 ‘ಕಲಾವಿದ’.
57 ಸೆಕೆಂಡ್ಗಳ ಈ ವಿಡಿಯೊದಲ್ಲಿ ಸಂಭಾಷಣೆಯೇ ಇಲ್ಲ. ಹಿನ್ನೆಲೆ ಸಂಗೀತವೇ ಎಲ್ಲಾ. ಪ್ರತಿ ಧರ್ಮದ ಬೋರ್ಡ್ ತೋರಿಸುವಾಗ ನವಾಜುದ್ದೀನ್ ಆಯಾ ಧರ್ಮವನ್ನು ಬಿಂಬಿಸುವ ಉಡುಪು ಧರಿಸಿರುತ್ತಾರೆ. ಇದು ವಿಡಿಯೊಕ್ಕೆ ವಿಶೇಷ ಪರಿಣಾಮ ಸಿಗುವಂತೆ ಮಾಡಿದೆ.
ಅಪ್ಲೋಡ್ ಆದ 4 ಗಂಟೆಯ ಒಳಗೆ 8,95,000 ಮಂದಿ ವಿಡಿಯೊವನ್ನು ವೀಕ್ಷಿಸಿದ್ದಾರೆ. 18 ಸಾವಿರಕ್ಕೂ ಹೆಚ್ಚು ಮಂದಿ ಶೇರ್ ಮಾಡಿದ್ದಾರೆ. ನವಾಜುದ್ದೀನ್ ಅವರ ಈ ವಿಡಿಯೊಕ್ಕೆ ಲಕ್ಷಾಂತರ ಮಂದಿ ಮೆಚ್ಚುಗೆಯನ್ನೂ ಸೂಚಿಸಿದ್ದಾರೆ.