ತಮ್ಮದೇ ಚಿತ್ರ ‘ಮೇರಿ ಪ್ಯಾರಿ ಬಿಂದು’ವಿನಲ್ಲಿ ಹಾಡಿರುವ ನಟಿ ಪರಿಣೀತಿ ಛೋಪ್ರಾ ಬಾಲ್ಯದಲ್ಲಿ ತನಗೆ ಹಾಡು ಹೇಳಿಕೊಡುತ್ತಿದ್ದ ಅಕ್ಕ ಪ್ರಿಯಾಂಕಾ ಛೋಪ್ರಾ ಅವರನ್ನು ನೆನೆಪಿಸಿಕೊಂಡಿದ್ದಾರೆ.
‘ಅಮೆರಿಕದಿಂದ ವಾಪಸಾದ ಮೇಲೆ ಪ್ರಿಯಾಂಕಾ ಛೋಪ್ರಾ ನನಗೆ ಇಂಗ್ಲೀಷ್ ಹಾಡು ಹೇಳಿಕೊಡುತ್ತಿದ್ದಳು. ಆಕೆ ನಿರರ್ಗಳವಾಗಿ ಇಂಗ್ಲಿಷ್ ಹಾಡುಗಳನ್ನು ಹೇಳುವುದನ್ನು ಕೇಳಿ ನಾವು ಆಶ್ಚರ್ಯ ಪಡುತ್ತಿದ್ದೆವು’ ಎಂದು ತಮ್ಮ ಬಾಲ್ಯವನ್ನು ನೆನಪಿಸಿಕೊಂಡಿದ್ದಾರೆ. ‘ನಾನು ಸಿನಿಮಾಕ್ಕಾಗಿ ಹಾಡುವ ನಿರ್ಣಯ ಮಾಡಿದಾಗ ಆಕೆಯೇ ಮೊದಲು ನನ್ನನ್ನು ಅಭಿನಂದಿಸಿದ್ದು’ ಎಂದು ಅವರು ಹೇಳಿದ್ದಾರೆ.