ಕುಮಾರವ್ಯಾಸ ಎಂದು ಸಹೃದಯರ ನಡುವೆ ಪರಿಚಿತನಾದ ಗದುಗಿನ ನಾರಣಪ್ಪ ಕನ್ನಡ ನುಡಿಯ ಸಾಧ್ಯತೆಯನ್ನು ಹೊಸ ಎತ್ತರಕ್ಕೆ ಒಯ್ದ ಮಹಾಕವಿ. ಆತನ `ಕರ್ಣಾಟ ಭಾರತ ಕಥಾಮಂಜರಿ' (ಕುಮಾರವ್ಯಾಸ ಭಾರತ) ಕನ್ನಡದ ಮಹಾನ್ ಕೃತಿಗಳಲ್ಲಿ ಒಂದು. ಈ ಮಹಾಕಾವ್ಯದ ಅಂತರ್ಜಾಲದ ಆವೃತ್ತಿಯ ಪ್ರಯತ್ನ ಬ್ಲಾಗ್ ರೂಪದಲ್ಲಿ ನಡೆದಿದೆ. ಕೆಲವು ಗೆಳೆಯರು ಸೇರಿಕೊಂಡು ಕಥಾಮಂಜರಿಯನ್ನು ಪೂರ್ಣರೂಪದಲ್ಲಿ ಬ್ಲಾಗ್ನಲ್ಲಿ (gaduginabharata.blogspot.in ಕಾಣಿಸುವ ಪ್ರಯತ್ನದಲ್ಲಿದ್ದಾರೆ.

ಹತ್ತು ಪರ್ವಗಳಲ್ಲಿನ ಮಹಾಕಾವ್ಯವನ್ನು ಪೂರ್ಣರೂಪದಲ್ಲಿ ಅಂತರ್ಜಾಲಕ್ಕೆ ತರುವುದು ಸುಲಭದ ಕೆಲಸವೇನಲ್ಲ. ಆ ಕಾರಣದಿಂದಾಗಿಯೇ ಆಸಕ್ತರು ಕೂಡ ತಮ್ಮಂದಿಗೆ ಕೈಜೋಡಿಸಬಹುದು ಎಂದು ಗೆಳೆಯರ ಗುಂಪು ಮುಕ್ತ ಆಹ್ವಾನ ನೀಡಿದೆ. ಇದಕ್ಕೆ ನೀಡಿರುವ ಕಾರಣವೂ ಚೆನ್ನಾಗಿದೆ. ಬ್ಲಾಗಿಗರು ಪೀಠಿಕೆಯಲ್ಲಿ ಹೇಳುತ್ತಾರೆ-
ಸ್ನೇಹಿತರೇ, ಕನ್ನಡ ಸಾಹಿತ್ಯ ಭಂಡಾರದಲ್ಲಿ ರತ್ನಪ್ರಾಯವಾಗಿರುವ ಗದುಗಿನ ನಾರಣಪ್ಪನ ಕರ್ಣಾಟ ಭಾರತ ಕಥಾಮಂಜರಿಯನ್ನು ಹಂತಹಂತವಾಗಿ ಇಲ್ಲಿ ಪ್ರಕಟಿಸುವುದು, ಕೊನೆಗೆ ಇಡೀ ಗ್ರಂಥವನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ಪ್ರಸ್ತುತಪಡಿಸುವುದು ಈ ಬ್ಲಾಗಿನ ಉದ್ದೇಶ. ಈ ಗ್ರಂಥದ ಎಲೆಕ್ಟ್ರಾನಿಕ್ ಪ್ರತಿಯೊಂದು ಈಗಾಗಲೇ ಅಂತರ್ಜಾಲದಲ್ಲಿ ಇದೆಯೋ ಇಲ್ಲವೋ ತಿಳಿಯದು, ಇದ್ದರೆ ಅಂಥ ಮತ್ತೊಂದು ಪ್ರಯತ್ನ ಅವಶ್ಯಕವೇ ಎಂಬ ಪ್ರಶ್ನೆಯೇಳುತ್ತದೆ.

ಅವಶ್ಯಕ ಎಂದಾದರೂ ಆ ಪ್ರತಿಯಿಂದ ಇಲ್ಲಿಗೆ ಕಾಪಿ-ಪೇಸ್ಟ್ ಮಾಡಿಬಿಡಬಹುದಲ್ಲವೇ ಎಂಬ ಉಪಪ್ರಶ್ನೆಯೂ ಏಳುತ್ತದೆ. ಆದರೆ ನಮ್ಮ ಅಂತಿಮ ಉದ್ದೇಶ ಇ-ಪುಸ್ತಕವೊಂದನ್ನು ಹೊರತರುವುದಾದರೂ, ಮೂಲ ಉದ್ದೇಶ ಕೇವಲ ಅದಲ್ಲ. ಇಡೀ ಗದುಗಿನ ಭಾರತವನ್ನು ಓದಬೇಕೆಂಬ ಆಸೆ ನಮ್ಮಲ್ಲಿ ಕೆಲವರಿಗಾದರೂ ಇದ್ದೇ ಇದೆ, ಆದರೆ ಕಾರಣಾಂತರಗಳಿಂದ, ಜೀವನದ ಇತರ ಒತ್ತಡ/ಪ್ರೇರಣೆ/ಒತ್ತಾಯಗಳಿಂದ ಈ ಆಸೆ ಆಸೆಯಾಗೇ ಉಳಿಯುತ್ತದೆಯೇ ಹೊರತು ಅದೊಂದು ಒತ್ತಡವಾಗಿ ಕ್ರಿಯೆಯಾಗಿ ಹೊರಹೊಮ್ಮುವುದೇ ಇಲ್ಲ- ಇಂಥದ್ದೊಂದು ಯೋಜನೆಯ ಒತ್ತಾಸೆ ಇಲ್ಲದಿದ್ದರೆ. ಗದುಗಿನ ಭಾರತವನ್ನು ಟೈಪು ಮಾಡುವ ನೆಪದಲ್ಲಾದರೂ ಅದನ್ನು ಸಂಪೂರ್ಣ ಓದುವ ಅವಕಾಶ ದೊರೆಯುತ್ತದಲ್ಲವೇ, ಇದು ನಮ್ಮ ಮೂಲ ಆಶಯ. ಕಾರಣವೇನೇ ಇರಲಿ, ಒಮ್ಮೆ ಓದಲು ತೊಡಗಿಸಿಕೊಂಡರೆ, ಓದುವ ವೇಗ ಬಂದರೆ, ಕಾವ್ಯ ತನ್ನಿಂದ ತಾನೇ ನಮ್ಮನ್ನು ತೊಡಗಿಸಿಕೊಳ್ಳುತ್ತದೆ ಎನ್ನುವುದು ನಮ್ಮ ಅನುಭವ, ಕುಮಾರವ್ಯಾಸನ ವಿಷಯದಲ್ಲಂತೂ ಅದು ಹೆಚ್ಚು ಸತ್ಯ.

ಜೊತೆಗೆ ಹೀಗೆ ನಮ್ಮದೇ ಒಂದು ಇ-ಆವೃತ್ತಿಯನ್ನು ತಯಾರಿಸಿಕೊಳ್ಳುವುದರ ಮೂಲಕ ಅದರಲ್ಲಿ ಹುಡುಕುವಿಕೆ, ಗುರುತಿಟ್ಟು ಕೊಳ್ಳುವಿಕೆ ಇತ್ಯಾದಿ ಸೌಲಭ್ಯಗಳನ್ನೂ ಅಭಿವೃದ್ಧಿ ಪಡಿಸಬಹುದೇ ಎಂಬ ಆಲೋಚನೆಯೂ ಇದೆ.ಇಷ್ಟಕ್ಕೂ ಇದೊಂದು ಮಹಾನ್ ಪ್ರಯತ್ನವೆಂಬ ಹಮ್ಮೇನೂ ನಮಗಿಲ್ಲ. ಈ ಇನ್ನೂರು ವರ್ಷಗಳಲ್ಲಿ ಅನೇಕ ವ್ಯಕ್ತಿ-ಸಂಸ್ಥೆಗಳು ಓದುವುದೇ ಕಷ್ಟವಾದ, ವಿವಿಧ ಪಾಠಾಂತರಗಳುಳ್ಳ ತಾಳೆಗರಿಗಳ ಆಕರಗಳಿಂದ ಗದುಗಿನ ಭಾರತವನ್ನು ಸಂಪಾದಿಸುವ/ ಸಂಸ್ಕರಿಸುವ/ ಪರಿಷ್ಕರಿಸುವ ಮಹತ್ ಕಾರ್ಯಗಳನ್ನೇ ಮಾಡಿದ್ದಾರೆ (ಕಂಪ್ಯೂಟರೆಂಬ ಆಧುನಿಕ ಸಾಧನವಿಲ್ಲದೆಯೂ!). ಆದ್ದರಿಂದ ನಮ್ಮ ಈ ಚಿಕ್ಕ ಪ್ರಯತ್ನದಿಂದ ಕುಮಾರವ್ಯಾಸಭಾರತದ ಬಳಕೆ ಹೆಚ್ಚಿಸಿಕೊಳ್ಳುವುದು ಬಿಟ್ಟರೆ ಹೆಚ್ಚಿನ ಫಲವನ್ನೇನೂ ನಾವು ನಿರೀಕ್ಷಿಸುವುದಿಲ್ಲ.

