ಶುಕ್ರವಾರ, ಡಿಸೆಂಬರ್ 4, 2020
24 °C

ರಿಯಲ್‌ ಎಸ್ಟೇಟ್‌ಗೆ ಗ್ರಾಹಕ ರಕ್ಷಣಾ ಕಾಯ್ದೆಯೂ ಅನ್ವಯ: ‘ಸುಪ್ರೀಂ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ರಿಯಲ್ ಎಸ್ಟೇಟ್ ನಿಯಂತ್ರಣ ಮತ್ತು ಅಭಿವೃದ್ಧಿಯ ಕಾಯ್ದೆಯ (ರೇರಾ) ಜತೆಗೆ, ಫ್ಲ್ಯಾಟ್‌ ಖರೀದಿದಾರರು ಸೇವೆಯಲ್ಲಿನ ಲೋಪಗಳ ವಿರುದ್ಧ ಗ್ರಾಹಕ ರಕ್ಷಣಾ ಕಾಯ್ದೆ ಅಡಿ ಪರಿಹಾರ ಪಡೆಯಬಹುದು ಎಂದು ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ನೀಡಿದೆ.

‘ಫ್ಲ್ಯಾಟ್‌ ನೀಡಿಕೆಯಲ್ಲಿ ವಿಳಂಬ ಆಗುತ್ತಿರುವ ಕಾರಣ, ಗ್ರಾಹಕರು ಪಾವತಿಸಿರುವ ಹಣ ಮತ್ತು ₹50,000 ವೆಚ್ಚವನ್ನು ಹಿಂತಿರುಗಿಸಿ’ ಎಂದು ರಾಷ್ಟ್ರೀಯ ಗ್ರಾಹಕವ್ಯಾಜ್ಯಗಳ ಪರಿಹಾರ ಆಯೋಗ ನೀಡಿದ್ದ ನಿರ್ದೇಶನದ ವಿರುದ್ಧ ಇಂಪೀರಿಯಾ ಸ್ಟ್ರಕ್ಚರ್ಸ್‌ ಲಿಮಿಟೆಡ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಈ ತೀರ್ಪು ನೀಡಿದೆ.

‘ಈ ಪ್ರಾಜೆಕ್ಟ್‌ ಅನ್ನು ರೇರಾ ಅಡಿ ನೋಂದಣಿ ಮಾಡಲಾಗಿದೆ. ಹೀಗಾಗಿ ಬೇರೆ ಕಾಯ್ದೆ ಅಡಿ ಸಲ್ಲಿಸಲಾದ ಅರ್ಜಿಗಳನ್ನು ಮಾನ್ಯಮಾಡಬಾರದು’ ಎಂಬುದು ಇಂಪೀರಿಯಾ ಸ್ಟ್ರಕ್ಚರ್ಸ್‌ ಲಿಮಿಟೆಡ್‌ನ ವಾದವಾಗಿತ್ತು. ಈ ವಾದವನ್ನು ಸುಪ್ರೀಂ ಕೋರ್ಟ್‌ ತಿರಸ್ಕರಿಸಿದೆ.

‘ಗ್ರಾಹಕ ರಕ್ಷಣಾ ಕಾಯ್ದೆ ಅಡಿ ಕಾರ್ಯನಿರ್ವಹಿಸುತ್ತಿರುವ ಯಾವುದೇ ಆಯೋಗ ಅಥವಾ ಮಂಡಳಿ ರಿಯಲ್ ಎಸ್ಟೇಟ್‌ಗೆ ಸಂಬಂಧಿಸಿದ ಅರ್ಜಿಯನ್ನು ಮಾನ್ಯ
ಮಾಡಬಾರದು ಎಂದು ರೇರಾ ಕಾಯ್ದೆಯ 79ನೇ ಸೆಕ್ಷನ್‌ ಹೇಳುವುದಿಲ್ಲ. ಗ್ರಾಹಕನು, ರೇರಾ ಕಾಯ್ದೆ ಅಡಿ ಮೊಕದ್ದಮೆ ಹೂಡಲು ಅಥವಾ ಗ್ರಾಹಕ ರಕ್ಷಣಾ ಕಾಯ್ದೆ ಅಡಿ ಮೊಕದ್ದಮೆ ಹೂಡಲು ಅವಕಾಶ ಇರಲಿ ಎಂಬ ಸಂಸತ್ತಿನ ಉದ್ದೇಶ ರೇರಾ ಕಾಯ್ದೆಯಲ್ಲಿ ಸ್ಪಷ್ಟವಾಗಿ ಕಾಣುತ್ತದೆ’ ಎಂದು ನ್ಯಾಯಮೂರ್ತಿಗಳಾದ ಯು.ಯು.ಲಲಿತ್ ಮತ್ತು ವಿನೀತ್ ಸರಣ್ ಅವರಿದ್ದ ಪೀಠವು ಹೇಳಿದೆ.

***

ರೆರಾ ಅಡಿ ನೋಂದಣಿಯಾದ ಪ್ರಾಜೆಕ್ಟ್‌ಗಳಿಗೆ ಸಂಬಂಧಿಸಿದ ಅರ್ಜಿಗಳು ಸಿವಿಲ್ ನ್ಯಾಯಾಲಯದ ವ್ಯಾಪ್ತಿಗೆ ಬರುವುದಿಲ್ಲ ಎಂದಷ್ಟೇ ರೆರಾ ಕಾಯ್ದೆಯ 79ನೇ ಸೆಕ್ಷನ್ ಹೇಳುತ್ತದೆ

- ಸುಪ್ರೀಂ ಕೋರ್ಟ್‌ ಪೀಠ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು