ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಟಡ್‌ ಹುಡುಗರು!

ಚೆಲುವಿನ ಚಿತ್ತಾರ
Last Updated 20 ಜನವರಿ 2014, 19:30 IST
ಅಕ್ಷರ ಗಾತ್ರ

ಫ್ಯಾಷನ್  ಹುಡುಗಿಯರಿಗಷ್ಟೆ ಸೀಮಿತವಲ್ಲ, ಹುಡುಗರು ಸಹ  ಫ್ಯಾಷನ್ ಪ್ರಿಯರೇ. ಹುಡುಗರಿಗೂ ಫ್ಯಾಷನ್ ಪ್ರಪಂಚದಲ್ಲಿ ಹೆಚ್ಚಿನ ಆಯ್ಕೆಗಳಿವೆ. ತಾವು ಹುಡುಗಿಯರಿಗೇನೂ ಕಮ್ಮಿ ಇಲ್ಲ ಎಂಬಂತೆ ಸ್ಟೈಲಿಶ್ ಆಗಿ ಕಾಣಲು ಇವರು ಹಾಕುವ ಡ್ರೆಸ್, ಹೇರ್ ಸ್ಟೈಲ್, ರಿಂಗ್, ಸ್ಟಡ್ (ಕಿವಿ ಓಲೆ), ನೆಕ್ ಚೈನ್ ಎಲ್ಲವೂ ಹೊಸ ವಿನ್ಯಾಸದಿಂದ ಕೂಡಿವೆ.

ಹೊಸತನ ಬಯಸುವ ಯುವಕರು ತಮ್ಮ ಕೇಶ, ಕಿವಿ, ಕತ್ತು, ಕೈಬೆರಳುಗಳನ್ನು ವಿಧವಿಧದ ಆಕರ್ಷಕ ಆಭರಣಗಳಿಂದ  ಅಲಂಕರಿಸಿಕೊಂಡಿರುತ್ತಾರೆ.  ಬೆಂಗಳೂರಿನಂತಹ ಹೈಟೆಕ್ ಸಿಟಿಯಲ್ಲಿನ ಯುವಕರು ಪ್ರತಿದಿನ ಹೊಸ ಹೊಸ ವಿನ್ಯಾಸದ ಆಭರಣಗಳನ್ನು ಹಾಕಿಕೊಳ್ಳುತ್ತಾರೆ ಎಂಬುದು ವಿಶೇಷ. ತಮ್ಮ ನೆಚ್ಚಿನ ನಾಯಕ ನಟರ ಅನುಕರಣೆ,  ವಿಶೇಷವಾಗಿ ಕಾಣುವ ಬಯಕೆ, ಗುರುತಿಸಿಕೊಳ್ಳುವ ತವಕದಿಂದ ತಮ್ಮ ಕೇಶ, ವೇಷಭೂಷಣದಲ್ಲಿ ದಿನಕ್ಕೊಂದು ವಿನ್ಯಾಸ ಮಾಡಿಕೊಳ್ಳುತ್ತಾರೆ. ಎಲ್ಲರ ಚಿತ್ತವನ್ನು ಸೆಳೆಯುವ ಶಕ್ತಿ ಈ ರೀತಿಯ ವಿನ್ಯಾಸಗಳಿಗೆ ಉಂಟು ಎಂಬುದು ಇವರು ನೀಡುವ ಉತ್ತರ. ಸೆಲೆಬ್ರಿಟಿಗಳು ತಮ್ಮ ವೃತ್ತಿಯಲ್ಲಿನ ಹೊಸತನಕ್ಕಾಗಿ ಬದಲಾವಣೆ ಬಯಸಿದರೆ, ಅದು ಯುವಕರಿಗೆ ಫ್ಯಾಷನ್ ಆಗಿ ಕಾಣುತ್ತದೆ. ಇಂತಹ  ಫ್ಯಾಷನ್ ಆಭರಣಗಳು ಹುಡುಗರ ದೇಹವನ್ನು ಅಲಂಕರಿಸಿ ನೋಡುಗರ ಚಿತ್ತವನ್ನು ಅಪಹರಿಸುತ್ತಿವೆ.

ಹುಡುಗಿಯರನ್ನು ಆಕರ್ಷಿಸಲು, ಅವರು ತಮ್ಮನ್ನು ನೋಡಲಿ ಎಂಬ ಬಯಕೆಯಿಂದ ಈ ರೀತಿಯ ಆಭರಣಗಳನ್ನು ತೋಡುತ್ತಾರಂತೆ.  ಹುಡುಗರ

ಗುಂಪಿನಲ್ಲಿ ತಾವು ವಿಶೇಷವಾಗಿ ಕಾಣಬೇಕು ಎಂಬುದೂ ಈ ಆಭರಣಗಳ ಜನಪ್ರಿಯತೆಗೆ ಕಾರಣವಂತೆ. ಇವರಲ್ಲಿ ಒಂದು ಕಿವಿಗೆ ಓಲೆ ಹಾಕಿಕೊಳ್ಳುವವರೇ ಹೆಚ್ಚು. ಕಣ್ಣರೆಪ್ಪೆ, ಗಲ್ಲ, ಹುಬ್ಬು, ತುಟಿಗೂ ಓಲೆ ಚುಚ್ಚಿಕೊಂಡು ವಿಭಿನ್ನವಾಗಿ ಕಾಣಿಸಿಕೊಳ್ಳುವುದು ಈಗಿನ ಯುವಕರ ಫ್ಯಾಷನ್. 

ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವಕ್ಕೊಳಗಾದವರು, ರಾಕ್ ಸಂಗೀತ ಕೇಳುವವರು, ಸಿನಿಮಾ ಮೋಡಿಗೆ ಬಿದ್ದವರು ಈ ರೀತಿಯ ಆಭರಣಗಳನ್ನು ಹೆಚ್ಚಾಗಿ ತೊಡುತ್ತಾರೆ.

ಕುತ್ತಿಗೆಗೆ ಹಾಕಿಕೊಳ್ಳುವ ಪೆಂಡೆಂಟ್, ಮುಂಗೈಯಲ್ಲಿ ತೊಡುವ ಮಣಿಗಳು, ರಿಸ್ಟ್ ಬ್ಯಾಂಡ್, ಕಿವಿಗೆ ಸ್ಟಡ್‌, ಬೆರಳಿಗೆ ರಿಂಗ್ ಮುಂತಾದ ತರಹೇವಾರಿ ಆಭರಣಗಳು ಹುಡುಗರ ಫ್ಯಾಷನ್ ಮಂತ್ರವನ್ನು ಹೆಚ್ಚಿಸಿವೆ.

ಹಿಂದೂಗಳಲ್ಲಿ ಪುಟ್ಟ ಮಕ್ಕಳಿಗೆ ಕಿವಿ ಚುಚ್ಚಿ ಚಿನ್ನ, ಬೆಳ್ಳಿಯ ಓಲೆ, ಗುಂಡು ತೊಡಿಸುವುದು ಸಾಮಾನ್ಯ. ಅವರು ಬೆಳೆಯುತ್ತ ಅವುಗಳನ್ನು ತೆಗೆಯುತ್ತಾರೆ, ಕ್ರಮೇಣ ಆ ಜಾಗಕ್ಕೆ ಯುವಕರು ಫ್ಯಾಶನ್ ಹೆಸರಿನಲ್ಲಿ ಕಿವಿಗೆ ಓಲೆ ಹಾಕಿಕೊಳ್ಳಲು ಪ್ರಾರಂಭಿಸಿರುವುದು ಈಗನ ಟ್ರೆಂಡ್‌.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT