ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಿವುಡ್‌ ದಾರಿಯಲ್ಲಿ ಪ್ರಭಾಸ್‌

Last Updated 22 ಜೂನ್ 2015, 19:30 IST
ಅಕ್ಷರ ಗಾತ್ರ

ತೆಲುಗು ಸೂಪರ್‌ ಸ್ಟಾರ್‌ ಪ್ರಭಾಸ್‌ ಮುಂದಿನ ದಿನಗಳಲ್ಲಿ ಬಾಲಿವುಡ್‌ ಚಿತ್ರಗಳಲ್ಲಿ ನಟಿಸುವ ಆಸೆ ವ್ಯಕ್ತಪಡಿಸಿದ್ದಾರೆ. 35 ವರ್ಷದ ಪ್ರಭಾಸ್‌ ಸ್ಟಾರ್‌ ಡೈರೆಕ್ಟರ್‌ ಎಸ್‌.ಎಸ್.ರಾಜಮೌಳಿ ನಿರ್ದೇಶನದ ‘ಬಾಹುಬಲಿ’ ಚಿತ್ರದಲ್ಲಿ ನಟಿಸಿದ್ದು, ಈ ಚಿತ್ರ ಸದ್ಯದಲ್ಲೇ ತೆರೆಕಾಣಲಿದೆ. ‘ಬಾಹುಬಲಿ’ ತೆಲುಗು ಮತ್ತು ತಮಿಳು ಎರಡು ಭಾಷೆಯಲ್ಲೂ ಬಿಡುಗಡೆಯಾಗಲಿದೆ.

ಪ್ರಭಾಸ್‌ ಈ ಹಿಂದೆ ಅಜಯ್‌  ದೇವಗನ್‌ ನಟಿಸಿದ್ದ  ‘ಆ್ಯಕ್ಷನ್‌  ಜಾಕ್ಸನ್‌’ ಬಾಲಿವುಡ್‌ ಚಿತ್ರದಲ್ಲಿ ಪುಟ್ಟ ಪಾತ್ರ ನಿರ್ವಹಿಸಿದ್ದರು. ‘ಭಾರತೀಯ ಸಿನಿಮಾ ರಂಗದಲ್ಲಿ ಬಾಲಿವುಡ್‌ನ ತೂಕವೇ ಬೇರೆ. ನಮ್ಮ ದೇಶದ ಅತ್ಯಂತ ದೊಡ್ಡ ಸಿನಮೋದ್ಯಮವಿದು. ಉತ್ತಮ ಅವಕಾಶಗಳು ದೊರಕಿದರೆ ನಾನು ಬಾಲಿವುಡ್‌ ಚಿತ್ರಗಳಲ್ಲಿ ನಟಿಸುತ್ತೇನೆ’ ಎಂದಿದ್ದಾರೆ ಪ್ರಭಾಸ್‌. 

2005ರ ಸೂಪರ್‌ಹಿಟ್‌ ಚಿತ್ರ ‘ಛತ್ರಪತಿ’ಯ  ನಂತರ  ಪ್ರಭಾಸ್‌ ಹಾಗೂ  ರಾಜಮೌಳಿ ಜೋಡಿ ‘ಬಾಹುಬಲಿ’  ಚಿತ್ರದಲ್ಲಿ  ಮತ್ತೆ ಒಂದಾಗಿದೆ. ‘ಬಾಹುಬಲಿ’ ಚಿತ್ರದಲ್ಲಿ  ರಾಣಾ ದಗ್ಗುಬಾಟಿ, ಅನುಷ್ಕಾ ಶೆಟ್ಟಿ, ತಮನ್ನಾ, ರಮ್ಯಾಕೃಷ್ಣ, ಸತ್ಯರಾಜ್‌, ನಾಸರ್‌, ಅದ್ವಿಶೇಷ್‌, ಸುದೀಪ್‌ ಮೊದಲಾದ ಖ್ಯಾತ ನಟರು ನಟಿಸುತ್ತಿದ್ದು, ಈ ಚಿತ್ರ ಜುಲೈ  10ರಂದು ಬಿಡುಗಡೆಯಾಗಲಿದೆ.  v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT