`ಪರಿಣಿತಾ~ ಚಿತ್ರದ ಸ್ವಾವಲಂಬಿ ಸಂಕೋಚ ಸ್ವಭಾವದ ಚಂಚಲೆ `ಲೊಲಿತಾ~ ಪಾತ್ರವಾಗಿರಬಹುದು, `ಪಾ~ ಚಿತ್ರದ ಸ್ವತಂತ್ರ ಅಮ್ಮ `ವಿದ್ಯಾ~ಳ ಪಾತ್ರವಾಗಿರಬಹುದು, `ದಿ ಡರ್ಟಿ ಪಿಕ್ಚರ್~ನ ಮಾದಕ ಚೆಲುವೆ ರೇಷ್ಮಾ ಆಗಿರಬಹುದು...

ಯಾವುದೇ ಪಾತ್ರವಿರಲಿ ಪಾತ್ರೆಯಾಕಾರಕ್ಕೆ ನೀರು ಹೊಂದುವಂತೆ ವಿದ್ಯಾ ಆ ಪಾತ್ರವನ್ನು ಪ್ರವೇಶಿಸುತ್ತಾರೆ- ಹೀಗೆ `ಕಹಾನಿ~ ಚಿತ್ರದ ನಿರ್ದೇಶಕ ಸುಜೊಯ್ ಘೋಷ್ ವಿದ್ಯಾಳ ಗುಣಗಾನ ಮಾಡುತ್ತಿದ್ದಾರೆ.

ದುಬೈನಲ್ಲಿರುವ ವಿದ್ಯಾ ನಿರ್ದೇಶಕರನ್ನು ಹೊಗಳುತ್ತಿದ್ದಾರೆ. `ರಾಷ್ಟ್ರೀಯ ಪ್ರಶಸ್ತಿ~ ಬಂದಿರುವ ಸಂತೋಷವನ್ನು ಹಂಚಿಕೊಳ್ಳುತ್ತ, ಚಿತ್ರೋದ್ಯಮದಲ್ಲಿ ಬಂದಾಗಿನಿಂದಲೂ ವಿಭಿನ್ನ ಪಾತ್ರಗಳು ದೊರಕಿವೆ. ನಿರ್ದೇಶಕರ ಈ ವಿಶ್ವಾಸವೇ ಪ್ರತಿ ಚಿತ್ರದಲ್ಲೂ ಹೊಸತನವನ್ನು ನೀಡಲು ಸಾಧ್ಯವಾಗಿದೆ ಎಂದು ಹೇಳಿದ್ದಾರೆ.

`ಇಷ್ಕಿಯಾ~ ಚಿತ್ರದ ಕೃಷ್ಣಾ ವರ್ಮಾ ಪಾತ್ರ ತಮಗೆ ಇಷ್ಟವಾದ ಪಾತ್ರ ಎನ್ನುವ ವಿದ್ಯಾಗೆ `ಪಾ~ ಚಿತ್ರ ಒಂದು ಅನುಭವಕ್ಕಿಂತ ಪಾಠಶಾಲೆ ಇದ್ದಂತೆ ಇತ್ತು ಎನ್ನುತ್ತಾರೆ. ಆರ್.ಬಾಲ್ಕಿ, ಮಣಿರತ್ನಂ ಮುಂತಾದ ಹೆಸರಾಂತ ನಿರ್ದೇಶಕರೊಂದಿಗೆ ನಟಿಸಿರುವುದು ವಿದ್ಯಾ ಹೆಗ್ಗಳಿಕೆ.
ಬಾಲಿವುಡ್ನ ನಂ.1 ರೇಸ್ನಲ್ಲಿ ಯಾವತ್ತೂ ಇರದ ಬಾಲೆಯೆಂದರೆ ವಿದ್ಯಾ ಬಾಲನ್ ಎಂದೇ ಹೆಸರಾಗಿದ್ದರು. ಆದರೆ ಪ್ರತಿವರ್ಷವೂ ಒಂದಲ್ಲ ಒಂದು ಪ್ರಶಸ್ತಿ ಅವರಿಗೆ ಸಲ್ಲುತ್ತಾ ಬಂದಿದೆ.

ಈಗಲೂ ನಂ 1 ಹೀರೊಯಿನ್ ರೇಸಿನಲ್ಲಿ ವಿದ್ಯಾ ಇಲ್ಲ. ಖಾನ್ ಹಾಗೂ ಕಪೂರ್ಗಳ ಜೊತೆಗೆ ವಿದ್ಯಾ ನಿಲ್ಲುತ್ತಾಳೆ ಎಂದು ಬಾಲಿವುಡ್ ಹೇಳುತ್ತಿದೆ. ಸದ್ಯಕ್ಕಂತೂ ವಿದ್ಯಾ ಊಲಲಲಾ ಹಾಡು ಹೇಳುತ್ತ ಸಂತಸ ಹಂಚಿಕೊಳ್ಳುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.