ಬಾಲಕಿ ಮೇಲೆ ಅತ್ಯಾಚಾರ: ಆರೋಪಿಗೆ 10 ವರ್ಷ ಶಿಕ್ಷೆ

7

ಬಾಲಕಿ ಮೇಲೆ ಅತ್ಯಾಚಾರ: ಆರೋಪಿಗೆ 10 ವರ್ಷ ಶಿಕ್ಷೆ

Published:
Updated:
Deccan Herald

ಚಾಮರಾಜನಗರ: ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪಿಗೆ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಗುಂಡ್ಲುಪೇಟೆ ತಾಲ್ಲೂಕಿನ ತೊಂಡವಾಡಿ ಗ್ರಾಮದ ವೆಂಕಟೇಶ್‌ (23) ಶಿಕ್ಷೆಗೆ ಗುರಿಯಾದವನು.

10 ವರ್ಷಗಳ ಶಿಕ್ಷೆಯ ಜೊತೆಗೆ ₹ 5 ಸಾವಿರ ದಂಡ ವಿಧಿಸಿರುವ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಜಿ.ಬಸವರಾಜ ಅವರು, ದಂಡ ಪಾವತಿಸದಿದ್ದರೆ ಮತ್ತೆ 2 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಬೇಕು ಎಂದು ಆದೇಶದಲ್ಲಿ ಹೇಳಿದ್ದಾರೆ.

ಘಟನೆಯ ವಿವರ: ತೊಂಡವಾಡಿ ಗ್ರಾಮದ ವೆಂಕಟೇಶ್‌ ಹಾಗೂ ಅದೇ ಗ್ರಾಮದ ಬಾಲಕಿ ಪ್ರೀತಿಸುತ್ತಿದ್ದರು. ಮದುವೆಯಾಗುವುದಾಗಿ ಆಕೆಯನ್ನು ನಂಬಿಸಿದ್ದ ವೆಂಕಟೇಶ್‌, ಅವನ ಚಿಕ್ಕಮ್ಮ ಪುಟ್ಟಮ್ಮ ಎಂಬುವವರ ಮನೆಯಲ್ಲಿ ಅತ್ಯಾಚಾರ ಎಸಗಿದ್ದ. 7 ತಿಂಗಳ ಗರ್ಭಿಣಿಯಾಗಿದ್ದ ಬಾಲಕಿ, ವೆಂಕಟೇಶನ ತಂದೆ ತಾಯಿಗೆ ಈ ವಿಷಯ ತಿಳಿಸಿದಾಗ ಏನೂ ಪ್ರಯೋಜನವಾಗದೇ ಇದ್ದುದರಿಂದ, ನೇರವಾಗಿ ವೆಂಕಟೇಶನ ಬಳಿ ಮದುವೆಯಾಗುವಂತೆ ಕೇಳಿಕೊಂಡಿದ್ದಳು. ಆಗ, ತನಗೆ ವರ್ಷದ ಹಿಂದೆಯೇ ಮದುವೆಯಾಗಿದೆ ಎಂದು ಆತ ಹೇಳಿದ್ದ.

ಆ ನಂತರ, 2015ರ ಏಪ್ರಿಲ್‌ 25 ರಂದು ಗುಂಡ್ಲುಪೇಟೆ ತಾಲ್ಲೂಕಿನ ಬೇಗೂರು ಠಾಣೆಯಲ್ಲಿ ದೂರು ನೀಡಿದ್ದ ಬಾಲಕಿ ‘ ‘ನನ್ನನ್ನು ಮದುವೆಯಾಗಿ ನಂಬಿಸಿದ್ದ ವೆಂಕಟೇಶ್‌ ದೈಹಿಕ ಸಂಪರ್ಕ ನಡೆಸಿ ಮೋಸ ಮಾಡಿದ್ದಾನೆ’ ಎಂದು ಆರೋಪಿಸಿದ್ದರು.

ವೆಂಕಟೇಶ್‌ ವಿರುದ್ಧ ಪೊಲೀಸರು ಪೋಕ್ಸೊ ಅಡಿ ದೂರು ದಾಖಲಿಸಿದ್ದರು.  ವಿಚಾರಣೆಯ ಅವಧಿಯಲ್ಲಿ ಬಾಲಕಿ ಗಂಡು ಮಗುವಿಗೆ ಜನ್ಮವನ್ನೂ ನೀಡಿದ್ದಳು.

ಸರ್ಕಾರದ ಪರವಾಗಿ ಸರ್ಕಾರಿ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಯೋಗೇಶ್‌ ಅವರು ವಾದ ಮಾಡಿದ್ದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !