ಸೃಷ್ಟಿ ಸಂಗಿತೋತ್ಸವ
ಸೃಷ್ಟಿ ಕಲಾ ವಿದ್ಯಾಲಯ: ಶನಿವಾರ ಸಂಸ್ಥೆಯ ದ್ವಿತೀಯ ವಾರ್ಷಿಕೋತ್ಸವ, ಸಂಗಿತೋತ್ಸವ ಮತ್ತು ಖ್ಯಾತ ತಬಲಾ ವಾದಕ ಪಂಡಿತ್ ಸತೀಶ್ ಹಂಪಿಹೊಳಿ ಅವರಿಗೆ ನಾದೋಪಾಸಕ ಪ್ರಶಸ್ತಿ ಪ್ರದಾನ. ಸೃಷ್ಟಿ ಕಲಾ ಶಾಲೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ.

ತಬಲಾ ವಾದನದಿಂದ ಪಂಡಿತರೆನಿಸಿಕೊಳ್ಳಲು ಸ್ವರ ಸರಸ್ವತಿಯು ಅವರನ್ನು ಆಶೀರ್ವಾದ ಮಾಡಿದ್ದಾಳೆ ಎಂದೇ ಅರ್ಥ. ಅಲ್ಲದೆ ಸತತ ಪರಿಶ್ರಮವು ಪಾಂಡಿತ್ಯದ ಕುರುಹು. ವ್ಯಕ್ತಿಯು ಶಕ್ತಿಯಾಗಲು, ಅಭಿಮಾನಿಗಳ ಹನ್ಮನದಲ್ಲಿ ನೆಲೆನಿಂತು ಆರಾದನೆಗೆ ಪ್ರಿಯವಾಗಲು ಕಾರಣರಾಗುತ್ತಾರೆ. ಹೀಗೆ ಒಬ್ಬರು.

ಸದಾ ಸಂಗೀತ ಕಾಯಕದಲ್ಲಿ ತೊಡಗಿಸಿಕೊಂಡವರು ನಾಡಿನ ಖ್ಯಾತ ತಬಲಾಪಟು ಪಂಡಿತ್ ಸತೀಶ್ ಹಂಪಿಹೊಳಿ. ಪಂಡಿತ್ ಎಂ.ಎನ್. ಕಸ್ತೂರಿ ಮತ್ತು ನಂತರ ದಿವಂಗತ ಪಂಡಿತ್ ಬಸವರಾಜ್ ಬೆಂಡಿಗೇರಿಯವರಲ್ಲಿ ತಬಲಾ ಅಭ್ಯಾಸ ಮಾಡಿದ್ದಾರೆ. ಸ್ನಾತಕೋತ್ತರ ವಿದ್ವತ್ ಪರೀಕ್ಷೆಯಲ್ಲಿ ಚಿನ್ನದ ಪದಕ ಪಡೆದಿದ್ದಾರೆ.

ಅಖಿಲ ಭಾರತ ಗಂದರ್ವ ಮಹಾ ವಿದ್ಯಾಲಯದ ತಬಲಾ ವಿಶಾರದದಲ್ಲಿ ಉನ್ನತ ಶ್ರೇಣೆಯಲ್ಲಿ ತೇರ್ಗಡೆ ಹೊಂದಿದ್ದು, ಆಕಾಶವಾಣಿ ದೂರದರ್ಶನದ ಬಿ ಹೈ ದರ್ಜೆಯ ಕಲಾವಿದರಾಗಿದ್ದಾರೆ.

ದೇಶ ವಿದೇಶಗಳಲ್ಲಿ ಕಾರ್ಯಕ್ರಮ ಕೊಟ್ಟ ಕೀರ್ತಿ ಇವರದ್ದು. ಬೆಂಗಳೂರು ಗಾಯನ ಸಮಾಜದ ಸಂಗೀತ ಸಮ್ಮೇಳನದಲ್ಲಿ ಉತ್ತಮ ತಬಲಾ ವಾದಕ, ತಬಲಾ ನಾದಸಾದಕ , ರಂಗ ಕಲಾಶ್ರೀ , ಅಜಂತಾ ಸ್ವರ್ಣ ದಂಪತಿ, ಸ್ವರ ಕಲಾ ಗೌರವ, ಪಂಚಮ ಸಂಗೀತ ಪ್ರತಿಷ್ಠಾನ ಸಂಸ್ಥೆಯ ಕಲಾ ಕೌಸ್ತುಭ ಹೀಗೆ ವಿವಿಧ ಪ್ರಶಸ್ತಿ ಸನ್ಮಾನಗಳಿಗೆ ಭಾಜನರಾಗಿದ್ದಾರೆ.

ಉದ್ಘಾಟನೆ: ಕವಿ ಜಿ. ಎಸ್. ಶಿವರುದ್ರಪ್ಪ, ಅತಿಥಿಗಳು: ಡಾ. ನರಸಿಂಹಲು ವಡವಾಟಿ, ಪಂಡಿತ್ ಪರಮೇಶ್ವರ ಹೆಗಡೆ, ವೀಣಾ ರೈ, ಅಧ್ಯಕ್ಷತೆ: ಮಾಸ್ಟರ್ ಹಿರಣ್ಣಯ್ಯ.
ಸ್ಥಳ: ಗಾಯನ ಸಮಾಜ, ಕೆ.ಆರ್. ರಸ್ತೆ. ಸಂಜೆ 4.