ಮೇಲಿನ ನಿವೇದನೆಯನ್ನು ಕೇಳಿದರೆ ಈ ಬ್ಲಾಗು ಕಾವ್ಯಪ್ರೇಮಿಗಳ ಚಾವಡಿಯಂತೆ ತೋರುತ್ತದೆ. ಹಳಗನ್ನಡದ ಬಗ್ಗೆ, ವಿಶೇಷವಾಗಿ ಕುಮಾರವ್ಯಾಸನ ಬಗ್ಗೆ ಅಭಿಮಾನವುಳ್ಳ ಒಂದಷ್ಟು ಸಹೃದಯರು ಒಂದೆಡೆ ಸೇರಿ ಭಾರತವನ್ನು ವಾಚಿಸಿದಂತೆ ಈ `ಬ್ಲಾಗ್ ಪ್ರಕ್ರಿಯೆ' ಇದೆ. ಹಿಂದಿನ ಕಾಲದಲ್ಲಿ ನಡೆಯುತ್ತಿದ್ದ ಭಾರತ ವಾಚನ-ಶ್ರವಣ ಪ್ರಕ್ರಿಯೆಯ ಹೊಸ ರೂಪ ಈ ಬ್ಲಾಗು ಎಂದೂ ಅರ್ಥೈಸಬಹುದು.ಸುನಾಥ್ ಮತ್ತು ಜ್ಯೋತಿ ಮಹದೇವ್ ಅವರು ಸೇರಿಕೊಂಡು ಈಗಾಗಲೇ `ವಿರಾಟ ಪರ್ವ'ವನ್ನು ಪೂರ್ತಿಯಾಗಿ ಬ್ಲಾಗಿಗೆ ಉಣಿಸಿದ್ದಾರೆ. ಉಳಿದ ಪರ್ವಗಳ ಕೆಲವು ಪದ್ಯಗಳೂ ಬ್ಲಾಗ್ನಲ್ಲಿವೆ.

ಕುಮಾರವ್ಯಾಸಭಾರತದ ಆದಿಪರ್ವದ ನಾಂದಿ ಪದ್ಯ ಹೀಗಿದೆ:

ಶ್ರೀವನಿತೆಯರಸನೆ ವಿಮಲ ರಾ

ಜೀವ ಪೀಠನ ಪಿತನೆ ಜಗಕತಿ

ಪಾವನನೆ ಸನಕಾದಿ ಸಜ್ಜನ ನಿಕರ ದಾತಾರ

ರಾವಾಣಾಸುರ ಮಥನ ಶ್ರವಣ ಸು

ಧಾವಿನೂತನ ಕಥನ ಕಾರಣ

ಕಾವುದಾತನ ಜನವ ಗದುಗಿನ ವೀರನಾರಯಣ

`ಗದುಗಿನ ಭಾರತ'ದ ಬ್ಲಾಗಿಗರನ್ನು ಅಭಿನಂದಿಸುತ್ತ, ವೀರನಾರಾಯಣನ ಕರುಣೆ ಇತರ ಮಹಾಕಾವ್ಯಗಳನ್ನೂ ಅಂತರ್ಜಾಲಕ್ಕೆ ಉಣಿಸಲು ಬ್ಲಾಗಿಗರಿಗೆ ಪ್ರೇರಣೆ ಮತ್ತು ಶಕ್ತಿಯನ್ನು ನೀಡಲಿ ಎಂದು ಆಶಿಸೋಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.