ಬೆಂಗಳೂರು ನಗರ ಶರವೇಗದಲ್ಲಿ ಬೆಳೆಯುತ್ತಿದೆ. ಇದಕ್ಕೆ ಐಟಿ, ಬಿಟಿ ಕ್ಷೇತ್ರಗಳಷ್ಟೇ ಅಲ್ಲದೆ ಸಿದ್ಧಉಡುಪು ಮತ್ತಿತರ ವಲಯಗಳೂ ಕಾರಣ. ಇದರಿಂದ ಬೆಂಗಳೂರಿಗೆ ಅಂತರ‌್ರಾಷ್ಟ್ರೀಯ ಮಟ್ಟದಲ್ಲೂ ಒಳ್ಳೆ ಹೆಸರಿದೆ. ಹೀಗಾಗಿಯೇ ನಿತ್ಯ ಒಂದಿಲ್ಲೊಂದು ರಾಷ್ಟ್ರೀಯ ಅಥವಾ ಅಂತರ್‌ರಾಷ್ಟ್ರೀಯ ಸಮಾವೇಶಗಳಿಗೂ ಇದು ಕೇಂದ್ರವಾಗಿದೆ.

ಸಮಾವೇಶಗಳು ಸಾಕಷ್ಟು ನಡೆಯುತ್ತವೆ ನಿಜ. ಆದರೆ ಅದಕ್ಕೆ ತಕ್ಕಂತೆ ಸುಸಜ್ಜಿತ ಸಮಾವೇಶ ಕೇಂದ್ರಗಳು ಮಾತ್ರ ಬೆರಳೆಣಿಕೆಯಷ್ಟಿದ್ದವು. ಈ ಕೊರತೆ ನಿವಾರಿಸುವ ನಿಟ್ಟಿನಲ್ಲಿ ಈಗ ತಲೆಯೆತ್ತಿದೆ ಮ್ಯಾನ್‌ಫೋ ಅಂತರ್‌ರಾಷ್ಟ್ರೀಯ ಸಮಾವೇಶ ಕೇಂದ್ರ. ನಗರದ ಒಳಭಾಗದಲ್ಲಿದೆ ಎಂಬುದು ಇದರ ಇನ್ನೊಂದು ಹೆಗ್ಗಳಿಕೆ.

ನಾಗವಾರ ಬಳಿ ಬಿಇಎಲ್ ಕಾರ್ಪೊರೇಟ್ ಕಚೇರಿ ಎದುರಿನಲ್ಲಿ ತಲೆಎತ್ತಿರುವ ಮ್ಯಾನ್‌ಫೋ ಎಲ್ಲ ರೀತಿಯ ಸೌಲಭ್ಯಗಳಿಂದ ಸುಸಜ್ಜಿತವಾಗಿದೆ. ಅತ್ಯಾಧುನಿಕ ಸೌಕರ್ಯಗಳ ಈ ಕಟ್ಟಡದ ವಿಸ್ತೀರ್ಣ ಒಂದು ಲಕ್ಷ ಚದರ ಅಡಿ. 800 ಕಾರುಗಳನ್ನು ಏಕಕಾಲದಲ್ಲಿ ನಿಲುಗಡೆ ಮಾಡಬಹುದು. ಇದರ ಪ್ರವರ್ತಕರ ಪ್ರಕಾರ 7 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡ ಈ ಸಂಕೀರ್ಣ ದಕ್ಷಿಣ ಭಾರತದಲ್ಲೇ ಅತಿ ದೊಡ್ಡದು.

`ರಾಷ್ಟ್ರೀಯ ಹಾಗೂ ಅಂತರ್‌ರಾಷ್ಟ್ರೀಯ ವ್ಯಾಪಾರ ಪ್ರದರ್ಶನ, ಸಮಾವೇಶ ಹಾಗೂ ಇತರೆ ಕಾರ್ಯಕ್ರಮಗಳನ್ನು ಏರ್ಪಡಿಸಲು ಇದು ಸೂಕ್ತವಾಗಿದೆ. ವಿಶ್ವದರ್ಜೆ ಪರಿಕಲ್ಪನೆಯೊಂದಿಗೆ ಮೈದಳೆದಿದೆ. ಈ ಮೂಲಕ ಬೆಂಗಳೂರಿನ ಸಾಮರ್ಥ್ಯವನ್ನು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಸಾಬೀತು ಪಡಿಸುತ್ತಿದ್ದೇವೆ~ ಎನ್ನುತ್ತಾರೆ ಮ್ಯಾನ್‌ಪೊನ ಅರವಿಂದ ಪರೇಕ್.

ಚಲನಚಿತ್ರ ಚಿತ್ರೀಕರಣ, ಕಾರ್ಯಕ್ರಮ, ವಿವಾಹ ಹಾಗೂ ಮತ್ತಿತರೆ ಸಮಾರಂಭಗಳಿಗೂ ಇಲ್ಲಿ ಅವಕಾಶವಿದೆ. ಆಕರ್ಷಕ ವೇದಿಕೆ, ತರಬೇತಿ ಕೇಂದ್ರ, ಆಹಾರ ಮಳಿಗೆ ಎಲ್ಲವೂ ಅತ್ಯಾಧುನಿಕವಾಗಿದೆ. ಜೊತೆಗೆ ಬೃಹತ್ ವಿಸ್ತೀರ್ಣದ 6 ಸಭಾಂಗಣಗಳಿವೆ. ಸ್ಥಳ: ನಾಗವಾರ ರಿಂಗ್ ರಸ್ತೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.