ಮಾನಸಿ ರಾಗಮಾಲಿಕಾ
ಅನನ್ಯ: ಶನಿವಾರ ಗೀತ ಶಾಸ್ತ್ರ ಸಿಂಚನ ಸರಣಿಯಲ್ಲಿ `ರಾಗಮಾಲಿಕಾ~ ಸಂಯೋಜನೆ ಕುರಿತು ವಿದುಷಿ ಮಾನಸಿ ಪ್ರಸಾದ್ ಅವರಿಂದ ಸಂಗೀತ ಕಛೇರಿ. ನಳಿನಾ ಮೋಹನ್ (ವಯಲಿನ್), ಎನ್. ವಾಸುದೇವ (ಮೃದಂಗ) ಮತ್ತು ಭಾರದ್ವಾಜ್ ಸಾತವಳ್ಳಿ (ಮೋರ್ಚಿಂಗ್). ಸ್ಥಳ: ಅನನ್ಯ ಸಭಾಂಗಣ, 91/2, 4ನೇ ಮುಖ್ಯರಸ್ತೆ, ಮಲ್ಲೇಶ್ವರ. ಸಂಜೆ 6.30.

ಕಲಾ ಪ್ರದರ್ಶನ
ಸಾರಾ ಅರಕ್ಕಲ್ ಗ್ಯಾಲರಿ: ಕಲಾ ಗ್ಯಾಲರಿಯ 8ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಭಾನುವಾರ 45 ಸಮಕಾಲೀನ ಕಲಾವಿದರ ಕಲಾಕೃತಿಗಳ ಪ್ರದರ್ಶನ ಉದ್ಘಾಟನೆ. ನಂ. 156, 4ನೇ ಮುಖ್ಯರಸ್ತೆ, ಬಿಇಎಂಎಲ್ ಬಡಾವಣೆ, ಐಟಿಪಿಎಲ್ ರಸ್ತೆ. ಸಂಜೆ 6.30

ಕಲಾ ದರ್ಶನ
ಖ್ಯಾತ ಕಲಾವಿದರಾದ ಕೈಲಾಸ್ ಅನ್ಯಾಲ್, ವಿಜಯಾ ರಾಜ್ ಬೋದಾನ್‌ಕರ್, ಸಂಗೀತ ಗದಾ ಮತ್ತು ಕಿಶೋರ್ ನಾದವ್‌ದೇಖರ್ ಅವರ ಅಪರೂಪದ ಕಲಾಕೃತಿಗಳು ಸೆ.15ರ ವರೆಗೆ ಪ್ರದರ್ಶನಗೊಳ್ಳಲಿವೆ. ಸ್ಥಳ: ಚಿತ್ರಕಲಾ ಪರಿಷತ್, ಬೆಳಿಗ್ಗೆ 10.30ರಿಂದ 7.30.

ವಿಘ್ನರಾಜ ಸಂಗೀತ
ಸರಸ್ವತಿ ಗಾನ ಸಭಾ ಮತ್ತು ಶ್ರೀ ಗುರುವಾಯೂರಪ್ಪನ್ ಭಜನ್ ಸಮಾಜ ಟ್ರಸ್ಟ್: ಮಾಸಿಕ ಸಂಗೀತ ಕಛೇರಿ ಅಂಗವಾಗಿ ಭಾನುವಾರ ವಿಘ್ನರಾಜ, ಬಿ.ಕೆ. ರಘು ಮತ್ತು ಅರ್ಜುನ ಕುಮಾರ್ ಅವರಿಂದ ಸಂಗೀತ ಕಛೇರಿ.

1979ರಲ್ಲಿ ಹುಟ್ಟಿದ ವಿಘ್ನರಾಜ ಮೊದಲಿಗೆ ತಮ್ಮ ತಂದೆ ಸೂರ್ಯನಾರಾಯಣ ಭಟ್ ಅವರ ಬಳಿ ಸಂಗೀತದ ಓನಾಮ ಕಲಿತರು. ತಂದೆಯ ಶಿಷ್ಯ ಸುಬ್ರಹ್ಮಣ್ಯ ಭಟ್ ಅವರ ಬಳಿ ಸಂಗೀತಾಭ್ಯಾಸ ಮುಂದುವರಿಸಿದರು. 16 ವರ್ಷದವರಿದ್ದಾಗ ತಂದೆಯ ಜೊತೆ ಸಂಗೀತ ಕಛೇರಿ ನೀಡಲು ಆರಂಭಿಸಿದರು.

ಮಧುರ ಕಂಠದಿಂದ ಖ್ಯಾತರಾಗಿರುವ ವಿಘ್ನರಾಜ ಕೊಳಲು ವಾದಕರೂ ಹೌದು. ದೇಶ, ವಿದೇಶದ ಹಲವು ವೇದಿಕೆಗಳಲ್ಲಿ ಸಂಗೀತ ಮತ್ತು ಕೊಳಲು ಕಛೇರಿ ನೀಡಿದ್ದಾರೆ. ಪ್ರಸ್ತುತ ಕ್ವಾಲಾಲಂಪುರದ `ಟೆಂಪಲ್ ಆಫ್ ಫೈನ್ ಆರ್ಟ್ಸ್ ಇಂಟರ್‌ನ್ಯಾಷನಲ್~ನಲ್ಲಿ ವಾದ್ಯ ವಿಭಾಗದ ಉಸ್ತುವಾರಿ ಹೊತ್ತಿದ್ದಾರೆ.

ಸ್ಥಳ: ಉನ್ನತಿ ಕೇಂದ್ರ, ನಂ 1, ಗಣೇಶ ಟೆಂಪಲ್ ರಸ್ತೆ, ಎನ್‌ಜಿಇಎಫ್ ಬಡಾವಣೆ, ಸದಾನಂದ ನಗರ. ಬೆಳಿಗ್ಗೆ 10.30.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.