ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ವಾನಗಳಿಗೊಂದು ಈಜುಮನೆ

ಪ್ರಾಣಿ ಜಗತ್ತು
Last Updated 28 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ತಮ್ಮ ನಾಯಿಗಳೊಂದಿಗೆ ಖುಷಿಯಿಂದ ಈಜುವ ಮಾಲೀಕರು. ನೀರಿನಿಂದ ಹೊರಬಂದ ನಾಯಿಗಳು ತೇವದ ಮೈಯನ್ನು ಆರಿಸಿಕೊಳ್ಳಲು ಲಾನ್‌ನಲ್ಲಿ ಮನಸ್ಸಿಗೆ ಬಂದಂತೆ ಓಡುತ್ತಾ, ಹುಲ್ಲಿನ ಮೇಲೆ ಬಿದ್ದು ಹೊರಳಾಡುತ್ತವೆ...

ಇಂಥ ನೋಟ ಕಂಡು ಬರುವುದು ಹೆಣ್ಣೂರು ಕ್ರಾಸ್‌ನ ಬೈರತಿ ಬಂಡೆಗೆ ಸಮೀಪದಲ್ಲಿರುವ ‘ಎಲೈಟ್‌ ಕೆ9 ಕ್ಲಬ್‌’ನಲ್ಲಿ. ಇಲ್ಲಿ ನಾಯಿ ಹಾಗೂ ಅದರ ಮಾಲೀಕರು ಖುಷಿಯಿಂದ ಕಾಲ ಕಳೆಯಲು ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.

2500 ಚದರಡಿ ಸ್ಥಳದಲ್ಲಿ ನಿರ್ಮಿಸಲಾಗಿರುವ ಈ ಕ್ಲಬ್‌ನಲ್ಲಿ ಕ್ಯಾಂಟೀನ್‌, ಗ್ರೂಮಿಂಗ್‌ ಸ್ಟುಡಿಯೊ, ಡೇ ಕೇರ್‌, ಹೈಡ್ರೊ ಥೆರಪಿ, ಹಾಸ್ಟೆಲ್‌ (ಏರ್‌ಕಂಡಿಷನಿಂಗ್‌ ಬೋರ್ಡಿಂಗ್‌), ಲಾಂಜ್‌, ಆಸ್ಪತ್ರೆ ಸೌಲಭ್ಯಗಳನ್ನು ಒದಗಿಸುತ್ತಿದೆ. ವೈದ್ಯರೂ 24 ಗಂಟೆ ಲಭ್ಯರಿರುತ್ತಾರೆ.

ಸೌಲಭ್ಯಗಳ ವಿವರ
ಡೇ ಕೇರ್‌, ಬೋರ್ಡಿಂಗ್‌ (ಹವಾನಿಯಂತ್ರಿತ ಕೊಠಡಿ), ಈಜುಕೊಳ ಸೇರಿದಂತೆ ಹಲವು ಸೌಲಭ್ಯಗಳು ನಾಯಿಗಳ ಖುಷಿ ಹೆಚ್ಚಿಸುತ್ತವೆ. ಇಲ್ಲಿರುವ ಈಜುಕೊಳ 37 ಅಡಿ ಉದ್ದ, 15 ಅಡಿ ಅಗಲ ಹಾಗೂ 3–5 ಅಡಿ ಆಳ ಇದೆ. ಹೈಡ್ರೊ ಥೆರಪಿ ಚಿಕಿತ್ಸೆ ಸಹ ಲಭ್ಯ.

ಮುಂದಿನ ದಿನಗಳಲ್ಲಿ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವ ನಾಯಿಗಳು ಹಾಗೂ ಸ್ಥೂಲಕಾಯದ ನಾಯಿಗಳಿಗೆ ಚಿಕಿತ್ಸೆ ನೀಡಲು ‘ಅಂಡರ್‌ ವಾಟರ್‌ ಟ್ರೆಡ್‌ಮಿಲ್‌’ ಪರಿಚಯಿಸಲಿದ್ದಾರೆ. ಜೊತೆಗೆ  ಆಂಬುಲೆನ್ಸ್‌ ಸೌಲಭ್ಯ ಸಹ ಕಲ್ಪಿಸಲಾಗುವುದು ಎನ್ನುತ್ತಾರೆ ಕ್ಲಬ್‌ನ ಮಾಲೀಕ ಪ್ರತೀಕ್‌ ಸೆನ್‌. 

‘ಸದ್ಯ 47 ನಾಯಿಗಳು ಸದಸ್ಯತ್ವ ಪಡೆದಿವೆ. ಈ ವರ್ಷಾಂತ್ಯಕ್ಕೆ 250 ಸದಸ್ಯರಿಗೆ ಅವಕಾಶ ನೀಡಲಾಗುವುದು. ಪ್ರಮುಖ ಔಷಧಿ ಹಾಗೂ ಚುಚ್ಚು ಮದ್ದುಗಳನ್ನು ಸಂಗ್ರಹಿಸಿಡಲಾಗುವುದು. ಮೊದಲ ಮಹಡಿಯಲ್ಲಿ ಲಾಂಜ್‌  ನಿರ್ಮಿಸಲಾಗಿದೆ. ಇಲ್ಲಿ ಸಾಕು ಪ್ರಾಣಿಗಳ ಚಿತ್ರಗಳನ್ನು ಪ್ರದರ್ಶಿಸಲು ಉಚಿತ ಅವಕಾಶ ಕಲ್ಪಿಸಲಾಗುವುದು’ ಎನ್ನುತ್ತಾರೆ ಅವರು.

ನಾಯಿಗಳನ್ನು ಕ್ಲಬ್‌ಗೆ ಕರೆತರಲು ವಾಹನ ಸೌಲಭ್ಯ ಸಹ ನೀಡಲಾಗುವುದು. ಅದಕ್ಕೆ ಪ್ರತ್ಯೇಕವಾಗಿ ಹಣ ನೀಡಬೇಕು. ಇಲ್ಲಿ ಯಾವ ಸೇವೆ ಪಡೆಯಬೇಕಾದರೂ ಮುಂಚಿತವಾಗಿ ಬುಕ್‌ ಮಾಡಿಕೊಳ್ಳಬೇಕು. ಮಾಹಿತಿಗೆ ಮೊ: 97381 11111 ಸಂಪರ್ಕಿಸಿ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT